Showing posts with label ನಿನ್ನ ದಾಸರ ದಾಸನೆಂತಾಹೆನೋ jagannatha vittala. Show all posts
Showing posts with label ನಿನ್ನ ದಾಸರ ದಾಸನೆಂತಾಹೆನೋ jagannatha vittala. Show all posts

Saturday 14 December 2019

ನಿನ್ನ ದಾಸರ ದಾಸನೆಂತಾಹೆನೋ ankita jagannatha vittala

 .. ಅಂಕಿತ ಗುರುಜಗನ್ನಾತ ವಿಠ್ಠಲ ?

ರಾಗ -ಕಾಂಬೋಧಿ (ಮಾಲಕಂಸ್) ಝಂಪೆತಾಳ

ನಿನ್ನ ದಾಸರ ದಾಸನೆಂತಾಹೆನೋ ||ಪ||
ಅನಂತ ಅಪರಾಧವನುಗಾಲ ಮಾಡುತಿಹೆ ||ಅ.ಪ||

ಸ್ನಾನ ಸಂಧ್ಯಾನ ಜಪ ಮೌನವೇ ಮೊದಲಾದ
ನಾನಾ ವಿಧದ ವಿಹಿತ ಧರ್ಮ ತೊರೆದು
ನಾನು ನನ್ನದು ಎಂಬ ಹೀನ ಬುದ್ಧಿಗಳಿಂದ
ಹೀನ ಜನರೊಡನಾಡಿ ಜ್ಞಾನಿ ಜನಗಳ ನಿಂದಿಸಿದೆ ||೧||

ಏಕಾದಶಿಯ ಜರೆದು ಲೋಕವಾರ್ತೆಗಳಿಂದ
ಶ್ರೀಕಾಂತ ನಿನ್ನ ಸೇವೆಯನು ಮರೆದು
ಬೇಕಾದ ವೈಷಿಕವ ಸ್ವೀಕರಿಸಿ ಲೋಕದೊಳು
ಸಾಕಿದವರನು ನಾ ನಿರಾಕರಿಸಿ ಬಾಳುವೆನು ||೨||

ಎನಗಧಿಕರಾದವರೊಡನೆ ದ್ವೇಷವನು
ಅನುಗಾಲ ಮಾಡುವೆನು ಅನಿಮಿಷೇಶ
ಎನಗೆ ಸರಿಯಾದವರ ಕಂಡು ಮತ್ಸರಿಸುವೆನು
ಎನಗಿಂತ ನೀಚರನು ನೋಡಿ ನಾ ನಗುತಿಪ್ಪೆ ||೩||

ಕಾಸಿನಾಸೆಗೆ ಪೋಗಿ ದಾಸವೇಷವ ಧರಿಸಿ
ಮೋಸ ಮಾಡುವೆ ಜನರ ಪಾಶ ಬೀರಿ
ವಾಸುದೇವನೆ ಸರ್ವದೇಶಕಲಾದಿಗಳಿ-
ಗೀಶನೆಂದರಿಯದಲೆ ಮೋಸ ಹೋದೆನು ಸ್ವಾಮಿ ||೪||

ಸಕಲದುರ್ಗುಣಗಳಾಗಾರ ನಾನವನಿಯೊಳು
ಭಕುತಿ ವೈರಾಗ್ಯ ಪ್ರಸಕುತಿಯಿಲ್ಲ
ಭಕುತ ವತ್ಸಲ ಜಗನ್ನಾಥವಿಠಲನೆ
ಅಕಳಂಕ ಮಹಿಮ ಮುಕುತಾಮುಕುತರಿಗೆ ಒಡೆಯ||೫
***

pallavi

ninna dAsara dAsanentAhenO

anupallavi

ananta aparAdavangAla mADutihE

caraNam 1

snAna sandhyAna japa maunavE modalAda nAnA vidhada vihita dharma toredu
nAnu nannadu embe hIna buddhigaLinda hIna janarodenADi jnAnigaLa nindiside

