Showing posts with label ಶರಣೆಂಬೆ ನಾ ಶರ್ವಾಣಿ ವರನ ಸಿರಿಪತಿ ಶಾಙ್ರ್ಗಧರನ ವರಸಿಂಧು bheemashankara. Show all posts
Showing posts with label ಶರಣೆಂಬೆ ನಾ ಶರ್ವಾಣಿ ವರನ ಸಿರಿಪತಿ ಶಾಙ್ರ್ಗಧರನ ವರಸಿಂಧು bheemashankara. Show all posts

Friday 6 August 2021

ಶರಣೆಂಬೆ ನಾ ಶರ್ವಾಣಿ ವರನ ಸಿರಿಪತಿ ಶಾಙ್ರ್ಗಧರನ ವರಸಿಂಧು ankita bheemashankara

 ..

 kruti by ಭೀಮಾಶಂಕರರು ದಾಸರು bheemashankara


ಶರಣೆಂಬೆ ನಾ ಶರ್ವಾಣಿ ವರನ | ಸಿರಿಪತಿ ಶಾಙ್ರ್ಗಧರನ ವರಸಿಂಧು ನಗರದೊಳು |ಸ್ಥಿರ ಭೋಗಗೊಂಬ ಸಂಗಮನ ಪ


ಬಾಲೇಂದು ಮುಡಿದ ಭಸಿತಾಂಗ | ಕಾಳಿಗರ್ಧಾಂಗಾ |ಪಾಲಿಸಿ ಕೊಡುವರೆ ದೊರೆಯ ಪೇಳಲಿಕಿನ್ನಾರನೈದಾರೆ |ಭಾಲಾಕ್ಷನ ಲೀಲಾ ವಿಲಾಸ ಭೋಳಾ ದೇವೇಶ | ಕಾಲಿ ಗೆರಗಿ ಬ್ರಹ್ಮಾದಿಕರು ಕಾಲಾಂತಕನ ವರ ಪಡೆವರು |ನೀಲಕಂಧರನ ನಿಗಮೋದ್ಧಾರನ ಸ್ಥೂಲ ಶರೀರನ ಸುಖಸಂಚಾರನ ಶೀಲಕ ದೂರನ | ಶಾಂತಾಕಾರನ |ಮಾಲಾಧರನ ಮಹಾ ಗುರುಹರನ1


ಸುರನದೀ ಶಿರಧರನ ಶುಭಕರನ ಪರತರಪುರ ಹರನ | ತರುಣೇಂದು ಕೋಟಿಗಳೊಮ್ಮೆ ನೆರೆದಂತೆ ಕಳೇವರ ಕಳೆಪೊಳೆಯೆ | ನಿರವಧಿ ಸ್ವರೂಪ ನಿಜರೂಪ ಅರಿತವನ ತಾಪ |ಉರಿಯಪ್ಪಿದಾ ಕರ್ಪುರದಂತೆ ಕರಗದುಳಿವುದೇ ಅದರಂತೆ ಪರಮ ಪವಿತ್ರನ ಪಾವಕ ನೇತ್ರನ ಸುರಮುನಿ ಸ್ತೋತ್ರನ ಸುಂದರ ಗಾತ್ರನ ನರಹರಿ ಮಿತ್ರನಹಿಗಳ ಸೂತ್ರನ ಶಿರಕರ ಪಾತ್ರನ ಶಿವಸ್ವತಂತ್ರನ 2


ಕಮಲಾಕ್ಷನ ಕಡುಭಕ್ತಿ ಕಂಡು ಕಮನೀಯ ಚಕ್ರ | ಸುಮನಾ ಸಾದು ಕೊಡಲು ನೋಡೆ ತಮ್ಮ ತಮಗೆಲ್ಲ ಕೊಂಡಾಡೆ ಶಮನಾಘ ಶಾಸನವ ಮಾಡಿದನು ಸುಮ್ಮನಿದ್ದೀಯಲ್ಲೋ ನೀನು | ಅಮಿತ ಭಕ್ತರು ಇಳೆಯೋಳ್ ಇಹರು ನಮಿಸಲು ಸಲಹಿಕಾವನು |ಅಮರರ ಹೊರೆವನ ಅಧಿಕ ಪ್ರಭಾವನ ತಿಮಿರವ ಕಳೆವನ ತೀರದಲಿವನ ಹಿಮಸುತೆ ಜೀವನ ಹಿಡಿದಿಹ ತ್ರಿಭುವನನ | ಶ್ರಮಗಳನಳಿವನ ಶಂಕರ ಭೀಮಾ ಶಂಕರನ 3

***