Showing posts with label ಹರಿಕಥಾಮೃತಸಾರ ಸಂಧಿ 13 ankita jagannatha vittala ನಾಮಸ್ಮರಣ ಸಂಧಿ HARIKATHAMRUTASARA SANDHI 13 NAMASMARANA SANDHI. Show all posts
Showing posts with label ಹರಿಕಥಾಮೃತಸಾರ ಸಂಧಿ 13 ankita jagannatha vittala ನಾಮಸ್ಮರಣ ಸಂಧಿ HARIKATHAMRUTASARA SANDHI 13 NAMASMARANA SANDHI. Show all posts

Monday, 18 January 2021

ಹರಿಕಥಾಮೃತಸಾರ ಸಂಧಿ 13 ankita jagannatha vittala ನಾಮಸ್ಮರಣ ಸಂಧಿ HARIKATHAMRUTASARA SANDHI 13 NAMASMARANA SANDHI

  

Audio by Mrs. Nandini Sripad


ರಚನೆ : ಶ್ರೀ ಜಗನ್ನಾಥ ದಾಸರು 
for saahitya click   ಹರಿಕಥಾಮೃತಸಾರ ಸಂಧಿ 1 to 32  


"ಮಕ್ಕಳಾಡಿಸುವಾಗ ಮಡದಿಯೊಳಕ್ಕರದಿ ನಲಿವಾಗ " ,

ಶ್ರೀಜಗನ್ನಾಥದಾಸಾರ್ಯ ವಿರಚಿತ ಹರಿಕಥಾಮೃತಸಾರ , 

 ನಾಮಸ್ಮರಣ ಸಂಧಿ , ರಾಗ ಸಿಂಧುಭೈರವಿ


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು||


ಮಕ್ಕಳಾಡಿಸುವಾಗ ಮಡದಿಯೊಳು ಅಕ್ಕರದಿ ನಗುವಾಗ

ಹಯ ಪಲ್ಲಕ್ಕಿ ಗಜ ಮೊದಲಾದ ವಾಹನಗಳು ಏರಿ ಮೆರೆವಾಗ

ಬಿಕ್ಕುವಾಗ ಆಕಳಿಸುತಲಿ ದೇವಕ್ಕಿ ತನಯನ ಸ್ಮರಿಸುತಿಹ ನರ

ಸಿಕ್ಕ ಯಮದೂತರಿಗೆ ಆವ ಆವಲ್ಲಿ ನೋಡಿದರು||1||


ಸಾರಿತು ಪ್ರವಹಗಳಲ್ಲಿ ದಿವ್ಯಾಂಬರದಿ ಪತ್ರಾದಿಯಲಿ

ಹರುಷಾ ಮರುಷ ವಿಸ್ಮ್ರುತಿಯಂದಲಿ ಆಗಲಿ ಒಮ್ಮೆ ಬಾಯಿ ತೆರೆದು

ಹರಿ ಹರೀ ಹರಿಯೆಂಬ ಎರಡಕ್ಷರ ನುಡಿದ ಮಾತ್ರದಲಿ

ದುರಿತಗಳು ಇರದೇ ಪೋಪವು ತೂಲ ರಾಶಿಯೊಳು ಅನಲ ಪೊಕ್ಕಂತೆ||2||


ಮಲಗುವಾಗಲಿ ಏಳುವಾಗಲಿ ಕುಳಿತು ಮಾತಾಡುತಲಿ

ಮನೆಯೊಳು ಕೆಲಸಗಳ ಮಾಡುತಲಿ ಮೈದೊಳೆವಾಗ ಮೆಲುವಾಗ

ಕಲುಷ ದೂರನ ಸಕಲ ಟಾವಿಲಿ ತಿಳಿಯೆ ತತ್ತನ್ನಾಮ ರೂಪವ ಬಳಿಯಲಿಪ್ಪನು

ಒಂದರೆಕ್ಷಣ ಬಿಟ್ಟಗಲನು ಅವರ||3||


ಆವ ಕುಲದವನು ಆದಡೆ ಏನು ಇನ್ನಾವ ದೇಶದೊಳು ಇದ್ದಡೇನು

ಇನ್ನಾವ ಕರ್ಮವ ಮಾಡಲೇನು ಇನ್ನಾವ ಕಾಲದಲಿ

ಶ್ರೀವರನ ಸರ್ವತ್ರದಲಿ ಸಂಭಾವಿಸುತ ಪೂಜಿಸುತ ಮೋದಿಪ

ಕೋವಿದರಿಗೆ ಉಂಟೇನೋ ಭಯ ದುಃಖಾದಿ ದೋಷಗಳು||4||


ವಾಸುದೇವನ ಗುಣ ಸಮುದ್ರದೊಳು ಈಸಬಲ್ಲವ ಭವ ಸಮುದ್ರ

ಆಯಾಸವಿಲ್ಲದೆ ದಾಟುವನು ಶೀಘ್ರದಲಿ ಜಗದೊಳಗೆ

ಬೇಸರದೆ ದುರ್ವಿಷಯಗಳ ಅಭಿಲಾಷೆಯಲಿ ಬಳಲುವವ

ನಾನಾ ಕ್ಲೇಷಗಳನು ಅನುಭವಿಪ ಭಕ್ತಿ ಸುಮಾರ್ಗ ಕಾಣದಲೇ||5||


ಸ್ನಾನ ಜಪ ದೇವಾರ್ಚನೆಯು ವ್ಯಾಖ್ಯಾನ ಭಾರತ ಮುಖ ಮಹೋಪಪುರಾಣ ಕಥೆಗಳ

ಪೇಳಿ ಕೇಳಿದರೇನು ದಿನದಿನದಿ

ಜ್ಞಾನ ಕರ್ಮ ಇಂದ್ರಿಯಗಳಿಂದ ಏನೇನು ಮಾಡುವ ಕರ್ಮಗಳು

ಲಕ್ಷ್ಮೀ ನಿವಾಸನ ಪೂಜೆಯೆಂದು ಅರ್ಪಿಸದ ಮಾನವನು||6||


ದೇವ ಗಂಗೆಯೊಳು ಉಳ್ಳವಗೆ ದುರಿತ ಅವಳಿಗಳು ಉಂಟೇ ವಿಚಾರಿಸೆ

ಪಾವುಗಳ ಭಯವುಂಟೆ ವಿಹಗಾಧಿಪನ ಮಂದಿರದಿ

ಜೀವ ಕರ್ತೃತ್ವವನು ಮರೆದು ಪರಾವರೇಶನೆ ಕರ್ತೃ ಎಂದರಿದು

ಆವ ಕರ್ಮವ ಮಾಡಿದರು ಲೆಪಿಸವು ಕರ್ಮಗಳು||7||


ಏನು ಮಾಡುವ ಪುಣ್ಯ ಪಾಪಗಳು ಆಣೆ ಮಾಡುವೆನೆಂಬ ಅಧಮ

ಹೀನ ಕರ್ಮಕೆ ಪಾತ್ರ ನಾ ಪುಣ್ಯಕ್ಕೆ ಹರಿಯೆಂಬ ಮಾನವನು ಮಧ್ಯಮನು

ದ್ವಂದ್ವಕೆ ಶ್ರೀನಿವಾಸನೆ ಕರ್ತೃವೆಂದು

