Showing posts with label ಎಂತು ಮರುಳಾದೆ ನಾನೆಂತು ಮರುಳಾದೆ narahari. Show all posts
Showing posts with label ಎಂತು ಮರುಳಾದೆ ನಾನೆಂತು ಮರುಳಾದೆ narahari. Show all posts

Friday, 27 December 2019

ಎಂತು ಮರುಳಾದೆ ನಾನೆಂತು ಮರುಳಾದೆ ankita narahari

writer ನರಹರಿ ತೀರ್ಥರು
ರಾಗ : ಆನಂದಭೈರವಿ  ತಾಳ : ಆದಿ

ಎಂತು ಮರುಳಾದೆ ನಾನೆಂತು ಮರುಳಾದೆ  ||ಪ||

ಎಂತು ಮರುಳಾದೆ ಭವದೊಳು ಬಳಲಿದೆ
ಸಂತತ ಪೊರೆ ರಘುಕುಲತಿಲಕ    ||ಅ.ಪ||

ಮಾತಿನಲ್ಲಿ ಹರಿದಾಸನ
ನೀತಿಯಲ್ಲಿ ಪ್ರಭುದಾಸತನ
ಪ್ರೀತಿ ಧನಾದಿ ವಿಷಯದಲ್ಲಿ ನಿ
ರ್ಭೀತಿ ದೈವ ಗುರು ದ್ರೋಹದಲಿ    ||೧||

ಏಕಾಂತದಲ್ಲಿ ಧನದ ಗೋಷ್ಠಿ
ಲೋಕಾಂತದಿ ವೈರಾಗ್ಯದ ಗೋಷ್ಠಿ
ಶ್ರೀಕಾಂತನ ಸೇವೆಗೆ ಅನುಮಾನ
ಭೂಕಾಂತನ ಸೇವೆಗೆ ಸುಮ್ಮಾನ    ||೨||

ಧರ್ಮಕ್ಕೆ ಒಂದು ಕಾಸು ಆ
ಧರ್ಮಕ್ಕೆ ಸಾವಿರಾರು ಹೊನ್ನು
ಧರ್ಮ ಮಾಡಲು ಬೇಸರಿಕೆ ಆ
ಧರ್ಮಮಾಡಲು ಚಚ್ಚರಿಕೆ     ||೩||

ಡೊಂಬನಂತೆ ಬಯಲಿಗೆ ಹರಹಿ
ಡಂಭತನಕೆ ಕರ್ಮವ ಮಾಡಿ
ಅಂಬುಜನಾಭಗೆ ದೂರಾಗಿ
ಕುಂಭೀಪಾತಕಕೆ ಗುರಿಯಾದೆ     ||೪||

ಸತಿಯರ ಬೈದರೆ ನಾ ಬೈಯ್ವೆ
ಶ್ರೀಪತಿಯ ಬೈದರೆ
ಕೇಳುತ ನಗುವೆ
ಮತಿಗೆಟ್ಟು ವಿಷಯಲಂಪಟನಾಗಿ    ||೫||

ಯಾರಿಗಾಗಿ ಧಾವತಿ ಪಡುವೆ ಇ
ನ್ನಾರಿಗೆ ಒಡವೆಯ ಬಚ್ಚಿಡುವೆ
ನಾರಿ ಪುತ್ರ ಮಿತ್ರಾದಿಗಳು
ಯಾರೂ ಬಾರರೊ ಸಂಗಡದಿ    ||೬||

ಭಜಿಸು ಬ್ರಹ್ಮಾದಿ ವಂದಿತ ಹರಿಯ
ತ್ಯಜಿಸು ಕಾಮಾದಿ ದುರ್ವಿಷಯ
ಸುಜನವಂದಿತನಾದ ನರಹರಿಯ
ಭಜಿಸು ಶ್ರೀಶ ಶ್ರೀ ರಘುಪತಿಯ    ||೭||
*********

ಶ್ರೀನರಹರಿ ತೀರ್ಥರ  ಕೃತಿ

ಎಂತು ಮರುಳಾದೆ | ನಾ| ನೆಂತು ಮರುಳಾದೆ
ಎಂತು ಮರುಳಾದೆ | ಭವದೊಳು ಬಳಲಿದೆ| ಸಂತತ ರಘು| ಕುಲತಿಲಕ|

ಮಾತಿನಲ್ಲಿ ಹರಿದಾಸತನ| 
ನೀತಿಯಲ್ಲಿ ಪ್ರಭುದಾಸತನ|
ಪ್ರೀತಿ ಧನಾದಿ ವಿಷಯದಲ್ಲಿ|
|ನಿ|ರ್ಭೀತಿ ದೈವ ಗುರುದ್ರೋಹದಲಿ|

ಏಕಾಂತದಲ್ಲಿ ಧನದ ಗೋಷ್ಠಿ|
ಲೋಕಾಂತದಿ ವೈರಾಗ್ಯದ ಗೋಷ್ಠಿ|
ಶ್ರೀಕಾಂತನ ಸೇವೆಗೆ ಅನುಮಾನ|
ಭೂಕಾಂತನ ಸೇವೆಗೆ ಸುಮ್ಮಾನ|
ಧರ್ಮಕ್ಕೆ ಒಂದು ಕಾಸು ಸಾವಿರ ಹೊನ್ನು
| ಅ|ಧರ್ಮಕ್ಕೆ ಕೋಟಿ ಹೊನ್ನು ಒಂದೇ|
ಕಾಸು ಧರ್ಮ ಮಾಡಲು ಬೇಸರಿಕೆ|
|ಅ|ಧರ್ಮ ಮಾಡಲು ಎಚ್ಚರಿಕೆ|

ಡೊಂಬನಂತೆ ಬಯಲಿಗೆ ಹರಹಿ|
ಡಂಬತನಕೆ ಕರ್ಮವು ಮಾಡಿ |
ಅಂಬುಜನಾಭಗೆ ದೂರಾಗಿ| 
ಕುಂಭೀಪಾಕಕೆ ಗುರಿಯಾದೆ|

ಸತಿಯರ ಬೈದರೆ ನಾ ಬೈಯ್ಯೆ |
ಶ್ರೀಪತಿಯ ಬೈದರೆ ಕೇಳುತ ನಗುವೆ|

ಯಾರಿಗಾಗಿ ಧಾವತಿ ಪಡುವೆ |
|ಇ|ನ್ನಾರಿಗೆ ಒಡವೆಯ ಬಚ್ಚಿಡುವೆ|
ನಾರಿಪುತ್ರ ಮಿತ್ರಾದಿಗಳು|
ಯಾರೂ ಬಾರರೋ ಸಂಗಡದಿ|

ಭಜಿಸು ಬ್ರಹ್ಮಾದಿ ವಂದಿತ ಹರಿಯ|
ತ್ಯಜಿಸು ಕಾಮಾದಿ ದುರ್ವಿಷಯ|
ಸುಜನವಂದಿತನಾದ 
🌹ನರಹರಿ🌹ಯ |
ಭಜಿಸು ಶ್ರೀಶ ಶ್ರೀ ರಘುಪತಿಯ||

*********