Showing posts with label ವ್ಯಾಸರಾಯರ ಸ್ಮರಿಸಿರೋ ankita vijaya vittala VYASARAYARA SMARISIRO VYASARAJA STUTIH. Show all posts
Showing posts with label ವ್ಯಾಸರಾಯರ ಸ್ಮರಿಸಿರೋ ankita vijaya vittala VYASARAYARA SMARISIRO VYASARAJA STUTIH. Show all posts

Thursday 26 December 2019

ವ್ಯಾಸರಾಯರ ಸ್ಮರಿಸಿರೋ ankita vijaya vittala VYASARAYARA SMARISIRO VYASARAJA STUTIH

 ರಾಗ ಸಾರಮತಿ  ರೂಪಕತಾಳ 
Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ 

 ಶ್ರೀ ವ್ಯಾಸರಾಯರ ಸಂಕ್ಷೇಪ ಚರಿತ್ರೆ 

 ವಾರ್ಧಿಕ ಷಟ್ಟದಿ 


ವ್ಯಾಸರಾಯರ ಸ್ಮರಿಸಿರೋ ॥ ಪ ॥
ವ್ಯಾಸರಾಯರ ಸ್ಮರಿಸಿ ಏಸು ಜನ್ಮದ ಪಾಪ ।
ನಾಶವಾಗುವದು ನಿಮ್ಮಾಶೆ ಸಿದ್ಧಿಸುವದು ।
ಲೇಸಾಗಿ ಸುಖಿಸಿ ಆನಂದ ವೈಕುಂಠದಲಿ ।
ವಾಸವಾಗುವದು ನಿಜ ಭಕುತಿಯಲಿ ಬಿಡದೆ ॥ಅ ಪ॥

ಪಿತನಿಂದ ನೊಂದು ರತಿಪತಿ ಪಿತನ ಸ್ಮರಿಸುತ ।
ಪ್ರತಿಬಂಧಕಗಳಪ್ರತಿಯಾಗಿ ಬಂದಿರಲು ।
ಅತಿವೇಗದಿಂದ ಪಾರಂಗತನಾಗಿ ಬಲು ।
ಮತಿವಂತನಾಗಿ ಮುದದೀ ॥
ಕ್ಷಿತಿಯ ಭಾರವ ವೊಹಿಸಿ ಕೃತಭುಜ ಮುನೀಶ್ವರನ ।
ಸ್ತುತಿಸುತಲಿದ್ದು ಮಿತಿಕಾಲ ಹಿಂಗಳದು ।
ಸುತಗೆ ರಾಜ್ಯವನಿತ್ತು ಕೃತಕಾರ್ಯನಾಗಿ ಅ -।
ಚ್ಯುತನ ವರದಿಂದ ಬಂದು ॥ 1 ॥

ಅಲ್ಲಿ ತ್ರಿಣಿನೇತ್ರ ಶ್ರೀವಲ್ಲಭನ ಶ್ರೀಪಾದ ।
ಪಲ್ಲವಾರುಣ ಚಿತ್ತದಲಿ ಪ್ರತಿದಿವಸದಲಿ ।
ನಿಲ್ಲಿಸಿ ನಿಗಮಾರ್ಥದಿಂದ ಪೂಜಿಸುತಿದ್ದು ।
ಬಲ್ಲ ಭಕುತಿಂದ ಸತತ ॥
ಖುಲ್ಲನಲಿ ಪುಟ್ಟಿದ ಪ್ರಲ್ಹಾದ ದೇವನು ।
ಬಲ್ಲಿದಾನಾಗೆಲ್ಲಿ ಸಂಸಾರನುತ್ತರಿಸಿ ।
ಎಲ್ಲ ಕಾಲದಿ ಇರುತಿರಲು ನಾರದಮುನಿ ।
ಮೆಲ್ಲನೇ ನಡೆತಂದನು ॥ 2 ॥