ಸದಾನುರಾಗದಿ ನೆನೆದು ಸುಖಿಸುವರೇ ನರೋತ್ತಮರು||8||


ಈ ಉಪಾಸನೆಗೈವರು ಇಳೆಯೊಳು ದೇವತೆಗಳು ಅಲ್ಲದಲೇ ನರರಲ್ಲ

ಆವ ಬಗೆಯಿಂದಾದರು ಅವರ ಅರ್ಚನೆಯು ಹರಿಪೂಜೆ

ಕೇವಲ ಪ್ರತಿಮೆಗಳು ಎನಿಪರು ರಮಾ ವಿನೋದಗೆ

ಇವರ ಅನುಗ್ರಹವೇ ವರಾನುಗ್ರಹವೆನಿಸುವುದು ಮುಕ್ತಿ ಯೋಗ್ಯರಿಗೆ||9||

ತನುವೆ ನಾನೆಂಬುವೆನು ಸತಿ ಸುತ ಮನೆ ಧನಾದಿಗಳು ಎನ್ನದೆಂಬುವ

ದ್ಯುನದಿ ಮೊದಲಾದ ಉದಕಗಳೆ ಸತ್ ತೀರ್ಥವು ಎಂಬುವನು

ಅನಲ ಲೋಹಾದಿ ಪ್ರತೀಕ ಅರ್ಚನವೆ ದೇವರ ಪೂಜೆ

ಸುಜನರ ಮನುಜರು ಅಹುದು ಎಂಬುವನು ಗೋಖರನೆನಿಪ ಬುಧರಿಂದ||10||


ಅನಲ ಸೋಮಾರ್ಕ ಇಂದು ತಾರ ಅವನಿ ಸುರಾಪಗ ಮುಖ್ಯ ತೀರ್ಥಗಳು

ಅನಿಲ ಗಗನ ಮನಾಡಿ ಇಂದ್ರಿಯಗಳಿಗಭಿಮಾನಿ ಎನಿಪ ಸುರರು

ವಿಪಶ್ಚಿತರ ಸನ್ಮನದಿ ಭಜಿಸದೆಯಿಪ್ಪರನ

ಪಾವನವ ಮಾಡರು ತಮ್ಮ ಪೂಜೆಯ ಮಾಡಿದರು ಸರಿಯೇ||11||


ಕೆಂಡ ಕಾಣದೆ ಮುಟ್ಟಿದರು ಸರಿಕಂಡು ಮುಟ್ಟಲು ದಹಿಸದೆ ಇಪ್ಪುದೆ

ಪುಂಡರೀಕ ದಳಾಯತಾಕ್ಷನ ವಿಮಲ ಪದ ಪದ್ಮ

ಬಂಡುಣಿಗಳು ಎಂದೆನಿಪ ಭಕ್ತರ ಹಿಂಡು ನೋಡಿದ ಮಾತ್ರದಲಿ

ತನುದಿಂಡುಗೆಡಹಿದ ನರನ ಪಾವನ ಮಾಳ್ಪರು ಆ ಕ್ಷಣದಿ||12||


ಈ ನಿಮಿತ್ತ ಪುನಃ ಪುನಃ ಸುಜ್ಞಾನಿಗಳ ಸಹವಾಸ ಮಾಡು

ಕುಮಾನವರ ಕೂಡಿ ಆಡದಿರು ಲೌಕಿಕಕೆ ಮರುಳಾಗಿ

ವೈನತೇಯ ಅಂಸಗನ ಸರ್ವ ಸ್ಥಾನದಲಿ ತನ್ನಾಮ ರೂಪವ ಧೇನಿಸುತ ಸಂಚರಿಸು

ಇತರ ಆಲೋಚನೆಯ ಬಿಟ್ಟು||13||


ಈ ನಳಿನಜಾಂಡದೊಳು ಸರ್ವ ಪ್ರಾಣಿಗಳೊಳಗಿದ್ದು ಅನವರತ

ವಿಜ್ಞಾನಮಯ ವ್ಯಾಪಾರಗಳ ಮಾಡುವನು ತಿಳಿಸದಲೆ

ಏನು ಕಾಣದೆ ಸಕಲ ಕರ್ಮಗಳು ಆನೆ ಮಾಡುವೆನೆಂಬ ನರನು

ಕುಯೋನಿ ಐದುವ ಕರ್ತೃ ಹರಿ ಎಂದವನೇ ಮುಕ್ತನಹ||14||


ಕಲಿಮಲಾಪಹಳು ಎನಿಸುತಿಹ ಬಾಂಬೊಳೆಯೊಳಗೆ ಸಂಚರಿಸಿ ಬದುಕುವ

ಜಲಚರ ಪ್ರಾಣಿಗಳು ಬಲ್ಲವೆ ತೀರ್ಥ ಮಹಿಮೆಯನು

ಹಲವು ಬಗೆಯಲಿ ಹರಿಯ ಕರುಣಾ ಬಲದಿ ಬಲ್ಲಿದರು ಆದ

ಬ್ರಹ್ಮಾನಿಲ ವಿಪ ಈಶಾದಿ ಅಮರರು ಅರಿಯರು ಅನಂತನ ಅಮಲ ಗುಣ||15||


ಶ್ರೀಲಕುಮಿ ವಲ್ಲಭನು ಹೃತ್ಕೀಲಾಲಜದೊಳಿದ್ದು ಅಖಿಳ ಚೇತನ ಜಾಲವನು ಮೋಹಿಸುವ

ತ್ರಿಗುಣದಿ ಬದ್ಧರನು ಮಾಡಿ

ಸ್ಥೂಲ ಕರ್ಮದಿ ರತರ ಮಾಡಿ ಸ್ವಲೀಲೆಗಳ ತಿಳಿಸದಲೆ

ಭವಾದಿ ಕುಲಾಲ ಚಕ್ರದ ತೆರದಿ ತಿರುಗಿಸುತಿಹನು ಮಾನವರ||16||


ವೇದ ಶಾಸ್ತ್ರ ವಿಚಾರಗೈದು ನಿಷೇಧ ಕರ್ಮವ ತೊರೆದು ನಿತ್ಯದಿ

ಸಾಧು ಕರ್ಮವ ಮಾಳ್ಪರಿಗೆ ಸ್ವರ್ಗಾದಿ ಸುಖವ ಈವ

ಐದಿಸುವ ಪಾಪಿಅಗಲ ನಿರಯವ ಖೇದ ಮೋದ ಮನುಷ್ಯರಿಗೆ

ದುರ್ವಾದಿಗಳಿಗೆ ಅಂಧಂತಮದಿ ಮಹಾ ದುಃಖಗಳನು ಉಣಿಪ||17||


ನಿರ್ಗುಣ ಉಪಾಸಕಗೆ ಗುಣ ಸಂಸರ್ಗ ದೋಷಗಳು ಈಯದಲೆ

ಅಪವರ್ಗದಲಿ ಸುಖವಿತ್ತು ಪಾಲಿಸುವನು ಕೃಪಾಸಾಂದ್ರ

ದುರ್ಗಮನು ಎಂದೆನಿಪ ತ್ರೈವಿಧ್ಯರ್ಗೆ ತ್ರಿಗುಣಾತೀತ

ಸಂತತ ಸ್ವರ್ಗ ಭೂ ನರಕದಲಿ ಸಂಚಾರವನೆ ಮಾಡಿಸುವ||18||


ಮೂವರೊಳಗಿದ್ದರು ಸರಿಯೆ ಸುಖ ನೋವುಗಳು ಸಂಬಂಧವಾಗವು

ಪಾವನಕೆ ಪಾವನ ಪರಾತ್ಪರ ಪೂರ್ಣ ಸುಖವನದಿ

ಈ ವನರುಹ ಭವಾಂಡದೊಳು ಸ್ವ ಕಳೇವರ ತದಾಕಾರ ಮಾಡಿ ಪರಾವರೇಶ

ಚರಾಚರಾತ್ಮಕ ಲೋಕಗಳ ಪೊರೆವ||19||


ಈ ನಿಮಿತ್ತ ನಿರಂತರ ಸ್ವಾಧೀನ ಕರ್ತೃತ್ವವನು ಮರೆದು

ಏನೇನು ಮಾಡುವುದು ಎಲ್ಲ ಹರಿ ಒಳಹೊರಗೆ ನೆಲೆಸಿದ್ದು ತಾನೇ ಮಾಡುವೆನೆಂದು

ಮದ್ದಾನೆಯಂದದಿ ಸಂಚರಿಸು

