..
kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru
ಬೃಹಸ್ಪತಿ ಸ್ತೋತ್ರ
ವಂದಿಪೆ ದೇವ ಗುರೋ ನಿನ್ನ ಪಾದಾಂಬುಜದ್ವಯಕೆ
ಇಂದುಶೇಖರ ಅರವಿಂದಾಸನುತ ಇಂದಿರೇಶಗೆ -
- ಪ್ರಿಯ ಹಿತದಿಪಾಲಿಸೊ ಎನ್ನ ಪ
ಬ್ರಹ್ಮಮಾನಸ ಪುತ್ರ ಅಂಗೀರ ಶ್ರದ್ಧಾದಂಪತಿಗೆ
ಬೃಹಸ್ಪತಿ ನೀ ಮಗನಾಗಿ ಜನಿಸಿ ಖ್ಯಾತನಾದಿಯೋ ತಾರೇಶ
ಬ್ರಹ್ಮಜ್ಞಾನದಲಿ ಬುದ್ಧಿ ಕೌಶಲ್ಯದಿ ಬ್ರಹ್ಮಿಷ್ಠನೆ ನಿನಗೆಣೆಯುಂಟೆ 1
ದೇವತಾ ವೃಂದಕ್ಕೆ ತಪೋಧನ ಋಷಿಗಳ ಸಮೂಹಕ್ಕೆ
ಸರ್ವಲೋಕತ್ರಯ ಸಜ್ಜನರಿಗೆ ಗುರು ಶರಣೆಂಬೆ ಕಾಂಚನಸನ್ನಿಭನೇ
ದೇವಮಂತ್ರಿಯೇ ವಿಶಾಲಾಕ್ಷ ಸದಾ ನೀ ಲೋಕಹಿತೇ -
- ರತ ಪಾಲಯಮಾಂ 2
ಪದುಮಾಸನ ಪಿತನು ಪ್ರಸನ್ನ ಶ್ರೀನಿವಾಸ ಪದುಮೇಗೆ
ಮದುವೆ ಪತ್ರಿಕಾ ಮಹೋತ್ಸವ ಸೇವೆ ಮುದದಿ ಗೈದಿಯೋ ನೀ ಎನ್ನ
ಗೃಹದಿ ಮದುವೆ ಪೂಜೆ ಶ್ರೀಹರಿ ಪ್ರೀತಿಗೆ ನಿರಂತರ ಮಾಡಿಸೋ 3
***