ಒಂದು ಬಾರಿ ಸ್ಮರಣೆ ಸಾಲದೆ ||ಪ.||
ಆನಂದತೀರ್ಥರ ಪೂರ್ಣಪ್ರಜ್ಞರ
ಸರ್ವಜ್ಞರಾಯರ ಮಧ್ವರಾಯರ |ಅ.ಪ|
ಸರ್ವಜ್ಞರಾಯರ ಮಧ್ವರಾಯರ |ಅ.ಪ|
ಹಿಂದನೇಕ ಜನ್ಮಗಳಲಿ ನೊಂದು ಯೋನಿಗಳಲಿ ಬಂದು
ಇಂದಿರೇಶ ಹರಿಯ ಪಾದವ ಹೊಂದಬೇಕೆಂಬುವರಿಗೆ ||೧||
ಪ್ರಕೃತಿ ಬಂಧದಲ್ಲಿ ಸಿಲುಕಿ ಸಕಲ ವಿಷಯಗಳಲಿ ನೊಂದು
ಅಕಳಂಕಚರಿತ ಹರಿಯ ಪಾದಭಾಕುತಿ ಬೇಕೆಂಬುವರಿಗೆ ||೨||
ಆರುಮಂದಿ ವೈರಿಗಳನು ಸೇರಲಿಸದಂತೆ ಜರಿದು
ಧೀರನಾಗಿ ಹರಿಯ ಪಾದವ ಸೇರಬೇಕೆ೦ಬುವರಿಗೆ ||೩||
ಘೋರ ಸಂಸಾರಾಂಬುಧಿಗೆ ಪರಮಜ್ಞಾನವೆಂಬ ಪಾದೆ
ಏರಿ ಮೆಲ್ಲನೆ ಹರಿಯ ಪಾದ ಸೇರಬೇಕೆಂಬುವರಿಗೆ ||೪||
ಹೀನಬುದ್ಧಿಯಿಂದ ಶ್ರೀ ಹಯವದನನ್ನ ಜರಿದು
ತಾನು ಬದುಕರಿಯದಿರಲು ತೋರಿ ಕೊಟ್ಟ ಮಧ್ವಮುನಿಯ ||೫||
***
ರಾಗ : ಪಂತುವರಾಳಿ ತಾಳ : ರೂಪಕ
oMdu bAri smaraNe sAlade ||pa.||
AnaMdatIrthara pUrNapraj~jara sarvaj~jarAyara madhvarAyara ||a.pa.||
hiMdanEka janmagaLali noMdu yOnigaLali baMdu
iMdirESa hariya pAdava hoMdabEkeMbuvarige ||1||
prakRuti baMdhadalli siluki sakala viShayagaLali noMdu
akaLaMkacarita hariya pAdaBAkuti bEkeMbuvarige ||2||
ArumaMdi vairigaLanu sEralisadaMte jaridu
dhIranAgi hariya pAdava sErabEke0buvarige ||3||
GOra saMsArAMbudhige paramaj~jAnaveMba pAde
Eri mellane hariya pAda sErabEkeMbuvarige ||4||
hInabuddhiyiMda SrI hayavadananna jaridu
tAnu badukariyadiralu tOri koTTa madhvamuniya ||5||
***
ಒಂದು ಬಾರಿ ಸ್ಮರಣೆ ಸಾಲದೆ ಆನಂದತೀರ್ಥರ ಪೂರ್ಣಪ್ರಜ್ಞರ
ಸರ್ವಜ್ಞರಾಯರ ಮಧ್ವರಾಯರ||
ಹಿಂದನೇಕ ಜನ್ಮಗಳಲಿ ನೊಂದು ಯೋನಿಯಲ್ಲಿ ಬಂದು
ಇಂದಿರೇಶ ಹರಿಯ ಪಾದವ ಹೊಂದಬೇಕೆಂಬುವರಿಗೆ||
ಪ್ರಕೃತಿ ಬಂಧದಲ್ಲಿ ಸಿಲುಕಿ ಸಕಲ ವಿಷಯಗಳಲಿ ನೊಂದು