ಪವಮಾನ ವಂದಿತ ಒಂದರೆಕ್ಷಣ ಬಿಟ್ಟಗಲ ನಿನ್ನ||20||


ಹಲವು ಕರ್ಮವ ಮಾಡಿ ದೇಹವ ಬಳಲಿಸದೆ ದಿನದಿನದಿ ಹೃದಯ ಕಮಲ ಸದನದಿ

ವಿರಾಜಿಸುವ ಹರಿ ಮೂರ್ತಿಯನೆ ಭಜಿಸು

ತಿಳಿಯದೆ ಈ ಪೂಜಾ ಪ್ರಕರಣವ ಫಲ ಸುಪುಷ್ಪ ಅಗ್ರೋದಕ

ಶ್ರೀ ತುಳಸಿಗಳನು ಅರ್ಪಿಸಲು ಒಪ್ಪನು ವಾಸುದೇವ ಸದಾ||21||


ಧರಣಿ ನಾರಾಯಣನು ಉದಕದಿ ತುರ್ಯ ನಾಮಕ ಅಗ್ನಿಯೊಳು ಸಂಕರುಷಣ ಆಹ್ವಯ

ವಾಯುಗನು ಪ್ರದ್ಯುಮ್ನ ಅನಿರುದ್ಧ ಇರುತಿಹನು ಆಕಾಶದೊಳು

ಮೂರೆರೆಡು ರೂಪವ ಧರಿಸಿ ಭೂತಗ ಕರೆಸುವನು

ತನ್ನಾಮ ರೂಪದಿ ಪ್ರಜರ ಸಂತೈಪ||22||


ಘನಗತನು ತಾನಾಗಿ ನಾರಾಯಣನು ತನ್ನಾಮದಲಿ ಕರೆಸುತ

ವನದ ಗರ್ಭ ಉದಕದಿ ನೆಲೆಸಿಹ ವಾಸುದೇವಾಖ್ಯ

ಧ್ವನಿ ಸಿಡಿಲು ಸಂಕರುಷಣನು ಮಿಂಚಿನೊಳು ಶ್ರೀ ಪ್ರದ್ಯುಮ್ನ

ವೃಷ್ಟಿಯ ಹನಿಗಳೊಳಗೆ ಅನಿರುದ್ಧನಿಪ್ಪನು ವರುಷನೆಂದೆನಿಸಿ||23||


ಗೃಹ ಕುಟುಂಬ ಧನಾದಿಗಳ ಸನ್ನಹಗಳನು ಉಳ್ಳವರಾಗಿ

ವಿಹಿತಾವಿಹಿತ ಧರ್ಮ ಸುಕರ್ಮಗಳ ತಿಳಿಯದಲೆ ನಿತ್ಯದಲಿ

ಅಹರ ಮೈಥುನ ನಿದ್ರೆಗೊಳಗಾಗಿ ಇಹರು ಸರ್ವ ಪ್ರಾಣಿಗಳು

ಹೃದ್ಗುಹ ನಿವಾಸಿಯನು ಅರಿಯದಲೆ ಭವದೊಳಗೆ ಬಳಲುವರು||24||


ಜಡಜ ಸಂಭವ ಖಗ ಫಣಿಪ ಕೆಂಜೆಡೆಯರಿಂದ ಒಡಗೂಡಿ

ರಾಜಿಸುತ ಅಡವಿಯೊಳಗಿಪ್ಪನು ಸದಾ ಗೋಜಾದ್ರಿಜನೆನಿಸಿ

ಉಡುಪನಿಂದ ಅಭಿವೃದ್ಧಿಗಳ ತಾ ಕೊಡುತ ಪಕ್ಷಿ ಮೃಗಾಹಿಗಳ

ಕಾರೊಡಲ ಕಾವನು ತತ್ತದಾಹ್ವಯನು ಆಗಿ ಜೇವರನ||25||


ಅಪರಿಮಿತ ಸನ್ಮಹಿಮ ನರಹರಿ ವಿಪಿನದೊಳು ಸಂತೈಸುವನು

ಕಾಶ್ಯಪಿಯನು ಅಳಿದವ ಸ್ಥಳಗಳಲಿ ಸರ್ವತ್ರ ಕೇಶವನು

ಖಪತಿ ಗಗನದಿ ಜಲಗಳಲಿ ಮಹ ಶಫರನಾಮಕ

ಭಕ್ತರನು ನಿಷ್ಕಪಟದಿಂದಲಿ ಸಲಹುವನು ಕರುಣಾಳು ದಿನದಿನದಿ||26||


ಕಾರಣಾಂತರ್ಯಾಮಿ ಸ್ಥೂಲ ಅವತಾರ ವ್ಯಾಪ್ತಾಂಶ ಆದಿ ರೂಪಕೆ

ಸಾರ ಶುಭ ಪ್ರವಿವಿಕ್ತ ಆನಂದ ಸ್ಥೂಲ ನಿಸ್ಸಾರ

ಆರು ರಸಗಳನು ಅರ್ಪಿಸಲ್ಪರಿಗೆ ಈ ರಹಸ್ಯವ ಪೇಳದೆ

ಸದಾಪಾರ ಮಹಿಮನ ರೂಪ ಗುಣಗಳ ನೆನೆದು ಸುಖಿಸುತಿರು||27||


ಜಲಗತ ಉಡುಪನ ಅಮಲ ಬಿಂಬವ ಮೆಲುವೆವು ಎಂಬ ಅತಿ ಹರುಷದಿಂದಲಿ

ಜಲಚರ ಪ್ರಾಣಿಗಳು ನಿತ್ಯದಿ ಯತ್ನಗೈವಂತೆ

ಹಲಧರಾನುಜ ಭೋಗ್ಯ ರಸಗಳ ನೆಲೆಯನರಿಯದೆ ಪೂಜಿಸುತ

ಹಂಬಲಿಸುವರು ಪುರುಷಾರ್ಥಗಳ ಸತ್ಕುಲಜರು ಆವೆಂದು||28||


ದೇವ ಋಷಿ ಗಂಧರ್ವ ಪಿತೃ ನರ ದೇವ ಮಾನವ ದನುಜ ಗೋ ಅಜ

ಖರಾವಿ ಮೊದಲಾದ ಅಖಿಳ ಚೇತನ ಭೋಗ್ಯ ರಸಗಳನು

ಯಾವದವಯವಗಳೊಳಗಿದ್ದು ರಮಾವರನು ಸ್ವೀಕರಿಪ

ಯಾವಜ್ಜೀವ ಗಣಕೆ ಸ್ವಯೋಗ್ಯ ರಸಗಳನು ಈವನು ಎಂದೆಂದು||29||

ಒರಟು ಬುದ್ಧಿಯ ಬಿಟ್ಟು ಲೌಕಿಕ ಹರಟೆಗಳ ನೀಡಾಡಿ

ಕಾಂಚನ ಪರಟಿ ಲೋಷ್ಟ ಆದಿಗಳು ಸಮವೆಂದರಿದು ನಿತ್ಯದಲಿ

ಪುರುಟ ಗರ್ಭಾಂಡ ಉದರನು ಸತ್ಪುರುಷನು ಎಂದೆನಿಸಿ

ಎಲ್ಲರೊಳಗಿದ್ದು ಉರುಟ ಕರ್ಮವ ಮಾಳ್ಪನು ಎಂದು ಅಡಿಗಡಿಗೆ ನೆನೆವುತಿರು||30||


ಭೂತಳದಿ ಜನರುಗಳು ಮರ್ಮಕ ಮಾತುಗಳನಾಡಿದರೆ ಸಹಿಸದೆ

ಘಾತಿಸುವರು ಅತಿ ಕೋಪದಿಂದಲಿ ಹೆಚ್ಚರಿಪ ತೆರದಿ

ಮಾತುಳಾಂತಕ ಜಾರ ಹೇ ನವನೀತ ಚೋರನೆನಲು

ತನ್ನ ನಿಕೇತನದೊಳಿಟ್ಟು ಅವರ ಸಂತೈಸುವನು ಕರುಣಾಳು||31||


ಹರಿಕಥಾಮೃತ ಸಾರವಿದು ಸಂತರು ಸದಾ ಚಿತ್ತೈಸುವುದು

ನಿಷ್ಠುರಿಗಳಿಗೆ ಪಿಶುನರಿಗೆ ಅಯೋಗ್ಯರಿಗೆ ಇದನು ಪೇಳದಲೇ

