Showing posts with label ನರಸಿಂಹ ಪರಿಕಲ್ ನರಸಿಂಹ prasannashreenivasa. Show all posts
Showing posts with label ನರಸಿಂಹ ಪರಿಕಲ್ ನರಸಿಂಹ prasannashreenivasa. Show all posts

Thursday, 5 August 2021

ನರಸಿಂಹ ಪರಿಕಲ್ ನರಸಿಂಹ ankita prasannashreenivasa

 ..

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru

ಪರಿಕಲ್ ನರಸಿಂಹ ಸ್ತೋತ್ರ


ನರಸಿಂಹ ಪರಿಕಲ್ ನರಸಿಂಹ |

ನರಸಿಂಹ ಶರಣು ಲಕ್ಷ್ಮೀಶ

ಗೌರೀಶಾದ್ಯಮರರಿಗೀಶ | ಆಹ |

ಅಮಿತ ಪೌರುಷ ಸ್ವಜನತೇಷ್ಟಪ್ರದನೆ ನಮೋ

ಅಮಲೂರು ಗುಣಗಣಾರ್ಣವ ಜಯ ಜಯತು ಪ


ಸರ್ವೋರು ನಿಜ ಶಕ್ತಿಮಂತ | ಸದಾ

ಸರ್ವತ್ರವ್ಯಾಪ್ತ ಅನಂತ | ಜಗತ್

ಸೃಷ್ಟ್ಯಾದಿಗಳಿಗೇ ನೀ ಕರ್ತ | ವಿಷ್ಣು

ಸರ್ವತೋಮುಖ ಮೃತ್ಯುಹಂತ || ಆಹ ||

ಶ್ರೋತವ್ಯಮಂತವ್ಯ ಧ್ಯಾತವ್ಯವಿಭು ನೀನು

ವ್ಯಕ್ತನಾದಿಯೋ ಸ್ತಂಭದಲಿ ಭೃತ್ಯಗೋಲಿದು 1

ಮೂಲಾಧಾರಾರಭ್ಯಲೂಧ್ರ್ವ | ವಾಗಿ

ತಲೆಯ ಪರ್ಯಂತದಿ ನಿಲುವ | ಬಲು

ಸುಲಲಿತಸ್ತಂಭದಂತಿರುವ | ನಾಡಿ

ಯಲ್ಲಿ ಉರದೇಶದಿ ಪೊಳೆವ ||ಆಹ||

ಜ್ಯೋತಿರ್ಮಯನೆ ಪಾಪತಿಮಿರಾರ್ಕ ನೀ ಎನ್ನ

ಪ್ರತಿಕ್ಷಣ ಪಾಲಿಸೋ ಶ್ರೀಲಕ್ಷ್ಮೀರಮಣ 2

ವಿಧಿ ಭವೇಂದ್ರಾದಿಗಳಿಂದ | ಪ್ರಹ

ಲ್ಲಾದ ಶ್ರೀವ್ಯಾಸಮುನೀಂದ್ರ | ಮಂತ್ರಾ

ಸದ್ಮಸ್ಥ ಶ್ರೀ ರಾಘವೇಂದ್ರ | ದಾಸ

ವೃಂದ ಸುಜನರುಗಳಿಂದ ||ಆಹ ||

ಸೇವಿತ ಪೂಜಿತ ಸ್ತುತ್ಯ ಸಂಭಾವಿತ

ವಿಧಿಪಿತ ಶ್ರೀನೃಹರೇ 'ಪ್ರಸನ್ನ ಶ್ರೀನಿವಾಸ’

||ಪಾಲಿಸೋ.......... 3

***