Audio by Vidwan Sumukh Moudgalya
ಶ್ರೀ ಪ್ರಾಣೇಶದಾಸರ ಕೃತಿ
ರಾಗ : ಮಧ್ಯಮಾವತಿ ಆದಿತಾಳ
ಗಂಗಾಧರ ಸುಮತೀ ಪಾಲಿಸೋ
ಪಾಂಡುರಂಗನ ಚರಣಾಬ್ಜ ಭಜನೆ ಮಾಡಲು ನಿತ್ಯ ॥ಪ॥
ವೈಕಾರಿಕಾದಿತ್ಯ ರೂಪ ದನುಜರಿಗೆ
ಶೋಕ ಕೊಡುವದು ನಿರಂತರದಿ
ಲೌಕಿಕವೆಲ್ಲ ವೈದಿಕವಾಗಲೆನಗೆ ಮೈ-
ನಾಕಿ ಹೃತ್ಕಮಲ ಮಾರ್ತಂಡ ಭಕ್ತವತ್ಸಲ ॥೧॥
ವಾಸವಾದ್ಯಮರ ವಂದಿತನೆ ಪದ್ಮಜ ಸುತ
ನೀ ಸಲಹುವದೋ ಕೈಲಾಸವಾಸ
ಕ್ಲೇಶ ಮೋದವು ಸಮ ತಿಳಿಸೋ ಅಶ್ವತ್ಥಾಮ
ದೋಷರಹಿತ ದಕ್ಷಾಧ್ವರನಾಶಕ ॥೨॥
ಪವಮಾನ ತನಯ ನಿನ್ನವರಲ್ಲಿ ಕೊಡು ಸ್ನೇಹ
ದಿಙ್ ವಸನಾದಿಯಲ್ಲಿ ಯನ್ನಿರವ ಬಲ್ಲಿ
ಅವಲೋಕಿಸದೆ ಯನ್ನನೇಕ ಪಾಪಗಳನ್ನು
ತವಕ ಉದ್ಧರಿಸೋ ವಿಯತ್ಪತಿ ಜನಕನೆ ॥೩॥
ಸಾಮಜಜಿನ ವಸ್ತ್ರ ಭಸ್ಮ ಭೂಷಿತ ದೇವ
ಸೋಮಶೇಖರನೆ ಬಿನ್ನಪವ ಕೇಳು
ಪ್ರೇಮದಿಂದಲಿ ಭಾಗವತರ ಸಂಗತಿ ನಿತ್ಯ
ಶ್ರೀ ಮನೋರಮನ ಚರಿತೆ ಪಾಡಿಸುವದಯ್ಯ ॥೪॥
ಶ್ರೀಕಂಠ ನೀ ಪೇಳಿದನ್ಯಶಾಸ್ತ್ರಕೆ ಬುದ್ಧಿ
ಸೋಕದೆ ಗುರುಮಧ್ವಮುನಿ ಮತವೇ
ಬೇಕು ಜನುಮ ಜನ್ಮಕ್ಕೆನಿಸೋ ತ್ರಿಯಂಬಕ
ನಾ ಕೈಯ್ಯ ಮುಗಿವೆ ಪ್ರಾಣೇಶವಿಟ್ಠಲದಾಸ ॥೫॥
******
by ಪ್ರಾಣೇಶದಾಸರು
ಗಂಗಾಧರ ಸುಮತಿ ಪಾಲಿಸೋ | ಪಾಂಡು |ರಂಗನ ಚರಣಾಬ್ಜ ಭಜನೆಮಾಡುನಿತ್ಯ ಪ
ವೈಕಾರಿಕಾದಿತ್ಯರೂಪದನುಜರಿಗೆ |ಶೋಕಕೊಡುವದು ನಿರಂತರದಿ ||ಲೌಕಿಕವೆಲ್ಲ ವೈದಿಕವಾಗಲೆನಗೆ ಮೈನಾಕೀ |ಹೃತ್ಕಮಲಮಾರ್ತಾಂಡಭಕ್ತ ವತ್ಸಲ 1
ವಾಸವಾದ್ಯಮರ ವಂದಿತನೆ ಪದ್ಮಜ ಸುತ |ನೀ ಸಲಹುವದೋ ಕೈಲಾಸವಾಸ ||ಕ್ಲೇಶಮೋದವು ಸಮ ತಿಳಿಸೋ ಅಶ್ವತ್ಥಾಮ |ದೋಷರಹಿತನೆ ದಕ್ಷಾಧ್ವ ರನಾಶಕ 2
ಪವಮಾನತನಯನಿನ್ನವರಲ್ಲಿ ಕೊಡು ಸ್ನೇಹ |ದಿಙ ವಸನಾದಿಯಲ್ಲಿ ಎನ್ನಿರವ ಬಲ್ಲಿ ||ಅವಲೋಕಿಸದೆ ಎನ್ನನೇಕ ಪಾಪಗಳನ್ನು |ತವಕಉದ್ಧರಿಸೋ ವಿಯತ್ಪತಿ ಜನಕ 3
ಸಾಮಜಾಜಿನ ವಸ್ತ್ರ ಭಸ್ಮ ಭೂಷಿತ ದೇವ |ಸೋಮಶೇಖರನೆ ಬಿನ್ನಪವ ಕೇಳು ||ಪ್ರೇಮದಿಂದಲಿ ಭಾಗವತರ ಸಂಗತಿನಿತ್ಯ|ಶ್ರೀ ಮನೋರಮನ ಚರಿತೆ ಪಾಡಿಸುವದಯ್ಯ 4
ಶ್ರೀಕಂಠ ನೀ ಪೇಳಿದನ್ಯಶಾಸ್ತ್ರಕೆ ಬುದ್ಧಿ |ಸೋಕದೆಗುರುಮಧ್ವ ಮುನಿಮತವೇ ||ಬೇಕು ಜನುಮ ಜನುಮಕ್ಕೆನಿಸೋ ತ್ರಿಯಂಬಕ |ನಾ ಕೈಯ್ಯ ಮುಗಿವೆ ಪ್ರಾಣೇಶ ವಿಠಲದಾಸ 5
*******