ನಿರುತ ಸದ್ಭಕ್ತಿಯಲಿ ಭಗವತ್ ಚರಿತೆಗಳ ಕೊಂಡಾಡಿ ಹಿಗ್ಗುವ

ಪರಮ ಭಗವತ್ ದಾಸರಿಗೆ ತಿಳಿಸುವುದು ಈ ರಹಸ್ಯ||32||


ಸತ್ಯ ಸಂಕಲ್ಪನು ಸದಾ ಏನು ಇತ್ತದೆ ಪುರುಷಾರ್ಥವೆoದರಿದು

ಅತ್ಯಧಿಕ ಸಂತೋಷದಿಂ ನೆನೆವುತ್ತ ಭುಂಜಿಪುದು

ನಿತ್ಯ ಸುಖ ಸಂಪೂರ್ಣ ಪರಮ ಸುಹೃತ್ತಮ ಜಗನ್ನಾಥ ವಿಠಲ

ಬತ್ತಿಸಿ ಭವಾಂಬುಧಿಯ ಚಿತ್ಸುಖ ವ್ಯಕ್ತಿ ಕೊಡುತಿಪ್ಪ||33||

*********


harikathAmRutasAra gurugaLa karuNadindApanitu kELuve

parama BagavadBaktaru idanAdaradi kELuvudu||


makkaLADisuvAga maDadiyoLu akkaradi naguvAga

haya pallakki gaja modalAda vAhanagaLu Eri merevAga

bikkuvAga AkaLisutali dEvakki tanayana smarisutiha nara

sikka yamadUtarige Ava Avalli nODidaru||1||


sAritu pravahagaLalli divyAMbaradi patrAdiyali

haruShA maruSha vismrutiyandali Agali omme bAyi teredu

hari harI hariyeMba eraDakShara nuDida mAtradali

duritagaLu iradE pOpavu tUla rASiyoLu anala pokkante||2||


malaguvAgali ELuvAgali kuLitu mAtADutali

maneyoLu kelasagaLa mADutali maidoLevAga meluvAga

kaluSha dUrana sakala TAvili tiLiye tattannAma rUpava baLiyalippanu

ondarekShaNa biTTagalanu avara||3||


Ava kuladavanu AdaDe Enu innAva dESadoLu iddaDEnu

innAva karmava mADalEnu innAva kAladali

SrIvarana sarvatradali saMBAvisuta pUjisuta mOdipa

kOvidarige unTEnO Baya duHKAdi dOShagaLu||4||


vAsudEvana guNa samudradoLu Isaballava Bava samudra

AyAsavillade dATuvanu SIGradali jagadoLage

bEsarade durviShayagaLa aBilASheyali baLaluvava

nAnA klEShagaLanu anuBavipa Bakti sumArga kANadalE||5||


snAna japa dEvArcaneyu vyAKyAna BArata muKa mahOpapurANa kathegaLa

pELi kELidarEnu dinadinadi

j~jAna karma indriyagaLinda EnEnu mADuva karmagaLu

lakShmI nivAsana pUjeyendu arpisada mAnavanu||6||


dEva gangeyoLu uLLavage durita avaLigaLu unTE vicArise

pAvugaLa BayavunTe vihagAdhipana maMdiradi

jIva kartRutvavanu maredu parAvarESane kartRu eMdaridu

Ava karmava mADidaru lepisavu karmagaLu||7||


Enu mADuva puNya pApagaLu ANe mADuveneMba adhama

hIna karmake pAtra nA puNyakke hariyeMba mAnavanu madhyamanu

dvaMdvake SrInivAsane kartRuvendu

sadAnurAgadi nenedu suKisuvarE narOttamaru||8||


I upAsanegaivaru iLeyoLu dEvategaLu alladalE nararalla

Ava bageyindAdaru avara arcaneyu haripUje

