..
kruti by ವರದೇಶ ವಿಠಲರು varadesha vittala dasaru
ಪಾಲಿಸೆನ್ನನು ಪವಮಾನನ ರಾಣಿ
ಪಾಲಿಸೆನ್ನ ಸುಗುಣಾಲಯ ಶ್ರೀಹರಿ
ಲೀಲೆ ತಿಳಿಸಿ ಭವಜಾಲವ ಹರಿಸೆ ಪ
ಮಾತರಿಶ್ವÀ ಸತಿ, ಪ್ರೀತಿಲಿ ಹರಿಪದ
ದೂತನೆನಿಸಿ, ಅನಾಥನ ಪೊರಿಯೆ 1
ವಿದ್ಯುನ್ನಾಮಕೆ ವಿದ್ವಜ್ಜನಪಾ -
ದದ್ವಯ ಸೇವಿತ ಬುದ್ಧಿಯ ನೀಡೆ 2
ಲಿಂಗನಿವಾಸಿ ವಿಲಿಂಗಗೈಸಿ ಯನ್ನ
ರಂಗನ ಪದದಲಿ ಭೃಂಗನ ಮಾಡಿ3
ಜನನಿಯೆ ನಿನ್ನಯ ತನಯಗೆ ಜ್ಞಾನದ
ಸ್ತನವನಿತ್ತು ಪೊರೆ ಹನುಮನರಸಿಯೆ 4
ಶರಣಾಗತಜನ ಪೊರೆಯುವ ಕರುಣಿಯ
ವರದೇಶ ವಿಠಲನ ಚರಣವ ತೋರೆ 5
***