Showing posts with label ಹರಹರ ಮಹಾದೇವ ಮಹಾನುಭಾವಾ ಭವ ಯ್ಯೋಮಕೇಶ vijaya vittala. Show all posts
Showing posts with label ಹರಹರ ಮಹಾದೇವ ಮಹಾನುಭಾವಾ ಭವ ಯ್ಯೋಮಕೇಶ vijaya vittala. Show all posts

Thursday, 17 October 2019

ಹರಹರ ಮಹಾದೇವ ಮಹಾನುಭಾವಾ ಭವ ಯ್ಯೋಮಕೇಶ ankita vijaya vittala

ವಿಜಯದಾಸ
ಹರಹರ ಮಹಾದೇವ ಮಹಾನುಭಾವಾ |
ಭವ ಯ್ಯೋಮಕೇಶ |
ಅಂಧಕ ಸುರರಿಪು ಜಾಣಾ |
ಸುರವರ ಪುರ ಮುರಹರ ಪದವಿನುತಾ ಪ
ಸಂಜೀವ |
ವಿಷ ಕರ್ತುವಾಭರಣ ಜಗದ ಸೂತ್ರಾಣ |
ಎಸೆವ ರುಂಡಮಾಲಾ ಪಾರ್ವತಿಯ ಲೋಲ |
ಪಶುಪತಿ ಪಾವನ್ನ ವರಸುಪ್ರಸನ್ನ |
ಅಸಮಾನಸಮಾ ಕುಸುಮಾಭಿಸಮ |
ನಿಶಕರ ದಿನಕರ ಬಿಸಿ ನಯನ |
ದಶಶಿರ ಪ್ರಸನ್ನ ಭಜಿಪರ 1
ಗುರುಕುಲೋತ್ತ,ಮ ತುಂಗ ವೃಷಭ |
ಸುರನದಿ ಧರ ಧೀರ ಜಗದೋದ್ಧಾರ |
ನಿರಂಜನ ಸುಂದರ ವದನ |
ಕರಿ ಚರ್ಮಾಂಬರ ಶೋಭಾಂತರವಾದನಾ ಭಾ |
ಹರಣ ಚರಾಚರ ಸುರವರ ಡಮುರಗ ತ್ರಿಶೂಲಧರ |
ನರವರ ಶರಭೂತ ಪರಿವಾರ ಭಯಂಕರ |
ದುರಿತ ವಿದೂರಾ 2
ಅಂಬರ ವ್ಯಾಘ್ರಾವಾಸಾ | ಯ್ಯೋಮ |
ಕೇಶ ಸ್ಮಶಾನವಾಸ |
ಭಾಸುರೋನ್ನತ ಲೀಲಾ | ಸುರಮುನಿಪಾಲಾ |
ಚಾಪ ಪಿನಾಕಿ ಚಮುಪಾ |
ಕಾಸೀವಾಸಿ ತೋಷಿಸೆ | ದಾಶರಥಿ ನಾಮತಾರಕ ಉಪದೇಶಿ |
ಕೋಶ ಶ್ರೀ ವಿಜಯವಿಠ್ಠಲ ವೆಂಕಟೇಶನ |
ಪುರಂದರ ದಾಸನ ದಾಸನ ಕ್ಲೇಶವಿನಾಶಾ 3
(ಔ) ಶ್ರೀತುಳಸೀ
*********