ಅಕಳಂಕಚರಿತ ಹರಿಯ ಪಾದಭಕುತಿ ಬೇಕೆಂಬುವರಿಗೆ||
ಆರುಮಂದಿ ವೈರಿಗಳನು ಸೇರಲೀಸದಂತೆ ಜರಿದು
ಧೀರನಾಗಿ ಹರಿಯಪಾದವ ಸೇರಬೇಕೆಂಬುವರಿಗೆ||
ಘೋರ ಸಂಸಾರಾಂಬುಧಿಗೆ ಪರಮ ಜ್ಞಾನವೆಂಬ ವಾಡೆ
ಏರಿ ಮೆಲ್ಲನೆ ಹರಿಯಪಾದ ಸೇರಬೇಕೆಂಬುವರಿಗೆ||
ಹೀನ ಬುದ್ಧಿಯಿಂದ ಶ್ರೀಹಯವದನನ್ನ ಜರಿದು
ತಾನು ಬದುಕರಿಯಂದಿರಲು ತೋರಿ ಕೊಟ್ಟ ಮಧ್ವಮುನಿಯ||
***
Ondu baari smarane salade ||pa.||
Anandatirthara purnapragnara sarvagnarayara madhvarayara ||a.pa.||
Hindaneka janmagalali nomdu yonigalali bandu
Indiresa hariya padava hondabekembuvarige ||1||
Prakruti bandhadalli siluki sakala vishayagalali nondu
Akalankacarita hariya padabakuti bekembuvarige ||2||
Arumandi vairigalanu seralisadante jaridu
Dhiranagi hariya padava serabekembuvarige ||3||
Gora samsarambudhige paramagnanavemba pade
Eri mellane hariya pada serabekembuvarige ||4||
Hinabuddhiyinda sri hayavadananna jaridu
Tanu badukariyadiralu tori kotta madhvamuniya ||5||
***
ಒಂದು ಬಾರಿ ಸ್ಮರಣೆ ಸಾಲದೇ
ಆನಂದ ತೀರ್ಥರ
ಪೂರ್ಣ ಪ್ರಜ್ಞರ
ಸರ್ವಜ್ಞರಾಯರ
ಮಧ್ವರಾಯ
ಹಿಂದನೇಕ ಜನ್ಮಗಳಲಿ
ನೊಂದು ಯೋನಿಗಳಲಿ ಬಂದು
ಇಂದಿರೇಶ ಹರಿಯಪಾದವ
ಹೊಂದಬೇಕು ಎಂಬುವರಿಗೆ
ಆರುಮಂದಿ ವೈರಿಗಳನು
ಸೇರಲೀಸದಂತೆ ಜರಿದು
ಧೀರನಾಗಿ ಹರಿಯಪಾದವ
ಸೇರಬೇಕು ಎಂಬುವರಿಗೆ
ಪ್ರಕೃತಿ ಬಂಧದಲ್ಲಿ ಸಿಲುಕಿ
ಸಕಲ ವಿಷಯಗಳಲಿ ನೊಂದು
ಅಕಳಂಕ ಚರಿತ ಹರಿಯಪಾದದ
ಭಕುತಿ ಬೇಕು ಎಂಬುವರಿಗೆ
ಘೋರ ಸಂಸಾರಾಂಬುಧಿಗೆ
ಪರಮಜ್ಞಾನವೆಂಬ ವಾಡೆ
ಏರಿ ಮೆಲ್ಲನೆ ಹರಿಯ ಪಾದವ
ಸೇರಬೇಕು ಎಂಬುವರಿಗೆ.
ಹೀನ ಬುದ್ದಿಯಿಂದ ಶ್ರೀ ಹಯವದನನ್ನು ಜರಿದು
ತಾನು ಬದುಕಲ ಅರಿಯದಿರಲು
ತೋರಿಕೊಟ್ಟ ಮಧ್ವ ಮುನಿಯ
ಒಂದುಬಾರಿ ಸ್ಮರಣೆ ಸಾಲದೆ
************