RSS song .
ರಣಮಂತ್ರದುಚ್ಚಾರ ಘನಶೌರ್ಯದೋಂಕಾರ
ಹೊರಹೊಮ್ಮುತಿಹುದಥರ್ವಣದ ಮಾರಣದ ಹೂಂಕಾರ ||ಪ||
ಪುನರುದಿತವಾಗುತಿದೆ ಮಾನಹತ ಪಾಣಿಪತ
ವಿಜಗೀಷು ಭಾರತಕೆ ಜಯದೊಲವ ತರಲು
ಚಾರಣರ ರಣಗಾನದನುರಣನದಾಹ್ವಾನ
ನವಚೇತನವನಿತಿಹಾಸಕೆರೆಯುತಿರಲು ||೧||
ನೆಲದೆದೆಯು ಬೇಗುದಿಯ ರುಧಿರನರ್ತನಕೆಂದು
ಕುದಿವಗ್ನಿಪರ್ವತವೆ ಬಾಯ್ದೆರೆದು ಇಂದು
ಬಾಗದ ಮನೋಬಲವೆ ಭಾರತದ ಭುಜಬಲವೆ
ಕೊಡು ಸಾಕ್ಷಿ ಜಗದಕ್ಷಿ ನಿಜವರಿಯಲೆಂದು ||೨||
ಹಸಿರು ಹಳದಿಯ ಭೂತ ಸಂಕೇತದುತ್ಪಾತ
ದೆಸೆದೆಸೆಗೆ ಕಣ್ಗೆಸೆಯುತಿರೆ ಧೂಮಕೇತು
ಭೂಮಿ ಭೈರವಿಯಾಗು ವ್ಯೋಮಸೀಮೆಯ ತಾಗು
ಗೋಣ್ಮುರಿದು ಬಿಸುಡು ನಶಿಸಲು ರಾಹು ಕೇತು ||೩||
ಪಂಚನದಿಯಧಿಜಲಧಿ ಪರ್ವತದ ಹಿಮನೆಲದಿ
ಹೇಳಿ ಓ ವೈರಿಗಳೆ ಬಯಸುವಿರ ಯುದ್ಧ
ನಿದ್ದೆಯಲಿ ಮಲಗಿದ್ದ ಹಿಂದುವಿದೋ ಮೇಲೆದ್ದ
ಎಚ್ಚತ್ತು ಎದ್ದಿಹನು ಎಲ್ಲದಕು ಸಿದ್ಧ! ||೪||
***
raNamaMtraduccAra GanaSouryadOMkAra
horahommutihudatharvaNada mAraNada hUMkAra ||pa||
punaruditavAgutide mAnahata pANipata
vijagIShu BAratake jayadolava taralu
cAraNara raNagAnadanuraNanadAhvAna
navacEtanavanitihAsakereyutiralu ||1||
neladedeyu bEgudiya rudhiranartanakeMdu
kudivagniparvatave bAyderedu iMdu
bAgada manObalave BAratada Bujabalave
koDu sAkShi jagadakShi nijavariyaleMdu ||2||
hasiru haLadiya BUta saMkEtadutpAta
desedesege kaNgeseyutire dhUmakEtu
BUmi BairaviyAgu vyOmasImeya tAgu
gONmuridu bisuDu naSisalu rAhu kEtu ||3||
paMcanadiyadhijaladhi parvatada himaneladi
hELi O vairigaLe bayasuvira yuddha
niddeyali malagidda hiMduvidO mEledda
eccattu eddihanu elladaku siddha! ||4||
***