kruti by vyasa vittala dasaru kallur subbanna dasaru
ಸಂಸಾರವನು ಮಾಡಿ ಸಕಲ ಜನರೂ ಪ
ಕಂಸಾರಿ ಶ್ರೀಕೃಷ್ಣ ಕೈಪಿಡಿದು ಸಲಹುವನು ಅ.ಪ.
ಬುದ್ಧಿಯೆಂದೆಂಬ ಕನ್ನಿಕೆಯ ಮದುವೆಯ ಮಾಡಿಸದ್ಧರ್ಮದಭಿಮಾನದಿಂದ ಬೆಳಸೀ ||ಶುದ್ಧ ಭಕ್ತಿಗಳೆಂಬ ಮಕ್ಕಳನು ಪಡೆದು ಬಹುಅದ್ಭುತ ಭವಾಬ್ಧಿಯನು ದಾಟಿರಯ್ಯಾ 1
ಚಾರು ಸುಜ್ಞಾನವೆಂಬುವ ಮುದ್ದು ಮಗನ್ಹಡೆದುವೈರಾಗ್ಯವೆಂಬ ಭಾಗ್ಯವನೆ ಬೇಡೀ ||ಸಾರ ಹರಿನಾಮಗಳ ರಸ ಪದಾರ್ಥಗಳುಣಿಸಿಕಾರುಣ್ಯದಲಿ ಬೆಳೆಸಿರಯ್ಯ ಮಕ್ಕಳನೂ 2
ಯಮ ನಿಯಮ ಅಷ್ಟಾಂಗ ಅಣಿಮಾದಿಗಳುಕ್ಷಮೆ ದಮಾದಿಗಳೆಂಬ ಬಂಧು ಬಳಗಾ ||ಮಮತೆ ಪೆರ್ಚಿಸಿಕೊಂಡು ಬೀಗತನ ಮೊದಲಾದಅಮರಿಕೆಯ ಸಂಬಂಧವನೆ ಮಾಡಿರಯ್ಯಾ 3
ಶೀಲ ಸನಕಾದಿಗಳು ಮುನಿ ದೇವತಾದಿಗಳುತಾಳಿ ತಮ್ಮೊಳಗೆ ಸಮ ವಿಷಯರಾಗಿ ||ಆಲಂಪಟಗಳ್ಹಚ್ಚಿಕೊಂಡು ಭವನಿಧಿ ದಾಟಿಸಾಲೋಕ್ಯ ಮೊದಲಾದ ಮುಕ್ತಿಗೈದಿದರೂ 4
ಹೊರಗಿದ್ದ ಪದವಿ ಸತಿ ಸುತರು ಭಾಗ್ಯವೆ ನಿಮಗೆಹರಿಯಿತ್ತ ಕಾಲಕ್ಕು ಹೃದಯದೊಳಗೇ ||ಮರೆಯಲಾಗದು ಹಿಂದೆ ಸಂಸಾರದಾ ಬಾಧೆ ದುರಿತಾರಿ ವ್ಯಾಸ ವಿಠ್ಠಲ ಬ್ಯಾಗ ಒಲಿವಾ 5
***