..
kruti: tandevaradagopala vittala (ಪ್ರಹ್ಲಾದಗೌಡರು)
ರೋಗವನು ಪರಿಹರಿಸೊ ಗುರು ರಾಘವೇಂದ್ರಾ ಪ
ಕರಮುಗಿದು ಬಿನ್ನೈಪೆ ಧೀರ ಯೋಗೇಂದ್ರ ಪಾಲಾ ಅ.ಪ.
ಅರಿಯದಾ ತರಳ ತನ್ನ ನಿಜಮತಿಯಿಂದ ದೂಷಿಸಲಿಲ್ಲ ಪರರ ಮಾತನು ಕೇಳಿ ದೂಷಿಸಿದನಲ್ಲದೇ 1
ಏನ ಪೇಳಲಿ ಗುರುವೆ ನಿನ್ನ ಸಮಕರುಣಿಗಳು ಇನ್ನುಂಟೆ ಜಗದೊಳು ಕೇಳಿದ ಕಾರಣದಿ ಬಂದು ಬಿನ್ನೈಸಿದೆ 2
ಬಾಲಕನು ಪರಿಪರಿಯಿಂದ ಪೀಡಿತನಾಗಿ ಬೆಂಡುಬೆಂಡಾದಾತಂದೆವರದಗೋಪಾಲವಿಠ್ಠಲ ಪ್ರೀಯಾ 3
***