ಬಂದ ನಾರದಗೆ ಪ್ರಲ್ಹಾದದೇವನು ಎರಗಿ ।
ನಿಂದು ಕರಗಳ ಮುಗಿದು ತ್ರಾಹಿ ತ್ರಾಹಿ ಎಂದು ।
ಒಂದೊಂದು ಬಗೆಯಲ್ಲಿ ಕೊಂಡಾಡಿ ಬೆಸಗೊಂಡು ।
ಇಂದು ನಿಮ್ಮಯ ದರುಶನಾ ॥
ಛಂದವಾಯಿತೆನಗೆತ್ತಲಿಂದ ಬಂದಿರಿ ಇತ್ತ ।
ಬಂದ ವಿಚಾರ ಪೇಳೆಂದು ಬಿನ್ನೈಸಲು ।
ವೃಂದಾರಕ ಮುನಿ ನುಡಿದ ಕೃಷ್ಣನ ಮಹಿಮೆ ।
ನಂದದಲಿ ಹಾಹಾ ಎನುತಾ ॥ 3 ॥

ವೃಕೋದರನಿಂದ ನೊಂದು ದೇಹವನು ಬಿಡುವಾಗ ಬಾ - ।
ಲ್ಹಿಕರಾಯನಾಗಿ ಪುಟ್ಟಿದ ಪ್ರಲ್ಹಾದನು ।
ಉಕುತಿಯಿಂದಲಿ ಪೊಗಳಿ ವರವ ಬೇಡಿದನು ವೈ - ।
ದಿಕ ಮಾರ್ಗವನ್ನೇ ಧರಿಸಿ ॥
ಉಕುತಿಯನೇ ಸಾಧಿಸಿ ಕಲಿಯೊಳಗೆ ನಿಮ್ಮ ಪೂ - ।
ಜಕನಾಗಿಪ್ಪೆನೆಂದು ತಲೆವಾಗಲು ।
ಭಕುತಿಗೆ ಮೆಚ್ಚಿ ಸಲೆ ಅಂದ ಮಾತಿಗೆ ಇಂದು ।
ಪ್ರಕಟವಾಯಿತು ಧರೆಯೊಳು ॥ 4 ॥

ದಿಕ್ಕುಗಳಂ ಮರದು ಧಿಗಿಧಿಗನೆ ಚಿಗಿದಾಡುತ್ತ ।
ಉಕ್ಕಿದವು ಕಣ್ಣಿಂದ ಅಶ್ರು ಜಲಧಾರೆ ತಾ -।
ರಕ್ಕಿಯೆಂದದಿ ಪೊಳೆವುತಿರಲು ಮೈಮರೆದು ದೇ - ।
ವಕ್ಕಿನಂದನ ನೆನೆದು ॥
ನಕ್ಕು ಕಿಲಿಕಿಲಿ ರಾಹಸ್ಯಗಳನುಚ್ಚರಿಸುತಾ ।
ತರ್ಕೈಸಿ ತಿಳುಪಿದನು ಮುಂದಣಾಗಮವೆಲ್ಲ ।
ಇಕ್ಕೆಲದಲವರು ಸಾಹ ಕೇಳಲಾ ವೃತ್ತಾಂತ ।
ಅಕ್ಕಟದ್ಭುತವೇನೆಂಬೆ ॥ 5 ॥

ಬನ್ನೂರು ಗ್ರಾಮದಲಿ ಜನಿಸಿದನು ಭೂಸ್ಪರುಶ ।
ಮುನ್ನಿಲ್ಲದೇ ಬೆಳೆದು ಮುನಿ ಸುಬ್ರಾಹ್ಮಣ - ।
ರನ್ನು ಪಾಲಿಸುವ ಪರಮಾನಂದವುಳ್ಳ ।
ಬ್ರಹ್ಮಣ್ಯತೀರ್ಥರ ಕರದಿ ॥
ಚೆನ್ನಾಗಿ ಪೋಷಿಸಿಕೊಂಡು ಉಪನೀತನಾಗಿ ।
ಸನ್ಯಾಸಿ ಪಟ್ಟವನೆ ಧರಿಸಿ ಧರ್ಮದಲಿ ಸ - ।
ತ್ಪುಣ್ಯ ಶ್ರೀಪಾದರಾಯರಲ್ಲಿ ವಿದ್ಯವನೋದಿ ।
ಧನ್ಯ ಕೀರ್ತಿಯಲಿ ಮೆರೆದಾ ॥ 6 ॥

