Showing posts with label ವೃಂದಾವನಗಳಿಗಾನಮಿಸಿ ನಿತ್ಯ jagannatha vittala. Show all posts
Showing posts with label ವೃಂದಾವನಗಳಿಗಾನಮಿಸಿ ನಿತ್ಯ jagannatha vittala. Show all posts

Saturday, 14 December 2019

ವೃಂದಾವನಗಳಿಗಾನಮಿಸಿ ನಿತ್ಯ nava vrundavana ankita jagannatha vittala

Śrī jagannāthadāsara navavr̥ndāvana kr̥ti

ವೃಂದಾವನಗಳಿಗಾನಮಿಸಿ ನಿತ್ಯ
ನಂದ ತೀರ್ಥ ಮತೋದ್ದಾರಕರೆನಿಪ||pa||

ವರ ಮಧ್ವಮುನಿ ಕಮಲಕರ ಪದ್ಮ ಸಂಜಾತ
ಗುರು ಪದ್ಮನಾಭ ಶ್ರೀ ರಾಮತೀರ್ಥ ಕವೀಂದ್ರಾ
ಕರಸರೋರುಹ ಜಾತ ವಾಗೀಶಮುನಿ
ಪರಘುವರ್ಯ ಗೋವಿಂದಾಖ್ಯ ಒಡೆಯರ ಪವಿತ್ರತಮ ||1||

ಶ್ರೀ ಸುಧೀಂದ್ರಾರ್ಯರ ಪ್ರಪೌತ್ರರೆನಿಪ
ವಸುಧೀಂದ್ರ ವ್ಯಾಸರಾಯ ಶ್ರೀನಿವಾಸ ಮುನಿಯಾ
ಭೂಸುರರು ಪರಮ ಸಂತೋಷದಲಿ ಸ್ಮರಿಸೆ ನಿ
ರ್ದೋಷರನ ಮಾಡಿ ಅಭಿಲಾಷೆ ಪೂರೈಸುತಿಹ ||2||

ದೇವತೆಗಳು ಇವರು ಸಂದೇಹ ಬಡಸಲ್ಲಾ ಮಿ
ಥ್ಯಾವಾದಿಗಳ ಪರಾಭವ ಮಾಡಿ ಈ ವಸುಂಧರೆಯೊಳಗೆ
ಕೀರ್ತಿಯುತರಾಗಿ ಲಕ್ಷ್ಮೀವರ ಜಗ
ನ್ನಾಥ ವಿಠಲನ ಐದಿಹರಾ ||3||
***


vr̥ndāvanagaḷigānamisi nitya nanda tīrtha matōddārakarenipa | pa |

vara madhvamuni kamalakara padma san̄jāta

guru padmanābha śrī rāmatīrtha kavīndrā

karasarōruha jāta vāgīśamuni

paraghuvarya gōvindākhya oḍeyara pavitratama |1|

śrī sudhīndrāryara prapautrarenipa

vasudhīndra vyāsarāya śrīnivāsa muniyā

bhūsuraru parama santōṣadali smarise ni

rdōṣarana māḍi abhilāṣe pūraisutiha | 2 |

dēvategaḷu ivaru sandēha baḍasallā mi-

thyāvādigaḷa parābhava māḍi

ī vasundhareyoḷage kīrtiyutarāgi la-

kṣmīvara jagannātha viṭhalana aidiharā | 3 |
***


Vrundavanagaliga namisi nitya tirthananda matoddharakarenipa | pa |

Vara madhvamuni kamalakara padmasanjata gurupadmanaba Sriramatirtha kavindra-
Karasaroruha jata vagisamunipa raguvarya Govindakya odeyara pavitratama ||1||

Srisudheendraryara prapautrarenipa vasudhindra vyasaraya srinivasamuniya |
Busuraru parama santoshadali smarise nirdosharana madi abilashe puraisutiha|| 2||

|Devategalu ivaru sandeha badisalla mithyavadigala parabava madi I |
Vasundhareyolage kirtiyutaragi lakshmivara jagannatha vithalana aidihara ||3||
***

ಶ್ರೀ ಬಾದರಾಯರಣ ಮತ್ತು ಆಚಾರ್ಯ ಮಧ್ವರ ದ್ವೈತ ಸಿದ್ಧಾಂತದ ತಾರತಮ್ಯದಲ್ಲಿ ರಚಿತವಾದ ನವ ವೃಂದಾವನ ಪದ್ಯ..

ರಾಗ : ಕಾಂಬೋಧಿ  ತಾಳ : ಝಂಪೆ
ವೃಂದಾವನಗಳಿಗೆ
ಆನಮಿಪೆ ನಿತ್ಯಾ ।
ನಂದತೀರ್ಥರ ಮಧ್ವ-
ಮತೋದ್ಧಾರರೆನಿಪರ । ನವ ।। ಪಲ್ಲವಿ ।।
ವರ ಮಧ್ವಮುನಿ ವಿಮಲ
ಕರಪದ್ಮ ಸಂಜಾತ ।
ಗುರು ಪದ್ಮನಾಭ
ಜಯಮುನಿ ಕವೀಂದ್ರ । ತತ್ಕ ।
ರೋರುಹ ಜಾತ
ವಾಗೀಶತೀರ್ಥ ಮುನಿ ।
ವರಿಯ ಗೋವಿಂದಾಖ್ಯ-
ರೊಡೆಯರ ಪವಿತ್ರ ತಮ ।। ಚರಣ ।।
ವ್ಯಾಸರಾಯರ ಶ್ರೀನಿವಾಸ-
ಮುನಿ ರಾಮಮುನಿ ।
ಶ್ರೀ ಸುರೇಂದ್ರ ಪೌತ್ರರ ಸುಧೀಂದ್ರರ ।
ಭೂಸುರರು ಇವರ
ಸಂತೋಷದಲಿ ಸ್ಮರಿಸಿ । ನಿ ।
ರ್ದೋಷರನು ಮಾಡಿ
ಅಭಿಲಾಷೆ ಪೂರೈಸುವರ ।। ಚರಣ ।।
ದೇವತೆಗಳು ಇವರು
ಸಂದೇಹ ಬಡಸಲ್ಲ । ಮಿ ।
ಥ್ಯಾವಾದಿಗಳ ಪರಾಭವ ಮಾಡಿ ।
ಈ ವಸುಂಧರೆಯೊಳಗೆ
ಕೀರ್ತಿಯುತರಾಗಿ । ಲ ।
ಕ್ಷ್ಮೀವರ ಜಗನ್ನಾಥವಿಠ್ಠಲನ
ಐದಿಹರು  ।। ಚರಣ ।।
****