kEvala pratimegaLu eniparu ramA vinOdage

ivara anugrahavE varAnugrahavenisuvudu mukti yOgyarige||9||


tanuve nAneMbuvenu sati suta mane dhanAdigaLu ennadeMbuva

dyunadi modalAda udakagaLe sat tIrthavu eMbuvanu

anala lOhAdi pratIka arcanave dEvara pUje

sujanara manujaru ahudu eMbuvanu gOKaranenipa budharinda||10||


anala sOmArka indu tAra avani surApaga muKya tIrthagaLu

anila gagana manADi indriyagaLigaBimAni enipa suraru

vipaScitara sanmanadi Bajisadeyipparana

pAvanava mADaru tamma pUjeya mADidaru sariyE||11||


kenDa kANade muTTidaru sarikaMDu muTTalu dahisade ippude

punDarIka daLAyatAkShana vimala pada padma

banDuNigaLu endenipa Baktara hinDu nODida mAtradali

tanudiMDugeDahida narana pAvana mALparu A kShaNadi||12||


I nimitta punaH punaH suj~jAnigaLa sahavAsa mADu

kumAnavara kUDi ADadiru laukikake maruLAgi

vainatEya aMsagana sarva sthAnadali tannAma rUpava dhEnisuta sancarisu

itara AlOcaneya biTTu||13||


I naLinajAnDadoLu sarva prANigaLoLagiddu anavarata

vij~jAnamaya vyApAragaLa mADuvanu tiLisadale

Enu kANade sakala karmagaLu Ane mADuveneMba naranu

kuyOni aiduva kartRu hari endavanE muktanaha||14||


kalimalApahaLu enisutiha bAMboLeyoLage sancarisi badukuva

jalacara prANigaLu ballave tIrtha mahimeyanu

halavu bageyali hariya karuNA baladi ballidaru Ada

brahmAnila vipa ISAdi amararu ariyaru anantana amala guNa||15||


SrIlakumi vallaBanu hRutkIlAlajadoLiddu aKiLa cEtana jAlavanu mOhisuva

triguNadi baddharanu mADi

sthUla karmadi ratara mADi svalIlegaLa tiLisadale

BavAdi kulAla cakrada teradi tirugisutihanu mAnavara||16||


vEda SAstra vicAragaidu niShEdha karmava toredu nityadi

sAdhu karmava mALparige svargAdi suKava Iva

aidisuva pApi^^agala nirayava KEda mOda manuShyarige

durvAdigaLige andhantamadi mahA duHKagaLanu uNipa||17||


nirguNa upAsakage guNa saMsarga dOShagaLu Iyadale

apavargadali suKavittu pAlisuvanu kRupAsAndra

durgamanu endenipa traividhyarge triguNAtIta

santata svarga BU narakadali sancAravane mADisuva||18||


mUvaroLagiddaru sariye suKa nOvugaLu saMbandhavAgavu

pAvanake pAvana parAtpara pUrNa suKavanadi

