Showing posts with label ಈ ಜೀವ ಈ ದೇಹ ಇದ್ದು ಫಲವೇನೋ ರಾಜೀವ purandara vittala EE JEEVA EE DEHA IDDU PHALAVENO RAAJEEVA. Show all posts
Showing posts with label ಈ ಜೀವ ಈ ದೇಹ ಇದ್ದು ಫಲವೇನೋ ರಾಜೀವ purandara vittala EE JEEVA EE DEHA IDDU PHALAVENO RAAJEEVA. Show all posts

Wednesday 6 October 2021

ಈ ಜೀವ ಈ ದೇಹ ಇದ್ದು ಫಲವೇನೋ ರಾಜೀವ purandara vittala EE JEEVA EE DEHA IDDU PHALAVENO RAAJEEVA




ಈ ಜೀವ ಈ ದೇಹ ಇದ್ದು ಫಲವೇನೋ
ರಾಜೀವ ನೇತ್ರನಾ ನೋಡದ ಮೇಲೇ

ರಂಗರಾಜನ ಪಾದ ಭೃಂಗನೆಂದೆನಿಸುವಾ
ತುಂಗ ಪಾದವ ತೊಳೆದು ತೀರ್ಥವಾವಹಿಸಿ
ಹಿಂಗದೆ ಪ್ರತಿದಿನ ಹಿರಣ್ಯಾರಿ ದೇವನ್ನ
ಮಂಗಳಪ್ರದನಾದ ರಂಗನ ನೋಡದ ಮೇಲೇ ..||

ಹರಿಗುಣ ಅನವರತ ಭರದಿಂದ ಪೊಗಳುವಾ
ಗುರು ಮಧ್ವರಾಯರ ಮತನ ಪೊಂದೀ
ತರಿದು ದುರ್ಮತಿ ಸಂಗ ತಿರುಪತಿ ರಮಣನ
ದರುಶನವನು ಮಾಡಿ ಸುಖವ ಪಡೆಯದ ಮೇಲೇ..||

ಕಾಮಿತ ಪ್ರದನಾದ ಭೂಮಿ ವರಾಹನ ಕಂಡು
ಸ್ವಾಮಿ ಪುಷ್ಕರಣಿಯ ಸ್ನಾನವ ಮಾಡಿ
ಶ್ಯಾಮ ಸುಂದರ ನಮ್ಮ ಪುರಂದರ ವಿಠಲನ

ನೇಮದಿಂದಲಿ ಭಜಿಸಿ ಸುಖವ ಪಡೆಯದ ಮೇಲೇ..||
*******

ರಾಗ ಕಲ್ಯಾಣವಸಂತ ಖಂಡಛಾಪುತಾಳ (raga, taala may differ in audio)

ಈ ಜೀವನಿಂದು ಫಲವೇನು |
ರಾಜೀವಲೋಚನನ ಮರೆದಿಹ ತನುವಿನಲಿ ಪ.

ಅರುಣನುದಯಲೆದ್ದು ಹರಿಸ್ಮರಣೆಯ ಮಾಡಿ |ಗುರು - ಹಿರಿಯರ ಚರಣಕಮಲಕೆರಗಿ ||ಪರಮಶುಚಿಯಾಗಿ ನದಿಯಲಿ ಮಿಂದು ರವಿಗಘ್ಯ |ವೆರೆಯದೆ ಮರೆಹ ಈ ಪಾಪಿತನುವಿನಲಿ 1

ಹೊನ್ನಗಿಂಡಿಯಲಿ ಅಗ್ರೋದಕವನೆ ತಂದು |ಚೆನ್ನಾಗಿ ಹರಿಗೆ ಅಭಿಷೇಕ ಮಾಡಿ ||ರನ್ನದುಡಿಗೆಯುಡಿಸಿ ರತುನಗಳಳವಡಿಸಿ |ಕಣ್ಣಿರಲು ನೋಡಲರಿಯದ ಪಾಪಿತನುವಿನಲಿ 2

ನಳನಳಿಸುವ ನಾನಾ ಪುಷ್ಪಗಳು ಶ್ರೀತುಳಸಿ |ಹೊಳೆವ ಕಿರೀಟ ಕೊರಳಲಿ ಪದಕ ||ನಳಿನಾಕ್ಷನಿಗೆ ಕರ್ಪುರದಾರತಿಯನೆತ್ತಿ |ಕಳೆಯ ನೋಡಲರಿಯದ ಪಾಪಿತನುವಿನಲಿ 3

ವರಭಕ್ಷ್ಯಗಳುಪರಮಾನ್ನ ಶಾಲ್ಯನ್ನವು |ವರವಾದ ಮಧುಘೃತ ಕ್ಷೀರವನ್ನು ||ಸಿರಿನಾರಾಯಣಗೆ ಸಮರ್ಪಣೆ ಮಾಡಿ ತಾ - |ಎರಡು ಕೈಮುಗಿಯದ ಪಾಪಿತನುವಿನಲಿ 4

ಉರಗಾದ್ರಿ - ಸ್ವಾಮಿಪುಷ್ಕರಣಿಗಳು ಮೊದಲಾದ |ಪರಿಪರಿ ತೀರ್ಥಗಳನೆಲ್ಲ ಮಿಂದು ||ತಿರುವೆಂಗಳಪ್ಪ ಶ್ರೀ ಪುರಂದರವಿಠಲನ |ಚರಣವನು ಭಜಿಸಲಯದ ಪಾಪಿತನುವಿನಲಿ 5
******