ರಾಯ ಗದ್ದುಗೆನೇರಿ ಅವನಿಗೆ ಬಂದ ಮಹಾ ।
ಕುಹಯೋಗವ ನೂಕಿ ರಾಜ್ಯದೊಳಗೆ ಇದ್ದ ।
ಮಾಯಿಗಳ ಮರ್ದಿಸಿ ಮುದದಿಂದ ಸುವರ್ನ ।
ಛಾಯದಂತೆ ಕಾಂತಿಲೀ ॥
ನ್ಯಾಯಾಮೃತ ತರ್ಕತಾಂಡವ ಚಂದ್ರಿಕೆ ಎಂಬ ।
ನ್ಯಾಯ ಗ್ರಂಥವ ರಚಿಸಿ ದೇಹ ಹಂಬಲ ತ್ಯಜಿಸಿ ।
ಶ್ರೀಯರಸನೊಲಿಸಿ ನಾನಾ ವಿಧದಿ ಪೂಜಿಸಿ ।
ಸ್ಥಾಯವಾದರು ಪೊಂಪದಿ ॥ 7 ॥

ಯಂತ್ರೋದ್ಧಾರಕನ ಪ್ರತಿಷ್ಠಿಸಿ ವಿಜಯೀಂದ್ರ ।
ಸಂತ ವಾದಿರಾಜಗೊಲಿದು ಪುರಂದರ ।
ಇಂತು ಶಿಷ್ಯರನ್ನು ಪಡೆದು ಉಪದೇಶಿಸಿ ।
ಮಂತ್ರ ಸಿದ್ಧಿಯನೆ ಕೊಟ್ಟು ॥
ಭ್ರಾಂತಗೊಳಿಸುವ ಮಹಾ ಅನ್ಯಾಯಮತವೆಂಬ ।
ಕಾಂತಾರ ಪಾವಕನೆ ವ್ಯಾಸಾಬ್ಧಿಯನು ಬಿಗಿದು ।
ಶಾಂತ ನಿಸ್ಸೀಮನೆನಿಸಿ ಯತಿಶಿರೋರನ್ನ ।
ಚಿಂತಿತಾ ಫಲದಾಯಕ ॥ 8 ॥

ಮಧ್ವಮತವೆಂಬ ದುಗ್ಧಾಬ್ಧಿಗೆ ಪೂರ್ಣೇಂದು ।
ಹೃದ್ವನಜದೊಳಗಿರಿಸಿ ಕೃಷ್ಣನ ಪದಾಂಬುಜವ ।
ಚಿದ್ವಾಕ್ಯದಲಿ ನಿಲಿಸಿ ಕಾವ್ಯದಲಿ ಕೊಂಡಾಡಿ ।
ಸದ್ವೀರ ವೈಷ್ಣವರಿಗೆ ॥
ಪದ್ಧತಿಯನು ಪೇಳಿ ತವಕದಿಂದಲಿ ತಾವು ।
ಸದ್ವೈಷ್ಣವ ಲೋಕ ಸಿರಿಮರಳೈದಿದರು ।
ಮಧ್ವವಲ್ಲಭ ನಮ್ಮ ವಿಜಯವಿಠ್ಠಲನ ।
ಪಾದದ್ವಯವ ಭಜಿಸುವವರೂ ಕೇಳಿ ॥ 9 ॥
***

vyAsarAyara smarisirO
vyAsarAyara smarisi Esu janmada pApa
nASavAguvudu nimmASe siddhisuvudu
lEsAgi suKisi Ananda vaikunThadali
vAsavAguvudu nija Bakutiyali biDade ||pa||

pitaninda nondu ratipitana smarisuta
pratibandhakagaLa pratiyAgi bandiralu
ativEgadinda pArangatanAgi
balu mativantanAgi mudadI
kShitiya BArava vohisi kRutaBuja munISvarana
stutisutalliddu mitikAla hingaLadu
sutage rAjyavanittu kRutakAryanAgi
acyutana varadinda baMdu ||1||

alli triNinEtra SrI vallaBana SrIpAda
pallavAruNi cittadalli pratidivasadali
nillisi nigamArthadinda pUjisuttidda balla Bakutinda satata
Kullanali puTTida pralhAda dEvanu
ballidAnAgelli saMsAranuttarisi
ella kAladi irutiralu nArada
muni mellanE naDatandanu||2||

