ಕಾಖಂಡಕಿ ಶ್ರೀ ಮಹಿಪತಿರಾಯರು
ಏಸು ಜನ್ಮದಲೇನು ಪುಣ್ಯಮಾಡಿದೆವೊ ಲೇಸಾಗಿನ್ನು ಸ್ವಾಮಿ ನಿಮ್ಮನ ಕಂಡೆವೊ p
ಸಾಧನವೆಂಥಾದೆಂಬುದು ನಾವಿನ್ನರಿಯೆವೊ ನಿಮ್ಮ ದರುಶನದಲಿ ಪಾವನಾದೆವೊ ಇದೆ ಸಕಲ ಸಾಧನದ ಸುಫಲವೊ ಸ್ವಾಮಿ ನಿಮ್ಮ ದಯಕ ಸಾನುಕೂಲವೊ 1
ಮನೋಹರ ಮೋಹನಮೂರ್ತಿ ಕಂಡೆವೊ ಕೃಷ್ಣ ನಿಮ್ಮನ ಬಿಗಿದಪ್ಪಿಕೊಂಡೆವೊ ನಾನಾಸವಿಯ ನೆಲೆಗಳೂಟ ಉಂಡೆವೊ ಎಂದೂ ಬಿಡದೆ ಹೃದಯಲಿಟ್ಟುಕೊಂಡೆವೊ 2
ಹೆಣ್ಣು ಪ್ರಾಣಿಗಳು ನಾವೇನು ಬಲ್ಲ್ಲಿವೊ ನಿಮ್ಮ ವಿನಾ ಇನ್ನೊಂದು ನಾವೊಲ್ಲಿವೊ ಚನ್ನಾಗೊಲಿದ ಭಾನುಕೋಟಿ ನಮ್ಮಲ್ಲಿವೊ ಚಿಣ್ಣಮಹಿಪತಿಗಿದೆ ಸಾಫಲ್ಯವೊ 3
***