Showing posts with label ಪಾಲಿಸೋ ಗುರುರಾಜ ಪಾಲಿಸೋ prasannashreenivasa vadiraja stutih. Show all posts
Showing posts with label ಪಾಲಿಸೋ ಗುರುರಾಜ ಪಾಲಿಸೋ prasannashreenivasa vadiraja stutih. Show all posts

Friday 27 December 2019

ಪಾಲಿಸೋ ಗುರುರಾಜ ಪಾಲಿಸೋ ankita prasannashreenivasa vadiraja stutih

ಪ್ರಸನ್ನ ಶ್ರೀನಿವಾಸದಾಸರು
ಭಾವಿಸಮೀರಶ್ರೀ ವಾದಿರಾಜ ಸ್ವಾಮಿ ಸ್ತೋತ್ರ
ಪಾಲಿಸೋ ಗುರುರಾಜ ಪಾಲಿಸೋಪಾಲಿಸೋಗುರುವಾದಿರಾಜ || ಪೊಗಳ-ಲಳವೇ ನಿನ್‍ಮಹಿಮೆ ಮಹೋಜ || ಅಹಹಂಸಹಯಾಸ್ಯವರಾಹಕೇಶವ ಪ್ರಿಯಹಂಸಾರೂಡ್ಯನೆ ನಮೋ ಶರಣು ಮಾಂಪಾಹಿ ಪ

ವಾಗ್ವಿಭವನು ಗುರುವರ್ಯ || ಮಹಾಯೋಗಿವರನು ಯತಿವರ್ಯ || ಶಿರಿವಾಗೀಶಕರಪದ್ಮದುದಯ || ನಾಗಿಜಗತ್ತಲ್ಲಿ ಮಾಡಿ ದಿಗ್ವಿಜಯ || ಅಹಜಗವನಳೆದಮೂರ್ತಿತರಿಸಿ ನಿಲ್ಲಿರಿಸಿಪೊಗಳೆ ಮುಕ್ಕಣ್ಣಾದಿ ಸುರರೇಬಲ್ಲರು 1

ಜೀವೋತ್ತಮವಿದ್ಯುತ್ಪತಿಯ ||ನಿತ್ಯಅವೇಶಯುತ ವ್ಯಾಸರಾಯ || ಮುನಿಸರ್ವಾಭೌಮರ ಸೇರಿ ದಿವ್ಯ || ವಾದಮಾಧ್ವ ವೈದಿಕ ಬ್ರಹ್ಮವಿದ್ಯ || ಅಹಸುವಿಚಾರ ಪ್ರವಚನರತನಾಗಿ ಭುವಿತತ್ವವಶ್ರುತಿಯುಕ್ತಿ ಯುಕ್ತದಿ ಬೋಧಿಸಿದ2

ಕೂರ್ಮತೀರ್ಥವು ಧವಳಗಂಗೆ || ಅದರನಿರ್ಮಲ ಲಲಿತತರಂಗ|| ಲಿಪ್ತಚರ್ಮ ತೊಳೆದು ಪಾಪಭಂಗ || ಮಾಡಿಧರ್ಮ ಆಚರಣೆ ನಿಸ್ಸಂಗ || ಅಹ ||ಬುದ್ದಿಯ ಒದಗಿಸಿಗುರುಸೇವಾರತಿಯಿತ್ತುಮಧ್ವಾಂತರ್ಗತ ಶ್ರೀಶನಲಿ ಭಕ್ತಿ ತೋರ್ಪುದು 3

ಧವಳಗಂಗೆಗೆ ಪೂರ್ವಾದೇಶ || ದಲ್ಲಿದೇವದೇವೋತ್ತಮ ವ್ಯಾಸ || ದೇವಅವಲೋಕಿಸುತ ಇಹ ಪಂಚ || ವೃಂದಾವನಮಧ್ಯದಲ್ಲಿ ಪ್ರವೇಶ || ಅಹ ||ಮಾಡಿದಿರಿ ತ್ರಿವಿಕ್ರಮನನಂತ ಗುಣಕ್ರಿಯದೃಢಧ್ಯಾನೋಪಾಸನ ಮಾಳ್ಪಮಹಂತ4

ಪೂರ್ಣೇಂದು ಪೋಲುವ ಮುಖವ ||ಕಮಲಕರ್ಣಿಕೆವರ್ಣದಿ ಪೊಳೆವ ||ಗಾತ್ರಪೂರ್ಣಲಕ್ಷಣ ಸಂಯುತವ || ದಿವ್ಯಫಣಿಯಲ್ಲಿ ಪುಂಡ್ರವು ಊಧ್ರ್ವ || ಅಹಪೀತ ಸುವರ್ಣ ಸುರೇಶ್ಮಿವಸನಉಟ್ಟಪದ್ಮಜ ಪಾದಾರ್ಹನೆ ನಿನ್ನ ಕಂಡೆ ನಾ ಶರಣು 5

ಗುರುವಾದಿರಾಜ ನಿನ್ ದೂತ || ವೀರಭದ್ರನೋಪಮ ಬಲವಂತ || ಬಾಧೆವಿದ್ರಾವ ಕ್ಷಣದಿ ಮಾಳ್ಪಂತ || ಅತಿಶೂರ ಅದ್ಬುತ ಶಕ್ತಿಮಂತ || ಅಹ ||ನಾರಾಯಣಾಹ್ವಯ ಭೂತರಾಜನು ಎನ್ನಸಂರಕ್ಷಿಸುವ ಗುರುರಾಜ ನಿನ್ ದಯದಿ 6

ಒಡೆಯ ಶ್ರೀಪತಿಹಯವದನ || ತಾನೇಕಡಲೆ ಮಡ್ಡಿಯನ್ನು ನಿನ್ನ || ಕೈಯಿಂದಉಂಡದ್ದು ಚತುರ್ದೇಶಭುವನ|| ಖ್ಯಾತಿಈಡಿಲ್ಲ ಸ್ಮರಿಸೆಪಾವನ್ನ|| ಅಹ ||ಕುಸುಮಜಪಿತ ಉಕ್ತಅಭಯಪ್ರಸನ್ನ ಶ್ರೀನಿವಾಸನ್ನೊಲಿಸೋ ಎನಗೆ 7 
*******