..
kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru
ಶ್ರೀ ಸತ್ಯ ವಿಜಯತೀರ್ಥ ಚರಿತ್ರೆ
ನಮೋ ಸತ್ಯ ವಿಜಯಾರ್ಯ ತೀರ್ಥರೇ
ಸುಮಹ ಕಾರುಣ್ಯದಿಂ ಎನ್ನ ಪಾಪಗಳ
ಮನ್ನಿಸಿ ವಿಮಲ ವಾಙ್ಮನೋಕಾಯದಲಿ ಶ್ರೀ
ರಾಮ ಯದುಪತಿ ಸ್ಮರಣೆ ಇತ್ತು ಪಾಲಿಪುದು ಪ
ಅಶೇಷ ಗುಣಗಣಾಧಾರ ವಿಭು ನಿರ್ದೋಷ
ಹಂಸ ಶ್ರೀಪತಿಯಿಂದುದಿತ ಗುರುಪರಂಪರೆಗೆ
ಬಿಸಜಭವ ಸನಕಾದಿ ದೂರ್ವಾಸ ಮೊದಲಾದ
ವಂಶಜರು ಸರ್ವರಿಗೂ ಶರಣು ಶರಣೆಂಬೆ 1
ಪುರುಷೋತ್ತಮ ತೀರ್ಥ ಅಚ್ಯುತ ಪ್ರೇಕ್ಷರಿಗೂ
ಪರವಾಯು ಅವತಾರಾನಂದ ತೀರ್ಥರಿಗೂ
ಉತ್ಕøಷ್ಠ ಗುರುತಮ ಮಧ್ವ ಆನಂದ ಮುನಿಗಳ
ಕರಕಂಜಭವ ಸರ್ವ ಯತಿಗಳಿಗು ಶರಣು 2
ಪದ್ಮನಾಭ ನರಹರಿ ಮಾಧವ ಅಕ್ಷೋಭ್ಯ
ಅದ್ವಿತೀಯ ಸುಸ್ಪಷ್ಟ ಟೀಕಾಗಳಿತ್ತ
ಮೇಧಾಪ್ರವೀಣ ಜಯತೀರ್ಥಾರ್ಯರಿಗೂ
ವಿದ್ಯಾಧಿರಾಜರಿಗೂ ನಮೋ ನಮೋ ಶರಣು 3
ವಿದ್ಯಾಧಿರಾಜರ ಶಿಷ್ಯರು ಈರ್ವರಲಿ
ಮೊದಲನೆಯವರು ರಾಜೇಂದ್ರ ತೀರ್ಥರಿಗು
ನಂತರ ಕೋವಿದೋತ್ತಮ ಕವೀಂದ್ರರಿಗೂ
ತತ್ವಜ್ಞ ಶಿಷ್ಯವಾಗೀಶ ತೀರ್ಥರಿಗು ಶರಣು 4
ವಾಗೀಶ ತೀರ್ಥರು ಕವೀಂದ್ರ ಕರಜರು
ವಾಗೀಶ ಕರಜರು ರಾಮಚಂದ್ರಾರಾರ್ಯರು
ಈ ಗುರುಗಳಿಗೆ ಈರ್ವರು ಶಿಪ್ಯರು ಇಹರು
ಬಾಗಿ ಶರಣಾದೆ ಈ ಈರ್ವರಿಗೂ 5
ಮೊದಲನೆಯವರು ವಿಭುದೇಂದ್ರತೀರ್ಥಾರ್ಯರು
ವಿದ್ಯಾನಿಧಿ ತೀರ್ಥಾರ್ಯರ ಅನಂತರವು
ವಿದ್ಯಾನಿಧಿ ಸುತರು ರಘುನಾಥತೀರ್ಥರು
ವಂದಿಸಿ ಶರಣೆಂಬೆ ಇವರಿಗು ಇವರ ವಂಶಕ್ಕು 6
ರಘುನಾಥ ಕರಕಮಲಜಾತರಘುವರ್ಯರಿಗೆ
ರಘೂತ್ತಮ ವೇದವ್ಯಾಸ ವಿದ್ಯಾಧೀಶ
ವೇದನಿಧಿ ಸತ್ಯವ್ರತ ಸತ್ಯನಿಧಿ ಸತ್ಯನಾಥ