I vanaruha BavAnDadoLu sva kaLEvara tadAkAra mADi parAvarESa

carAcarAtmaka lOkagaLa poreva||19||


I nimitta nirantara svAdhIna kartRutvavanu maredu

EnEnu mADuvudu ella hari oLahorage nelesiddu tAnE mADuvenendu

maddAneyandadi sancarisu

pavamAna vandita ondarekShaNa biTTagala ninna||20||


halavu karmava mADi dEhava baLalisade dinadinadi hRudaya kamala sadanadi

virAjisuva hari mUrtiyane Bajisu

tiLiyade I pUjA prakaraNava Pala supuShpa agrOdaka

SrI tuLasigaLanu arpisalu oppanu vAsudEva sadA||21||


dharaNi nArAyaNanu udakadi turya nAmaka agniyoLu sankaruShaNa Ahvaya

vAyuganu pradyumna aniruddha irutihanu AkASadoLu

mUrereDu rUpava dharisi BUtaga karesuvanu

tannAma rUpadi prajara santaipa||22||


Ganagatanu tAnAgi nArAyaNanu tannAmadali karesuta

vanada garBa udakadi nelesiha vAsudEvAKya

dhvani siDilu sankaruShaNanu mincinoLu SrI pradyumna

vRuShTiya hanigaLoLage aniruddhanippanu varuShaneMdenisi||23||


gRuha kuTuMba dhanAdigaLa sannahagaLanu uLLavarAgi

vihitAvihita dharma sukarmagaLa tiLiyadale nityadali

ahara maithuna nidregoLagAgi iharu sarva prANigaLu

hRudguha nivAsiyanu ariyadale BavadoLage baLaluvaru||24||


jaDaja saMBava Kaga PaNipa kenMjeDeyarinda oDagUDi

rAjisuta aDaviyoLagippanu sadA gOjAdrijanenisi

uDupaninda aBivRuddhigaLa tA koDuta pakShi mRugAhigaLa

kAroDala kAvanu tattadAhvayanu Agi jEvarana||25||


aparimita sanmahima narahari vipinadoLu santaisuvanu

kASyapiyanu aLidava sthaLagaLali sarvatra kESavanu

Kapati gaganadi jalagaLali maha SaParanAmaka

Baktaranu niShkapaTadindali salahuvanu karuNALu dinadinadi||26||


kAraNAntaryAmi sthUla avatAra vyAptAMSa Adi rUpake

sAra SuBa pravivikta Ananda sthUla nissAra

Aru rasagaLanu arpisalparige I rahasyava pELade

sadApAra mahimana rUpa guNagaLa nenedu suKisutiru||27||


jalagata uDupana amala biMbava meluvevu eMba ati haruShadindali

jalacara prANigaLu nityadi yatnagaivante

haladharAnuja BOgya rasagaLa neleyanariyade pUjisuta

haMbalisuvaru puruShArthagaLa satkulajaru Avendu||28||


dEva RuShi gandharva pitRu nara dEva mAnava danuja gO aja

