Showing posts with label ಶಿರಿರಮಣ ದಯದಿಂದ ಮಂತ್ರಾಘ್ರ್ಯ ಕೊಡುವ pranesha vittala. Show all posts
Showing posts with label ಶಿರಿರಮಣ ದಯದಿಂದ ಮಂತ್ರಾಘ್ರ್ಯ ಕೊಡುವ pranesha vittala. Show all posts

Sunday, 17 November 2019

ಶಿರಿರಮಣ ದಯದಿಂದ ಮಂತ್ರಾಘ್ರ್ಯ ಕೊಡುವ ankita pranesha vittala

by ಪ್ರಾಣೇಶದಾಸರು
ಶಿರಿರಮಣ ದಯದಿಂದ ಮಂತ್ರಾಘ್ರ್ಯ ಕೊಡುವ ಬಗೆ |ಪರಮೇಷ್ಠಿಗೊಲಿದು ಪೇಳಿದನು ಇಂತೂ ಪ

ಅಷ್ಟಾಕ್ಷರದಿ ಮಂತ್ರಾಘ್ರ್ಯy ಸಾಲಗ್ರಾಮ |ವಿಟ್ಟು ಸದ್ ಭಕ್ತಿಯಲಿ ಶಂಖದಿಂದಾ ||ಕೊಟ್ಟವಗೆ ಸಂತುಷ್ಟನಾಗಿ ಎನ್ನಯ ಸದನದೋ- |ಳಿಟ್ಟು ಸಂತೈಸುವೆನು ಬ್ರಹ್ಮ ಕೇಳೂ 1

ಸತ್ಯಭಾಮಾದಿ ಮಿಕ್ಕಾದ ಮಂತ್ರಾಘ್ರ್ಯವನು |ಮತ್ಪಾದ ಜಲದಿಂದ ಪಾತ್ರಿಯಲ್ಲೀ ||ಹಸ್ತದಿಂ ಕೊಡಬೇಕು ಎನ್ನ ಪ್ರೀತಿ ಎಲೊ ಇದು |ಸತ್ಯಲೋಕಾಧಿಪನೆ ಕೇಳು ಮುದದೀ 2

ಎನ್ನ ಮಂತ್ರಾಘ್ರ್ಯ ಹಸ್ತದಲಿ ಪಾತ್ರಿಯೊಳೀಯೆ |ಅನ್ಯಾಯವೆಷ್ಟೆಂದು ಪೇಳಲೀಗಾ ||ವನ್ನಜಾಸನ ಎನಗರಕ್ತವೆರದಂತಹದೊ |ಮುನ್ನವರ ಕ್ಲೇಶಕ್ಕೆಎಣಿಕೆಇಲ್ಲಾ 3

ಅದರಿಂದ ತಿಳಿದು ಸಾಲಗ್ರಾಮವಿಟ್ಟು ಶಂ- |ಖದಲಿ ಕೊಡಬೇಕು ಎನ್ನಘ್ರ್ನಗಳನೂ ||ವಿಧಿಕಾಷ್ಟಗತವಹ್ನಿಮಥಿಸೆ ತೋರ್ವಂತೆ ಸ- |ರ್ವದ ತೋರ್ವೆ ನಾನು ಸಾಲಗ್ರಾಮದೀ 4

ಶ್ರೀ ನಾರಿ ಪ್ರಮುಖ ಮಂತ್ರಾಘ್ರ್ಯ ಶಂಖದಲಿ ಕೊಡೆ |ನಾನೊಪ್ಪೆನವರ ಭಂಗವ ಬಡಿಸುವೇ ||ವಾಣೀಶ ತಿಳಿಯಂದು ಸ್ಮಿತ ವದನದಿಂದ ಶ್ರೀ |ಪ್ರಾಣೇಶ ವಿಠಲ ನಿರೂಪಿಸಿದನೂ 5
*******