banda nAradage pralhAda dEvanu eragi
nindu kangaLa mugidu trAhi trAhi eMdu
ondondu bageyalli konDADi
besagonDu indu nimmayA daruSanA
ChandavAyitenagettalinda bandiri itta
banda vicAra pELendu binnaisalu
vRundAraka muni kRuShNana mahime
nandadali hAhA enutA ||3||

vRukOdaraninda nondu dEhavanu biDuvAga bA
lhakarAyanAgi huTTida pralhAdanu
ukutiyindali pogaLi varava bEDidanu
vaidika mArgavannE dharisi
ukutiyanE sAdhisi kaliyoLage nimma pU
jakanAgippenendu talevAgalu
Bakutige meccisale anda mAtige
iMdu prakaTavAyitu dhareyoLu ||4||

dikkugaLaM maradu dhigidhigine cigidADutta
ukkidavu kaNNinda aSru jaladhAre tA
Saktiyendadi poLevutiralu
maimaredu dEvaki nandanana nenedu
nakku kilikili rAhasyagaLanuccarisutA
takrkaisi tiLupidanu mundaNAgamavella
ikkeladavalavaru sAha kELalA
vRuttAnta akkaTa adButavEneMbe ||5||

bannUru grAmadali janisidanu BUsvarUpa
munnilladE beLedu muni subrAhmaNa
rannu pAlisuva paramAnandavuLLa brahmaNyatIrthara karadi
cennAgi pOShisikonDu upanItavAgi
sanyAsi paTTavane dharisi dharmadali sa
tpuNya SrIpAdarAyaralli
vidyavanOdi dhanya kIrtiyali meredA ||6||

rAyagaddugenEri avanige banda mahA
kuhuyOgava nUki rAjyadoLage idda
mAyigaLa mardisi mudadinda
suvarNa CAyadante kAntilI
nyAyAmRuta tarka tAMDava chandrike eMba
SrIyarasanolisi nAnA vidhadi pUjisi
sthAyavAdaru poMpadi||7||

yantrOddhArakana pratiShThisi vijayIndra
santa vAdirAjagolidu puraMdara
intu SiShyaranna paDedu upadESisi
mantra siddhiyane koTTu
BrAntagoLisuva mahA anyAya mataveMba
kAntAra pAvakane vyAsAbdhiyanu bigidu
SAnta nissImanenisi yatiSirOranna
chintitA PaladAyaka ||8||

madhvamataveMba dugdhAbdhige pUrNEndu
hRudvanajadoLagirisi kRuShNana padAMbujava
cidvAtyadali nilisi kAvyadali konDADi sadvIra vaiShNavarige
paddhatiyanu pELi tavakadindali tAvu
sadvaiShNava lOka sirimaraLaididaru
madhvavallaBa namma vijayaviThThalana
pAdadvayava BajisuvavarU kELi ||9||
***


ವ್ಯಾಸರಾಯರ ಸ್ಮರಿಸಿರೋ
ವ್ಯಾಸರಾಯರ ಸ್ಮರಿಸಿ ಏಸು ಜನ್ಮದ ಪಾಪ
ನಾಶವಾಗುವುದು ನಿಮ್ಮಾಶೆ ಸಿದ್ಧಿಸುವುದು
ಲೇಸಾಗಿ ಸುಖಿಸಿ ಆನಂದ ವೈಕುಂಠದಲಿ
ವಾಸವಾಗುವುದು ನಿಜ ಭಕುತಿಯಲಿ ಬಿಡದೆ ||pa||

ಪಿತನಿಂದ ನೊಂದು ರತಿಪಿತನ ಸ್ಮರಿಸುತ
ಪ್ರತಿಬಂಧಕಗಳ ಪ್ರತಿಯಾಗಿ ಬಂದಿರಲು
ಅತಿವೇಗದಿಂದ ಪಾರಂಗತನಾಗಿ
ಬಲು ಮತಿವಂತನಾಗಿ ಮುದದೀ
ಕ್ಷಿತಿಯ ಭಾರವ ವೊಹಿಸಿ ಕೃತಭುಜ ಮುನೀಶ್ವರನ
ಸ್ತುತಿಸುತಲ್ಲಿದ್ದು ಮಿತಿಕಾಲ ಹಿಂಗಳದು
ಸುತಗೆ ರಾಜ್ಯವನಿತ್ತು ಕೃತಕಾರ್ಯನಾಗಿ
ಅಚ್ಯುತನ ವರದಿಂದ ಬಂದು ||1||