KarAvi modalAda aKiLa cEtana BOgya rasagaLanu

yAvadavayavagaLoLagiddu ramAvaranu svIkaripa

yAvajjIva gaNake svayOgya rasagaLanu Ivanu endendu||29||


oraTu buddhiya biTTu laukika haraTegaLa nIDADi

kAncana paraTi lOShTa AdigaLu samavendaridu nityadali

puruTa garBAnDa udaranu satpuruShanu endenisi

ellaroLagiddu uruTa karmava mALpanu endu aDigaDige nenevutiru||30||


BUtaLadi janarugaLu marmaka mAtugaLanADidare sahisade

GAtisuvaru ati kOpadindali heccaripa teradi

mAtuLAntaka jAra hE navanIta cOranenalu

tanna nikEtanadoLiTTu avara santaisuvanu karuNALu||31||


harikathAmRuta sAravidu santaru sadA cittaisuvudu

niShThurigaLige piSunarige ayOgyarige idanu pELadalE

niruta sadBaktiyali Bagavat caritegaLa konDADi higguva

parama Bagavat dAsarige tiLisuvudu I rahasya||32||


satya sankalpanu sadA Enu ittade puruShArthaveodaridu

atyadhika santOShadiM nenevutta Bunjipudu

nitya suKa saMpUrNa parama suhRuttama jagannAtha viThala

battisi BavAMbudhiya citsuKa vyakti koDutippa||33||

********* * 


ಹರಿಕಥಾಮೃತಸಾರ ನಾಮಸ್ಮರಣೆ ಸಂಧಿ
(ಸಂಧಿ --೧೩).

ಹರಿಕಥಾಮೃತಸಾರ ಗುರುಗಳ
ಕರುಣದಿಂದಾಪನಿತು ಪೇಳುವೆ
ಪರಮಭಗವದ್ಭಕ್ತರಿದನಾದರದಿ ಕೇಳುವುದು//

೫--

ವಾಸುದೇವನ ಗುಣಸಮುದ್ರದೊ--
ಳೀಸಬಲ್ಲವ ಭವಸಮುದ್ರಾ-
ಯಾಸವಿಲ್ಲದೆ ದಾಟುವನು ಶೀಘ್ರದಲಿ ಜಗದೊಳಗೆ/

ಬೇಸರದೆ ದುರ್ವಿಷಯಗಳ ಅಭಿ-
ಲಾಷದಲಿ ಬಳಲುವವ ನಾನಾ-
ಕ್ಲೇಶಗಳನನುಭವಿಪ ಭಕ್ತಿ ಸುಮಾರ್ಗ ಕಾಣದಲೆ//.

ಶ್ರೀ ಹರಿ ಯ ನಾಮಸ್ಮರಣೆ ಯಿಂದ ಸಂಸಾರ ಪರಿಹಾರ ವಾಗುವುದು ಎಂದು ತಿಳಿಸುವುದು ಮಹತ್ವ ದ್ದಾಗಿದೆ.

ಈ ಪ್ರಪಂಚದಲ್ಲಿ ವಾಸುದೇವನಾದ ಶ್ರೀ ಹರಿ ಯ ಗುಣ ಸಮುದ್ರದಲ್ಲಿ ಈಜಲು ಬಲ್ಲವನು ಸಂಸಾರ ಸಮುದ್ರವನ್ನು ಆಯಾಸವಿಲ್ಲದೆ ಬೇಗನೇ ದಾಟುವನು.

ಶ್ರೀ ಹರಿಯ ಗುಣಗಳ ಚಿಂತನೆಯಿಂದ ತ್ರಿಗುಣ ಮಯವಾದ ಸಂಸಾರದಿಂದ ಪಾರುಮಾಡಲು ಉತ್ತಮ 
ಸಾಧನೆ ಯಾಗಿದೆಯೆಂದು ದಾಸರು ವರ್ಣಿಸಿದ್ದಾರೆ.

ದೊಡ್ಡ ಜಲಾಶಯದಲ್ಲಿ ಈಜಿದವನಿಗೆ ಚಿಕ್ಕ ಜಲಾಶಯದಲ್ಲಿ ಈಜುವುದು ಕಠಿಣವಲ್ಲ.

ಅದರಂತೆ ಶ್ರೀ ಹರಿ ಯ ಮಹಾಗುಣ ಸಾಗರದಲ್ಲಿ ಈಜಬಲ್ಲವನಿಗೆ ಸಂಸಾರ ಸಾಗರದಿಂದ ಪಾರಾಗುವುದು ಕಷ್ಟವೇನಲ್ಲ.

ಈಜಲು ಉಸಿರು ಹಿಡಿಯುವುದು ಎಷ್ಟು ಮುಖ್ಯವೋ 
ಶ್ರೀ ಹರಿ ಯ ಗುಣ ಗಳನ್ನು ಅರಿಯಲು ವಾಯುದೇವರ ಮತ ಅಂದರೆ ಪ್ರಾಣ ತತ್ವ ವನ್ನು ಹಿಡಿಯುವುದು ಅಷ್ಟೇ ಮುಖ್ಯ ವೆಂದು ಅರ್ಥ.

ಅಲ್ಲದೇ ಶ್ರೀ ಹರಿ ಯ ಗುಣ ಚಿಂತನೆ ಯನ್ನು ಮಾಡದವರಿಗೆ ಸಂಸಾರದಲ್ಲಿ ಬಗೆ ಬಗೆಯ ದುಃಖ ಗಳನ್ನು ಅನುಭವಿಸಬೇಕಾಗುತ್ತದೆ.ಎಂಬ ಎಚ್ಚರಿಕೆ ಯನ್ನೂ ನೀಡಿದ್ದಾರೆ.


//ಶ್ರೀ ಹರಿ ಸಮರ್ಪಣೆ//.
*************

ಹರಿಕಥಾಮೃತಸಾರ--
ನಾಮಸ್ಮರಣೆ ಸಂಧಿ--೧೩ನೇಸಂಧಿ.

