Showing posts with label ಶಮ ದಮ ಗುಣ ಸಂಪನ್ನಾ ಸುಶಮೀಂದ್ರ ಗುರುವರ್ಯ venkatanatha sushameendra teertha stutih. Show all posts
Showing posts with label ಶಮ ದಮ ಗುಣ ಸಂಪನ್ನಾ ಸುಶಮೀಂದ್ರ ಗುರುವರ್ಯ venkatanatha sushameendra teertha stutih. Show all posts

Saturday 1 May 2021

ಶಮ ದಮ ಗುಣ ಸಂಪನ್ನಾ ಸುಶಮೀಂದ್ರ ಗುರುವರ್ಯ ankita venkatanatha sushameendra teertha stutih

sushameendra teertha, rayara mutt stutih

ಆಚಾರ್ಯ ನಾಗರಾಜು ಹಾವೇರಿ " ವೇಂಕಟನಾಥ " ಮುದ್ರಿಕೆಯಲ್ಲಿ.... 

ಶಮ ದಮ ಗುಣ -

ಸಂಪನ್ನಾ । ಸು ।

ಶಮೀಂದ್ರ ಗುರುವರ್ಯ 

ಸಲಹೋ ।। ಪಲ್ಲವಿ ।।

ಸುಜಯೀ೦ದ್ರ -

ಕರಕಂಜ ಜಾತಾ ।

ಸುಶಮೀ೦ದ್ರ ನಾಮಾದಿ -

ಮೆರೆವಾ ।। ಚರಣ ।।


ರಾಘವೇಂದ್ರ 

ಕರುಣಾಭರಣ ।

ಅಘ ಪರಿಹರಿಸಿ 

ರಕ್ಷಿಸೋ  ।। ಚರಣ ।।


ಇಳೆಯೊಳಗೆ ನಮ್ಮ 

ಗುರುರಾಯರನು ।

ಕಾಲಕಾಲದಿ ಸ್ಥಾಪಿಸಿ 

ಪ್ರಖ್ಯಾತನಾದ ।। ಚರಣ ।।


ಮಧ್ವ ಶಾಸ್ತ್ರವನು 

ಮುದ್ರಿಸಿ ಪ್ರಕಟಿಸಿ ।

ಮಧ್ವ, ರಾಯರ ಕ-

ರುಣೆಗೆ ಪಾತ್ರನಾದ ।। ಚರಣ ।।


ವರ ಯಾಗಾದಿಗಳನು 

ಸಡಗರದಿ ತಾ ರಚಿಸಿ ।

ಗುರುಸಾರ್ವಭೌಮರಿಗೆ 

ವಿನಯದಲಿ ತಾ ಅರ್ಪಿಸಿ ।। ಚರಣ ।।


ರಾಜಾಧಿರಾಜ ಶ್ರೀ ಹರಿ -

ಪ್ರಿಯನಾದ । ನಾಗ ।

ರಾಜ ಶಯ್ಯ ವೇಂಕಟನಾಥನ  -

ವಿಶೇಷ ಸನ್ನಿಧಾನದಿ ಶೋಭಿಪಾ ।। ಚರಣ ।।

***