ಕಾಖಂಡಕಿ ಶ್ರೀ ಮಹಿಪತಿರಾಯರು
ನೋಡಬಾರದೆ ಹರಿಯ ಮನವೆ ಪ
ಸುಲಲಿತವಾಗಿ ಸುಲ್ಲಭವಾಗ್ಹಾನೆ ನೆಲೆ ನಿಭವಾಗಿ ತನ್ನೊಳು ತುಂಬ್ಹಾನೆ 1
ಹೃದಯಕಮಲದೊಳು (ಕರೆಗುಡು)ತ್ಹಾನೆ ಸದೋದಿತ ಸವಿಸುಖ ಬೀರುತಲ್ಹಾನೆ 2
ಹಲವು ಪರಿಯಲಿ ತಾ ಸಲಹುತಲ್ಹಾನೆ ಕುಲಕೋಟಿ ಬಂಧು ಬಳಗಾಗ್ಹಾನೆ 3
ಕಣ್ಣಿನ ಮುಂದೆವೆ ತಾನೆ ಕಟ್ಹಾನೆ ಬಣ್ಣ ಬಣ್ಣದಲಿ ತಾ ಭಾಸುತಲ್ಹಾನೆ 4
ಸ್ವಹಿತ ಸುಖದ ಸುಮೂರುತಿ ಆಗ್ಹಾನೆ ಮಹಿಪತಿಯೊಳು ಶ್ರೀಪತಿ ಆಗ್ಹಾನೆ 5
****