by ಪ್ರಾಣೇಶದಾಸರು
ಆರ ಮುಂಧೇಳಲಿ ಕರಕರಿಯ ಈ |
ಪೋರನು ಕೊಡವಲ್ಲನಲ್ಲೇ ಸೀರೆಯ
ಪದಾರಿಯೊಳ್ಹೋಗಿ ಬಹರ್ಯಾರೆನ್ನ ಕಂಡರೆ |
ಊರೆಲ್ಲ ಹೋಗಿ ದೂರರೇನೆ1
ಸಂತಿಗೆ ಹೋಗ್ಯಾಕೆ ನಿಂತರೆಂದುಡುಕುತ |
ಕಾಂತನೇ ಬಂದರೇನಂತ ಹೇಳುವಾ 2
ಬತ್ತಲಾರಾಗಿ ಜಲ ಮತ್ತೀಗ ಸೇರುವಾಗಿ |
ಮೃತ್ಯು ಬಂದನಂಬುದರ್ತಿವೇನೆ 3
ನೀರ ಹಾವುಗಳೆಲ್ಲ ಶರೀರವ ಸುತ್ತುತಿವೆ |
ಗಾರಾದೆವಲ್ಲೆ ವಾರಿಜಾಸ್ಯೆ 4
ಮುಳ್ಳು ತೆಪ್ಪವು ಮೋರೆಗೆಲ್ಲ ಮುಚ್ಚುತಲಿವೆ |
ಖುಲ್ಲಪೋರಗೆ ದಯೆಯಿಲ್ಲವಲ್ಲೇ 5
ಜಲ ಜಂತುಗಳೆಲ್ಲ ಗುಳು ಗುಳು ಮಾಡುತವೆ |
ಜಲಜಾಕ್ಷಗ್ಯೇತಕೆ ತಿಳಿಯದಮ್ಮ 6
ಮೀನಾಗಳಲ್ಲಿ ಹತ್ತಿ ಏನೇನೋ ಮಾಡುತವೆ |
ಏಣಾಕ್ಷಿ ನಮಗೇ ಏನು ಬಂತೇ 7
ಹಿಂದತ್ತ ಹೋದರೆ ಕಂಧರದುದ್ದ ನೀರು |
ಮುಂದತ್ತ ಬರೆ ಎದೆಗಿಂದ ಕೆಳಗೆ 8
ಏಡಿಗಳೆಲ್ಲ ಕಾಲು ನೋಡಿ ಕಚ್ಚುತಲಿವೆ |
ಮಾಡಲಿನೆ ಮೋರೆ ಬಾಡಿತಲ್ಲೆ 9
ಮೂಗುತಿ ಮಣಿಯೆಲ್ಲ ಹೇಗೋ ಎಲ್ಲ್ಯೋ ಎನಲು |
ಈ ಗತಿಯಾಗೆ ಮನೆಗೆ ಹೋಗೋದ್ಹ್ಯಾಂಗೆ 10
ಏನಾದರಾಗಲಿ ಪ್ರಾಣೇಶ ವಿಠಲಗೆ |
ನೀನೇ ಗತಿಯೋ ಕಾಯೊ ಎನ್ನಬೇಕೇ 11
******
ಆರ ಮುಂಧೇಳಲಿ ಕರಕರಿಯ ಈ |
ಪೋರನು ಕೊಡವಲ್ಲನಲ್ಲೇ ಸೀರೆಯ
ಪದಾರಿಯೊಳ್ಹೋಗಿ ಬಹರ್ಯಾರೆನ್ನ ಕಂಡರೆ |
ಊರೆಲ್ಲ ಹೋಗಿ ದೂರರೇನೆ1
ಸಂತಿಗೆ ಹೋಗ್ಯಾಕೆ ನಿಂತರೆಂದುಡುಕುತ |
ಕಾಂತನೇ ಬಂದರೇನಂತ ಹೇಳುವಾ 2
ಬತ್ತಲಾರಾಗಿ ಜಲ ಮತ್ತೀಗ ಸೇರುವಾಗಿ |
ಮೃತ್ಯು ಬಂದನಂಬುದರ್ತಿವೇನೆ 3
ನೀರ ಹಾವುಗಳೆಲ್ಲ ಶರೀರವ ಸುತ್ತುತಿವೆ |
ಗಾರಾದೆವಲ್ಲೆ ವಾರಿಜಾಸ್ಯೆ 4
ಮುಳ್ಳು ತೆಪ್ಪವು ಮೋರೆಗೆಲ್ಲ ಮುಚ್ಚುತಲಿವೆ |
ಖುಲ್ಲಪೋರಗೆ ದಯೆಯಿಲ್ಲವಲ್ಲೇ 5
ಜಲ ಜಂತುಗಳೆಲ್ಲ ಗುಳು ಗುಳು ಮಾಡುತವೆ |
ಜಲಜಾಕ್ಷಗ್ಯೇತಕೆ ತಿಳಿಯದಮ್ಮ 6
ಮೀನಾಗಳಲ್ಲಿ ಹತ್ತಿ ಏನೇನೋ ಮಾಡುತವೆ |
ಏಣಾಕ್ಷಿ ನಮಗೇ ಏನು ಬಂತೇ 7
ಹಿಂದತ್ತ ಹೋದರೆ ಕಂಧರದುದ್ದ ನೀರು |
ಮುಂದತ್ತ ಬರೆ ಎದೆಗಿಂದ ಕೆಳಗೆ 8
ಏಡಿಗಳೆಲ್ಲ ಕಾಲು ನೋಡಿ ಕಚ್ಚುತಲಿವೆ |
ಮಾಡಲಿನೆ ಮೋರೆ ಬಾಡಿತಲ್ಲೆ 9
ಮೂಗುತಿ ಮಣಿಯೆಲ್ಲ ಹೇಗೋ ಎಲ್ಲ್ಯೋ ಎನಲು |
ಈ ಗತಿಯಾಗೆ ಮನೆಗೆ ಹೋಗೋದ್ಹ್ಯಾಂಗೆ 10
ಏನಾದರಾಗಲಿ ಪ್ರಾಣೇಶ ವಿಠಲಗೆ |
ನೀನೇ ಗತಿಯೋ ಕಾಯೊ ಎನ್ನಬೇಕೇ 11
******