ಸತ್ಯಭಿನವ ಸತ್ಯಪೂರ್ಣರಿಗೆ ನಮಿಪೆ 7
ಸತ್ಯಾಭಿನವತೀರ್ಥರ ಮಹಿಮೆ ಬಹುಬಹುವು
ಸುತಪೋನಿಧಿಯು ಶ್ರೀನಿವಾಸನ್ನೊಲಿಸಿಕೊಂಡಿಹರು
ಸತ್ಯಪೂರ್ಣರಿಗೆ ಶಿಷ್ಯರು ಈರ್ವರು
ಸತ್ಯವರ್ಯರು ಸತ್ಯವಿಜಯರು ಎಂದು 8
ಸತ್ಯ ಪೂರ್ಣಾರ್ಯರು ತಮ್ಮ ಗುರು ಸತ್ಯಾಭಿನವರ
ಪದ್ಧತಿ ಅನುಸರಿಸಿ ಶ್ರೀಮಠ ಆಳುತ್ತ
ಸತ್ಯವರ್ಯರನ್ನು ಗೋದಾವರಿ ಕ್ಷೇತ್ರ ವಿಜಯ ಮಾಡೆಂದು
ಸತ್ಯವಿಜಯರನ್ನ ಕಳುಹಿದರು ಪೂರ್ವದಿಸೆಗೆ 9
ಸತ್ಯವರ್ಯರು ಗೋದಾವರಿ ಪಂಚವಟಿ ನಾಸಿಕ
ತ್ರಿಯಂಬಕಾದಿ ಕ್ಷೇತ್ರ ಸಮೀಪ ವಿಜಯಮಾಡೆ
ಸತ್ಯವಿಜಯರು ತೋಂಡದೇಶ ಚÉೂೀಳ
ಪಾಂಡ್ಯಾದಿ ನಾಡಲ್ಲಿ ವಿಜಯ ಮಾಡಿದರು 10
ಸತ್ಯಪೂರ್ಣರು ಕರ್ನಾಟಕ ಪ್ರಾಂತ್ಯದಲಿ
ಜಯಶೀಲರಾಗಿ ದಿಗ್ವಿಜಯಮಾಡಿ
ತೋಯಜಾಕ್ಷನಪಾದಐದಿದರು ನಿಯಮೇನ
ಸತ್ಯವಿಜಯರು ಅಲಂಕರಿಸಿದರು ಪೀಠ 11
ಸತ್ಯಾಭಿನವ ಆರ್ಯರ ಸತ್ಯಪೂರ್ಣ ಗುರುಗಳ
ಪದ್ಧತಿಯಲಿ ಸತ್ಯವಿಜಯಾರ್ಯರು
ವೇದಾಂತವಾಖ್ಯಾರ್ಥ ದುರ್ವಾದ ಖಂಡನ
ಅಧಿಕಾರಿಗಳಿಗು ಉಪದೇಶ ಮಾಡಿದರು 12
ಸೇತುಯಾತ್ರೆ ಮಾಡಲು ದಿಗ್ವಿಜಯ ಕ್ರಮದಲಿ
ಬಂದರು ಆರಣಿಗೆ ತೋಂಡದೇಶದಲಿ
ಸಾಧುವೈಷ್ಣವ ವಿಪ್ರ ಆರಣಿ ರಾಜನು
ಸಂತಾನ ವೃದ್ಧಿಗೆ ಕೊರಗುತ್ತಿದ್ದ 13
ಯುಕ್ತಮರ್ಯಾದೆಗಳ ವೈಭವದಿಂದಲಿ
ಸತ್ಯವಿಜಯರಿಗೆ ಮಾಡಿ ದೇವಾರ್ಚನೆ
ಭೂದೇವರಿಗೆ ಭೋಜನಮಾಡಿಸಿದ ರಾಜನು
ವೇದ್ಯವಾಯಿತು ಗುರುಗಳಿಗೆ ರಾಜನ ಕೊರತೆ 14
ಸತ್ಯವಿಜಯತೀರ್ಥಾರ್ಯರ ಗುರುವರ್ಯರು
ಸಪ್ತದಶ ಅಕ್ಷರ ಮಂತ್ರ ಪ್ರತಿಪಾದ್ಯಹರಿದಯೆಯಿಂದ
ಒದಗಿಸುವ ವಂಶವೃದ್ಧಿ ಎಂದು ಅನುಗ್ರಹಿಸಿ
ಪೋದರು ದಿಗ್ವಿಜಯಕೆ ವರವು ಪೂರ್ಣವಾಯಿತು 15
