Showing posts with label ಶ್ರೀಶನ ಸತಿಯರ ಹಾಸ್ಯವ ಮಾಡುತ ಸೋಸಿಲೆ ಕೋಲಹೊಯ್ದೇವ ramesha. Show all posts
Showing posts with label ಶ್ರೀಶನ ಸತಿಯರ ಹಾಸ್ಯವ ಮಾಡುತ ಸೋಸಿಲೆ ಕೋಲಹೊಯ್ದೇವ ramesha. Show all posts

Wednesday, 4 August 2021

ಶ್ರೀಶನ ಸತಿಯರ ಹಾಸ್ಯವ ಮಾಡುತ ಸೋಸಿಲೆ ಕೋಲಹೊಯ್ದೇವ ankita ramesha

 ..

ಶ್ರೀಶನ ಸತಿಯರ ಹಾಸ್ಯವ ಮಾಡುತ ಸೋಸಿಲೆ ಕೋಲಹೊಯ್ದೇವ ಕೋಲ ಪ.


ಧಿಟ್ಟೆ ನಾನೆಂಬೋದು ಸೃಷ್ಟಿಕರ್ತನೆ ಬಲ್ಲಗಟ್ಯಾಗಿ ನಿನ್ನ ಗುಣಗಳಗಟ್ಯಾಗಿ ನಿನ್ನ ಗುಣಗಳ ವರ್ಣಿಸಲು ಸಿಟ್ಟು ಬಂದಿತು ಸಭೆಯೊಳು1

ಗಂಡನ ಬಳಗವ ಕಂಡರೆ ನಿನಗಾಗದುಲೆಂಡರ ಮನೆಗೆ ನಡೆದ್ಹೋಗಿಲೆಂಡರ ಮನೆಗೆ ನಡೆದ್ಹೋಗಿ ಸೇರಿದ್ದುಪಂಡಿತರು ಕಂಡು ನಗುತಾರೆ 2

ಘಟ್ಯದೆಗಾರಳು ಪೆಟ್ಟಿಗಂಜುವಳಲ್ಲಎಷ್ಟು ಧೈರ್ಯವೆ ಎಲೆನಾರಿಎಷ್ಟು ಧೈರ್ಯವೆ ಎಲೆನಾರಿ ನಿನ್ನ ಕೂಡಕೃಷ್ಣ ಕಡಿ ಬೀಳೋ ತೆರನಂತೆ 3

ಮುದದಿಂದಲೆ ದ್ವಾರಕಾಸದನದೊಳಗ್ಹೋಗಿಕದನವ ಹೂಡಿ ಕೆಡಿಸುವೆಕದನವ ಹೂಡಿ ಕೆಡಿಸುವೆ ನಿನ್ನಗುಣಕೆಮದನನಯ್ಯನೆಂತು ಮನಸೋತ4

ಹಲವು ರಾಯರ ಗೆದ್ದ ಬಲುಧೀರರೆಲ್ಲನಿನ್ನ ಬಲೆಯೊಳು ಬಿದ್ದು ಬಳಲೋರುಬಲೆಯೊಳು ಬಿದ್ದು ಬಳಲೋರು ಇದ ಕಂಡುಬಲರಾಮ ತಾನು ನಗುತಾನ5

ಹರ ಬ್ರಹ್ಮ ಮೊದಲಾದ ಸುರರು ಜರಿದು ನಾರಿಹರಿಯು ಗುಣಪೂರ್ಣ ನೆನುತಲೆಹರಿಯು ಗುಣಪೂರ್ಣ ನೆನುತಲೆ ಮಲ್ಲಿಗೆಸರವ ಹಾಕಿದಿಯೆ ಕೊರಳಿಗೆ 6

ಕೇಳೆ ರುಕ್ಮಿಣಿ ನಿನ್ನ ಭಾಳ ಚಾಪಲ್ಯ ನೋಡಿಹೇಳ ಕೇಳದಲೆ ಹಿರಿಯರಹೇಳ ಕೇಳದಲೆ ಹಿರಿಯರ ಕೃಷ್ಣಯ್ಯಭೋಳೆ ತನದಿಂದ ಮದುವ್ಯಾದ 7

ಗಂಡನ ಎದುರಿಗೆ ಗಂಡುಗಚ್ಚಿಯ ಕಟ್ಟಿಗಂಡಸಿನಂತೆ ಧನುವೆತ್ತಿಗಂಡಸಿನಂತೆ ಧನುವೆತ್ತಿ ಕಾದಿದಬಂಡುಗಾರತಿಯೆನಿನ ತಂಗಿ8

ಅಕ್ಕ ತಂಗಿಯರ ಶೌರ್ಯ ಶಕ್ಯವೆ ವರ್ಣಿಸಲುನಕ್ಕು ನಾರಿ ಸರಿಯವರುನಕ್ಕು ನಾರಿ ಸರಿಯವರು ರಾಮೇಶಗೆತಕ್ಕವರೇನೆ ಮಡದಿಯರು ಕೋಲ9

****