ಅಲ್ಲಿ ತ್ರಿಣಿನೇತ್ರ ಶ್ರೀ ವಲ್ಲಭನ ಶ್ರೀಪಾದ
ಪಲ್ಲವಾರುಣಿ ಚಿತ್ತದಲ್ಲಿ ಪ್ರತಿದಿವಸದಲಿ
ನಿಲ್ಲಿಸಿ ನಿಗಮಾರ್ಥದಿಂದ ಪೂಜಿಸುತ್ತಿದ್ದ ಬಲ್ಲ ಭಕುತಿಂದ ಸತತ
ಖುಲ್ಲನಲಿ ಪುಟ್ಟಿದ ಪ್ರಲ್ಹಾದ ದೇವನು
ಬಲ್ಲಿದಾನಾಗೆಲ್ಲಿ ಸಂಸಾರನುತ್ತರಿಸಿ
ಎಲ್ಲ ಕಾಲದಿ ಇರುತಿರಲು ನಾರದ
ಮುನಿ ಮೆಲ್ಲನೇ ನಡತಂದನು||2||

ಬಂದ ನಾರದಗೆ ಪ್ರಲ್ಹಾದ ದೇವನು ಎರಗಿ
ನಿಂದು ಕಂಗಳ ಮುಗಿದು ತ್ರಾಹಿ ತ್ರಾಹಿ ಎಂದು
ಒಂದೊಂದು ಬಗೆಯಲ್ಲಿ ಕೊಂಡಾಡಿ
ಬೆಸಗೊಂಡು ಇಂದು ನಿಮ್ಮಯಾ ದರುಶನಾ
ಛಂದವಾಯಿತೆನಗೆತ್ತಲಿಂದ ಬಂದಿರಿ ಇತ್ತ
ಬಂದ ವಿಚಾರ ಪೇಳೆಂದು ಬಿನ್ನೈಸಲು
ವೃಂದಾರಕ ಮುನಿ ಕೃಷ್ಣನ ಮಹಿಮೆ
ನಂದದಲಿ ಹಾಹಾ ಎನುತಾ ||3||

ವೃಕೋದರನಿಂದ ನೊಂದು ದೇಹವನು ಬಿಡುವಾಗ ಬಾ
ಲ್ಹಕರಾಯನಾಗಿ ಹುಟ್ಟಿದ ಪ್ರಲ್ಹಾದನು
ಉಕುತಿಯಿಂದಲಿ ಪೊಗಳಿ ವರವ ಬೇಡಿದನು
ವೈದಿಕ ಮಾರ್ಗವನ್ನೇ ಧರಿಸಿ
ಉಕುತಿಯನೇ ಸಾಧಿಸಿ ಕಲಿಯೊಳಗೆ ನಿಮ್ಮ ಪೂ
ಜಕನಾಗಿಪ್ಪೆನೆಂದು ತಲೆವಾಗಲು
ಭಕುತಿಗೆ ಮೆಚ್ಚಿಸಲೆ ಅಂದ ಮಾತಿಗೆ
ಇಂದು ಪ್ರಕಟವಾಯಿತು ಧರೆಯೊಳು ||4||

ದಿಕ್ಕುಗಳಂ ಮರದು ಧಿಗಿಧಿಗಿನೆ ಚಿಗಿದಾಡುತ್ತ
ಉಕ್ಕಿದವು ಕಣ್ಣಿಂದ ಅಶ್ರು ಜಲಧಾರೆ ತಾ
ಶಕ್ತಿಯೆಂದದಿ ಪೊಳೆವುತಿರಲು
ಮೈಮರೆದು ದೇವಕಿ ನಂದನನ ನೆನೆದು
ನಕ್ಕು ಕಿಲಿಕಿಲಿ ರಾಹಸ್ಯಗಳನುಚ್ಚರಿಸುತಾ
ತಕ್ರ್ಕೈಸಿ ತಿಳುಪಿದನು ಮುಂದಣಾಗಮವೆಲ್ಲ
ಇಕ್ಕೆಲದವಲವರು ಸಾಹ ಕೇಳಲಾ
ವೃತ್ತಾಂತ ಅಕ್ಕಟ ಅದ್ಭುತವೇನೆಂಬೆ ||5||