caraNam 2

EkAdashiya jaredu lOkavArtegaLinda shRikAnta ninna sEveyenu maredu
bEkAda vaishikava svIkarisi lOkadoLu sAkidavaranu nA nirAkarisi bALuvenu

caraNam 3

enegindhadhikarAdhavaroDane dvESavanu anugAla mADuvenu animishIsha
enage sariyAdavara kaNDu matsarisuvenu enaginta nIcaranu nODi nA nagutippe

caraNam 4

kAsinAsege pOgi dAsa vEShava dharisi mOsamADuve janara pAshadIdi
vAsudEvane sarvadEsha kAlAdigaLi gItanendariyadale mOsahOden svAmi

caraNam 5

sakala durgNagaLAgara nAnAvaniyoLu bhakuti vairAgya prasakutiyilla
bhakuta vatsala jagannAtha viThalane akaLanka mahima mukutA mukutarige oDeya
***


ನಿನ್ನ ದಾಸರ ದಾಸ ನೆಂತಹೆನೋ

ಅನಂತ ಅಪರಾಧ ಅನುಗಾಲ ಮಾಡುತಿಹೆ ಪ


ಸ್ನಾನ ಸಂದ್ಯಾ ಜಪ ಮೌನವೇ ಮೊದಲಾದ

ನಾನಾವಿಧದ ವಿಹಿತ ಧರ್ಮತೊರೆದು

ನಾನು ನನ್ನದು ಎಂಬೊ ಹೀನ ಬುದ್ಧಿಗಳಿಂದ

ಹೀನ ಜನರೊಡಗೂಡಿ ಜ್ಞಾನಿಗಳ ನಿಂದಿಸುವೆ 1


ಏಕಾದಶಿಯ ಜರಿದು ಲೋಕವಾರ್ತೆಗಳಿಂದ

ಶ್ರೀಕಾಂತ ನಿನ್ನ ಸೇವೆಯನು ಮರೆದು

ಬೇಕಾದ ವೈಷಿಕವ ಸ್ವೀಕರಿಸಿ ಲೋಕÀದೊಳು

ಸಾಕಿದವರನು ನಾ ನಿರಾಕರಿಸಿ ಬಾಳುವೆನು 2


ಎನಗಿಂತ ಅಧಿಕರಾದವರ ಕೂಡ ದ್ವೇಷವನು

ಅನುಗಾಲ ಮಾಡುವೆನೊ ಅನಿಮಿಷೇಶಾ

ಎನಗೆ ಸರಿಯಾದವರ ಕಂಡು ಮತ್ಸರಿಸುವೆನು

ಎನಗಿಂತ ನೀಚರನು ನಾ ನೋಡಿ ನಗುತಿಪ್ಪೆ 3


ಕಾಸಿನಾಸೆಗೆ ಪೋಗಿ ದಾಸವೇಷವ ಧರಿಸಿ

ಮೋಸಮಾಡುವೆ ಜನರ ಪಾಶದಿಂದಾ

ವಾಸುದೇವನೆ ಸರ್ವದೇಶ ಕಾಲಾದಿಗಳಿ

ಗೀಶನೆಂದರಿಯದಲೆ ಮೋಸಹೋದೆನು ಸ್ವಾಮಿ 4


ಸಕಲ ದುರ್ಗುಣಕೆ ಆಗಾರ ನಾನವನಿಯೊಳು

ಭಕುತಿ ವೈರಾಗ್ಯ ಪ್ರಸಕುತಿಯಿಲ್ಲಾ

ಭಕುತವತ್ಸಲ ಗುರುಜಗನ್ನಾಥವಿಠಲನೆ

ಅಕಳಂಕಮಹಿಮನೆ ಮುಕುತಾಮುಕುತರೊಡೆಯಾ 5

***