ರಾಗ - : ತಾಳ -
ಅರಿಕಿರಲಿ ಅರಿಕಿರಲಿ ಅಬ್ಜನಯನಾ l
ದೊರಕಿದತಿ ಭಾಗ್ಯದೊಳು ಧೊರಿಯ ವೆಂಕಟ ನಿನಗೆ ll ಪ ll
ಬಡವ ನಾನೆಂತೆಂದು ಕಡುದೂರ ನೋಡಿದರು l
ವಡವಿ ವಸ್ತ್ರಾ ವಾಜಿ ಬೇಡೆ ನಿನ್ನಾ l
ದೃಢಭಕುತಿ ಮಾತುರದಿ ಕೊಟ್ಟು ಈ ಕಲಿಯುಗದಿ l
ಕಡೆಹಾಯಿಸೈಯ್ಯಾ ಯೇ ಪೊಡವಿಪತಿ ಯನ್ನೊಬ್ಬಾ ll ೧ ll
ಕೀರ್ತಿ ಪುರುಷನೆ ನಿನ್ನ ವಾರ್ತೆ ಯನಗೆ ಪೇಳಲೂ l
ಪೂರ್ತಿಸದು ಮನಸಿಗೆ ಆರ್ತರೊಡಿಯಾ l
ಧಾರ್ತರಾಷ್ಟ್ರ ಶಕುನಿ ಕಾರ್ತವೀರ್ಯನ ಕೊಂದೆ l
ಪಾರ್ಥಸಖ ಎನ್ನಾ ಪರಿ ಉಕ್ತಿ ಕೇಳಿದು ವೊಂದು ll ೨ ll
ಎರವು ಮಾಡಲಿ ಬ್ಯಾಡ ನರಗುರಿಗಾನೆಂತೆಂದು l
ಅರಿಕೆಯವರಾ ನಿನ್ನ ಆಳೂ ನಾನೂ l
ಧರೆಯೊಳಗೆ ಪರಿ ಶುಭಾವಾರ್ತಿ ಪೊಗಳುತ ಚರಿಪೆ l
ಗಿರಿಯ ವೆಂಕಟ ವರ ಜನಾರ್ದನವಿಟ್ಠಲಾ ll ೩ ll
***