ಬನ್ನೂರು ಗ್ರಾಮದಲಿ ಜನಿಸಿದನು ಭೂಸ್ವರೂಪ
ಮುನ್ನಿಲ್ಲದೇ ಬೆಳೆದು ಮುನಿ ಸುಬ್ರಾಹ್ಮಣ
ರನ್ನು ಪಾಲಿಸುವ ಪರಮಾನಂದವುಳ್ಳ ಬ್ರಹ್ಮಣ್ಯತೀರ್ಥರ ಕರದಿ
ಚೆನ್ನಾಗಿ ಪೋಷಿಸಿಕೊಂಡು ಉಪನೀತವಾಗಿ
ಸನ್ಯಾಸಿ ಪಟ್ಟವನೆ ಧರಿಸಿ ಧರ್ಮದಲಿ ಸ
ತ್ಪುಣ್ಯ ಶ್ರೀಪಾದರಾಯರಲ್ಲಿ
ವಿದ್ಯವನೋದಿ ಧನ್ಯ ಕೀರ್ತಿಯಲಿ ಮೆರೆದಾ ||6||

ರಾಯಗದ್ದುಗೆನೇರಿ ಅವನಿಗೆ ಬಂದ ಮಹಾ
ಕುಹುಯೋಗವ ನೂಕಿ ರಾಜ್ಯದೊಳಗೆ ಇದ್ದ
ಮಾಯಿಗಳ ಮರ್ದಿಸಿ ಮುದದಿಂದ
ಸುವರ್ಣ ಛಾಯದಂತೆ ಕಾಂತಿಲೀ
ನ್ಯಾಯಾಮೃತ ತರ್ಕ ತಾಂಡವ ಚಂದ್ರಿಕೆ ಎಂಬ
ಶ್ರೀಯರಸನೊಲಿಸಿ ನಾನಾ ವಿಧದಿ ಪೂಜಿಸಿ
ಸ್ಥಾಯವಾದರು ಪೊಂಪದಿ||7||

ಯಂತ್ರೋದ್ಧಾರಕನ ಪ್ರತಿಷ್ಠಿಸಿ ವಿಜಯೀಂದ್ರ
ಸಂತ ವಾದಿರಾಜಗೊಲಿದು ಪುರಂದರ
ಇಂತು ಶಿಷ್ಯರನ್ನ ಪಡೆದು ಉಪದೇಶಿಸಿ
ಮಂತ್ರ ಸಿದ್ಧಿಯನೆ ಕೊಟ್ಟು
ಭ್ರಾಂತಗೊಳಿಸುವ ಮಹಾ ಅನ್ಯಾಯ ಮತವೆಂಬ
ಕಾಂತಾರ ಪಾವಕನೆ ವ್ಯಾಸಾಬ್ಧಿಯನು ಬಿಗಿದು
ಶಾಂತ ನಿಸ್ಸೀಮನೆನಿಸಿ ಯತಿಶಿರೋರನ್ನ
ಚಿಂತಿತಾ ಫಲದಾಯಕ ||8||

ಮಧ್ವಮತವೆಂಬ ದುಗ್ಧಾಬ್ಧಿಗೆ ಪೂರ್ಣೇಂದು
ಹೃದ್ವನಜದೊಳಗಿರಿಸಿ ಕೃಷ್ಣನ ಪದಾಂಬುಜವ
ಚಿದ್ವಾತ್ಯದಲಿ ನಿಲಿಸಿ ಕಾವ್ಯದಲಿ ಕೊಂಡಾಡಿ ಸದ್ವೀರ ವೈಷ್ಣವರಿಗೆ
ಪದ್ಧತಿಯನು ಪೇಳಿ ತವಕದಿಂದಲಿ ತಾವು
ಸದ್ವೈಷ್ಣವ ಲೋಕ ಸಿರಿಮರಳೈದಿದರು
ಮಧ್ವವಲ್ಲಭ ನಮ್ಮ ವಿಜಯವಿಠ್ಠಲನ
ಪಾದದ್ವಯವ ಭಜಿಸುವವರೂ ಕೇಳಿ ||9||
*******