Showing posts with label ಆಶೆಯ ಬಿಡಿಸಿದ್ಯೋ ಎನ್ನಾ ಮುಂದೆ shanti. Show all posts
Showing posts with label ಆಶೆಯ ಬಿಡಿಸಿದ್ಯೋ ಎನ್ನಾ ಮುಂದೆ shanti. Show all posts

Sunday, 1 August 2021

ಆಶೆಯ ಬಿಡಿಸಿದ್ಯೋ ಎನ್ನಾ ಮುಂದೆ ankita shanti

 ..

kruti by shantibai dasaru ಶಾಂತಿಬಾಯಿ ದಾಸರು


ಆಶೆಯ ಬಿಡಿಸಿದ್ಯೋ ಎನ್ನಾ ಮುಂದೆ

ವಾಸವಾಗದಂತೆ ಕಾಯೋ ಮೋಹನ್ನಾ

ವಾಸುದೇವನೆ ನಿನ್ನ ಸ್ಮರಣೆಯೊಳಗೆ ಮನ

ಸೂಸದಂತೆ ಸ್ಥಿರ ನಿಜದಲ್ಲಿ ನಿಲಿಸಯ್ಯಾ ಪ


ನಂಬಿದವರ ಕಾಯುತ್ತಿರುವಾ ಅವರ

ಬೆಂಬಿಡದೆಲೆ ನಿಜದರಿವನ್ನು ಕೊಡುವಾ

ಕುಂಭಿಣಿಯೊಳಗೆಲ್ಲಾ ನೀನಲ್ಲದೆ ಎನ್ನಾ

ನಂಬಿಗೆ ಕೊಡುವವರ್ಯಾರೋ ನಾರಾಯಣಾ 1


ಬೆಂದೆನು ನಾ ಭವದೊಳಗೆ ಎನ್ನಾ

ತಂದೆ ನೀ ಕಾಯೋ ನಿಜಪದದೊಳಗೆ

ಹಿಂದಿನ ಪ್ರಾರಬ್ಧ ಬವಣೆಯ ತೀರಿಸಿ

ಮುಂದೆ ನೀ ಸಲಹೊ ಪರಮಪುರುಷನೆ ಹರಿ 2


ವಾಸನೆ ಬಂಧವೇ ಜೀವಾ ನಿ

ರ್ವಾಸನೆಯನು ಕೊಟ್ಟು ಸಲಹೊ ಮಾಧವಾ

ಶೇಷಶಯನನೆ ನಿಜ ಧ್ಯಾನದೊಳಿರಿಸೆನ್ನಾ

ಆಶೆಯನು ಸಲಿಸಯ್ಯಾ ಮುರಾರಿ 3


ಅನಂತ ಮಹಿಮಾ ಮೇಘಶ್ಯಾಮಾ

ನಿಶ್ಚಿಂತ ನಿಜ ಶಾಂತಿ ಸ್ವಸುಖವೀವಾ

ನಂತಪರಾಧವ ಕ್ಷಮಿಸೆನ್ನಾ ಗುರುವೇ 4

***