ಸೇತುಯಾತ್ರೆ ದಿಗ್ವಿಜಯ ಪೂರಯಿಸಿ ಆ ಗುರುಗಳು
ಮತ್ತು ಬಂದರು ಆರಣಿ ಕ್ಷೇತ್ರಕ್ಕೆ
ಕೃತಜ್ಞ ಆ ರಾಜನು ಎದುರುಗೊಂಡು ಗುರುಗಳ
ಪಾದದಲಿ ಶಿರವಿಟ್ಟು ಸ್ವಾಗತವನಿತ್ತ 16
ಸಂಸ್ಥಾನ ಮೂರ್ತಿಸ್ಥ ಹರಿಪೂಜಾ ವೈಭವವು
ನಿತ್ಯ ಪ್ರವಚನ ಪಾಠಕೀರ್ತನೆ ಏನೆಂಬೆ
ಸತ್ಯವಿಜಯರನ್ನ ರಾಜ ಅಲ್ಲಿಯೇ ಇರಬೇಕು
ಎಂದು ಕೋರಿ ಒದಗಿಸಿದ ತಕ್ಕ ಸೌಕರ್ಯ 17
ಸತ್ಯವಿಜಯಾರ್ಯರಿಗೆ ದೇಹ ಅಧಾರೂಢ್ಯ
ವೇದ್ಯವಾಯಿತು ಆರಣಿರಾಜನಿಗೆ
ಭಕ್ತಿಶ್ರದ್ಧೆಯಿಂದಲಿ ಉಪಚಾರ ಮಾಡಿದನು
ಮಾಧವಗೆ ಅರ್ಪಿಸುತಕೊಂಡರು ಗುರುಗಳು 18
ಶ್ರೀ ಸತ್ಯವಿಜಯತೀರ್ಥರ ಮಹಿಮೆ ಬಹು ಉಂಟು
ಒಂದು ಮಾತ್ರ ಸ್ಥಾಲಿಪುಲಿಕನ್ಯಾಯದಲಿ
ಈ ದಿವ್ಯ ಸಣ್ಣ ನುಡಿಗಳಲಿ ಪೇಳಿಹುದು
ಮಾಧ್ವಯತಿ ಹರಿದಾಸ ಮಹಿಮೆಗಳಿಗೆ ಅಳವುಂಟೆ 19
ತಮ್ಮ ತರುವಾಯ ಸಂಸ್ಥಾನ ಆಡಳಿತವ
ಶ್ರೀ ಮನೋಹರ ಹರಿ ಪ್ರಿಯರು ಸತ್ಯವರ್ಯ
ಸುಮನೋಹರ ಸತ್ಯಪ್ರಿಯ ತೀರ್ಥನಾಮದಲಿ
ರಮಾರಮಣಸೇವೆಗೆ ವಹಿಸಬೇಕೆಂದು 20
ಭಕ್ತಿಮಾನ್ ಆರಣಿ ರಾಜನಿಗೆ ಹೇಳಿ
ಹಿತದಿ ಅನುಗ್ರಹಿಸಿ ಗುರುವರ್ಯ
ಸತ್ಯವಿಜಯರು ಧ್ಯಾನದಿಂ ಐದಿದರು ಹರಿಪುರ
ಚೈತ್ರ ಕೃಷ್ಣಪುಣ್ಯದಿನ ಏಕಾದಶಿ ದ್ವಾದಶಿಲಿ 21
ಮತ್ತೊಂದು ಅಂಶದಲಿ ಸತ್ಯವಿಜಯ ನಗರಾಖ್ಯ
ಕ್ಷೇತ್ರ ಆರಣಿ ಸಮೀಪ ವೃಂದಾವನದೀ
ಇದ್ದು ಸೇವಿಸುವ ಸುಜನರಿಗೆ ವಾಂಛಿತ
ಒದಗಿಸುತ ಕುಳಿತಿಹರು ಹರಿಧ್ಯಾನ ಪರರು 22
ಸತ್ಯಲೋಕೇಶಪಿತ ಶ್ರೀಪ್ರಸನ್ನ ಶ್ರೀನಿವಾಸ
ಪ್ರಿಯ ಸತ್ಯಾಭಿನವತೀರ್ಥ ಕರಕಂಜ ಜಾತ
ಸತ್ಯಪೂರ್ಣ ಕರ ಪದ್ಮಜಾತ ಸತ್ಯವಿಜಯಾರ್ಯರೇ
ಕಾಯವಾಙ್ಮನದಿ ನಮೋ ಶರಣು ಮಾಂಪಾಹಿ 23
***