ಕಾಖಂಡಕಿ ಶ್ರೀ ಮಹಿಪತಿರಾಯರು
ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ಗುರುನಾಥ pa
ಏನೆಂದ್ಹೇಳಲಯ್ಯ ನೀವು ಮಾಡಿದುಪಕಾರ ನಾನೇನುತ್ತೀರ್ಣಾದೇನು ಹೀನ ದೀನ ಕಿಂಕರ ನೀನೆ ತ್ರಿಭುವನಕೆಲ್ಲ ಸುಖವಿಡುದಾರ ಮುನಿಜನರ ಮಂದಾರ ಘನ ಸಹಕಾರ 1
ಉಪಕಾರಕ ನೀ ಬಂದ್ಯೊ ಉಪಮೆರಹಿತ ಉಪಾಯವದೋರಲಿಕ್ಕೆ ಕೃಪೆಯುಳ್ಳ ಸಮರ್ಥ ತಾಪತ್ರಯ ಹರಿಸುವ ಶಕ್ತ ನೀನೆ ಶ್ರೀನಾಥ ಈ ಪರಿಮಾಡುವರಿಲ್ಲ ಆಪ ನೀನೆ ಅನಂತ 2
ಸಕಳಕೆ ಸಿಲುಕದ ಸುಖ ನೀಡಿದೆ ಅಯ್ಯ ನೀ ಅಕಳಂಕ ನಿಜರೂಪ ಪ್ರಕಟಿಸಿದ ಅಯ್ಯ ಸುಕಾಲ ಸುಭಿಕ್ಷದಿಂದ ಮಾಡಿದ್ಯೋ ನೀ ದಯ ಅಖಿಳದೊಳು ಮಹಿಪತಿಯ ಪಿಡಿದ್ಯೊ ನೀ ಕೈಯ 3
****