ಹರಿಕಥಾಮೃತಸಾರ ಗುರುಗಳ
ಕರುಣಾದಿಂದಾಪನಿತು ಪೇಳುವೆ
ಪರಮಭಗವ್ಭಕ್ತ ರಿದನಾದರದಿ ಕೇಳುವುದು//.

೧೮--

ನಿರ್ಗುಣೋಪಾಸಕಗೆ ಗುಣ ಸಂ-
ಸರ್ಗ ದೋಷಗಳೀಯದಲೆ ಅಪ-
ವರ್ಗದಲಿ ಸುಖವಿತ್ತು ಪಾಲಿಸುವನು ಕೃಪಾಸಾಂದ್ರ/

ದುರ್ಗಮನು ಎಂದೆನಿಪ ತ್ರೈವಿ-
ದ್ಯರ್ಗೆ ತ್ರಿಗುಣಾತೀತ ಸಂತತ
ಸ್ವರ್ಗ ಭೂ ನರಕದಲಿ ಸಂಚಾರವನೆ ಮಾಡಿಸುವ//೧೮//

೧೯--

ಮೂವರೊಳಗಿರ್ದರು ಸರಿಯೆ ಸುಖ-
ನೋವುಗಳ ಸಂಬಂಧ ವಾಗವು
ಪಾವನಕೆ ಪಾವನ ಪರಾತ್ಪರ ಪೂರ್ಣಸುಖವನಧಿ/

ಈ ವನರುಹಭವಾಂಡದೊಳು ಸ್ವಕ--
ಳೇವರ ತದಾಕಾರ ಮಾಡಿ ಪ-
ರಾವರೇಶ ಚರಾಚರಾತ್ಮಕ ಲೋಕಗಳ ಪೊರೆವ//೧೯//.

ಸತ್ವ ರಜ ಮತ್ತು ತಮೋ ಗುಣಗಳಿಗೆ ರಹಿತನಾದವನು
ಶ್ರೀ ಹರಿ ಎಂಬುದನ್ನು ಅರಿತ ಉಪಾಸಕನಿಗೆ ಶ್ರೀ ಹರಿ ಯು ಆ ಗುಣತ್ರಯಗಳ ಬಂಧನ ರೂಪವಾದ ಸಂಸಾರ ವನ್ನು ಪರಿಹರಿಸಿ ಮುಕ್ತಿ ನೀಡುವವನು ಶ್ರೀ ಹರಿ ಯಾದ್ದರಿಂದ ನಿರ್ಗುಣ ನೆಂದು ಶ್ರೀ ಹರಿ ಕರೆಯಲ್ಪಡುವನು.

ಶ್ರೀ ಹರಿ ಯನ್ನು  ಉತ್ತಮ ನೆಂದು ಭಾವಿಸಿ ಬರೀ ಯಜ್ಞಾದಿ ಕರ್ಮಗಳಿಂದ ಮಾತ್ರ ಪೂಜಿಸುವ ಜನರಿಗೆ 

ತ್ರಿಗುಣಾತೀತ ನಾದ ಹರಿಯು ತ್ರೈವಿದ್ಯರಾದವರಿಗೆ ಸಂತತ ಸ್ವರ್ಗ ಭೂಮಿ ಮತ್ತು ನರಕಗಳಲ್ಲಿ ಸಂಚಾರ ಮಾಡಿಸುವನು.ಅವರಿಗೆ ಮುಕ್ತಿ ದೊರಕುವುದಿಲ್ಲ.

ಶ್ರೀ ಹರಿ ಯು ತ್ರಿಜೀವಿಗಳಲ್ಲಿ ಇದ್ದರೂ ಅವನು ಪಾವನಕ್ಕೆ ಪಾವನ,ಉತ್ತಮರಿಗಿಂತಲೂ ಉತ್ತಮ ಪೂರ್ಣ ಸುಖಸಾಗರ.

ಅವನಿಗೆ ಅವರ ಗುಣ ದೋಷಗಳು ಸಂಬಂದಿಸುವುದಿಲ್ಲ

ಈ ಬ್ರಹ್ಮಾಂಡದಲ್ಲಿ ತನ್ನ ರೂಪವನ್ನು ಅವುಗಳ ರೂಪಕ್ಕನುಗುಣವಾಗಿ ಮಾಡಿಕೊಂಡು ಪರಾವರೇಶ ನಾದ ಶ್ರೀ ಹರಿ ಯು ಸ್ಥಾವರ ಜಂಗಮಾತ್ಮಕ ವಾದ ಲೋಕಗಳನ್ನು ಪಾಲಿಸುವನು.

(ಪರಾವರೇಶ ಎಂದರೆ ಪರಾವರನೂ,ಈಶನೂ ಆದ ಶ್ರೀ ಹರಿ ಎಂಬುದು ಇತರ ದೇವತೆಗಳಿಗಿಂತ ಶ್ರೇಷ್ಠ ರಾದ ಬ್ರಹ್ಮಾದಿ ಗಳು ಅವರು ಸರ್ವೋತ್ತಮ ನಾದ ಶ್ರೀ ಹರಿ ಗಿಂತ ಕಡಿಮೆ.ಆದ್ದರಿಂದ ಶ್ರೀ ಹರಿಗೆ ಪರಾವರೇಶ
ಎನ್ನುತ್ತಾರೆ).

ಹೀಗೆ ಶ್ರೀ ಹರಿಯ ನಾಮಸ್ಮರಣೆ ಯಿಂದ ಶ್ರೀ ಹರಿಯು ನಿರ್ಗುಣ, ನಿರ್ಲಿಪ್ತ ನೆಂದು  ಜಗನ್ನಾಥ ದಾಸರು ವರ್ಣಿಸಿದ್ದಾರೆ.
//ಶ್ರೀ ಹರಿ ಸಮರ್ಪಣೆ//.
**********