ಪರಾಕು ಮಾಡದೆ ಪರಾಮರಿಸಿ ಎನ್ನ
ಅಪರಾಧಂಗಳ ಕ್ಷಮಿಸೊ ||ಪ||
ಧರಾರಮಣ ಫಣಿಧರಾರ್ಚಿತ
ಸುರಾಧಿಪತಿ ವಿಧಿ ಹರಾದಿವಂದಿತ ||ಅ.ಪ||
ನರರೊಳಗೆ ಪಾಮರನು ನಾನಿಹ-
ಪರಕೆ ಸಾಧನವರಿಯೆ ಶ್ರೀಹರಿಯೆ
ಶರಣು ಹೊಕ್ಕೆ ನಿನ್ನ ಚರಣ ಕಮಲಕ್ಕೆ
ಕರುಣದಿಂ ನಿನ್ನ ಸ್ಮರಣೆ ಎನಗಿತ್ತು ||
ಜಪವನರಿಯೆನು ತಪವನರಿಯೆನು
ಉಪವಾಸ ವ್ರತಗಳನರಿಯೆ ಶ್ರೀ ಹರಿಯೆ
ಕೃಪಾವಲೋಕನದಿಂದ ಆ ಪಾಪಗಳನೆಲ್ಲ
ಅಪಾಹತವ ಮಾಡೊ ಅಪಾರ ಮಹಿಮನೆ ||
ಕರಿಯ ರಕ್ಷಿಸಿ ದ್ರೌಪದಿಯ ಮೊರೆ ಲಾಲಿಸಿ
ತರಳಗೊಲಿದು ನೀ ಪೊರೆದೆ ದಯದೆ
ಸಿರಿಯರಸ ನಿನ್ನ ಸರಿಯಾರು ಕಾಣೆ
ಕರುಣಿಸಯ್ಯ ಶ್ರೀ ಪುರಂದರ ವಿಟ್ಠಲ ||
***
ರಾಗ ಸಾವೇರಿ ಆದಿ ತಾಳ (raga, taala may differ in audio)
Paraku madade parambarisi enna a-
Paradhangala kshamiso||pa||
Dhararamana panidharamararcita
Suradhipati vidhi haradi vandita||a.pa||
Nararolage pamaranu naniha
Parake sadhanavariye sri hariye
Saranu hokke ninna carana kamalake
Karunadinda ninna smarane enagittu||1||
Japavanariyenu tapavanariyenu
Upavasa vratagalanariye sri hariye
Krupavalokanadi A papagalanella
Apahrutava mado apara mahimane||2||
Karirajanuddharisi draupadiya
More lalisi taralanigolidu ni porede
Siriyarasa ninna sari yara kane
Purarinuta siri purandaravithala||3||
***
pallavi
parAku mADade parAmbarisi enna aparAdhangaLa kSamiso
anupallavi
dharA ramaNa phaNidharArcita surAdhipati vandita
caraNam 1
nararoLage pAmaranu nAniha parake sAdhanavariye shrI hariye
sharaNu hokke ninna caraNa kamalakke kaRuNadhim ninna smaraNe enagittu
caraNam 2
japavanariyenu tapavanariyenu upavAsa vratagaLanariye shrI hariye
krpAvalOkanadinda A pApagaLanella apAhatava mADo apAra mahimane
caraNam 3
kariya rakSisi draupadiya more lAlisi taraLa kolidu nI porede dayadi
sariyarasa ninna sariyAru kANe karuNisayya shrI purandara viTTala
***
ಪರಾಕು ಮಾಡದೆ ಪರಾಂಬರಿಸಿ ಎನ್ನ ಅ-
ಪರಾಧಂಗಳ ಕ್ಷಮಿಸೋ||pa||
ಧರಾರಮಣ ಫಣಿಧರಾಮರಾರ್ಚಿತ
ಸುರಾಧಿಪತಿ ವಿಧಿ ಹರಾದಿ ವಂದಿತ||a.pa||
ನರರೊಳಗೆ ಪಾಮರನು ನಾನಿಹ
ಪರಕೆ ಸಾಧನವರಿಯೆ ಶ್ರೀ ಹರಿಯೆ
ಶರಣು ಹೊಕ್ಕೆ ನಿನ್ನ ಚರಣ ಕಮಲಕೆ
ಕರುಣದಿಂದ ನಿನ್ನ ಸ್ಮರಣೆ ಎನಗಿತ್ತು||1||
ಜಪವನರಿಯೆನು ತಪವನರಿಯೆನು
ಉಪವಾಸ ವ್ರತಗಳನರಿಯೆ ಶ್ರೀ ಹರಿಯೆ
ಕೃಪಾವಲೋಕನದಿ ಆ ಪಾಪಗಳನೆಲ್ಲ
ಅಪಹೃತವ ಮಾಡೊ ಅಪಾರ ಮಹಿಮನೆ||2||
ಕರಿರಾಜನುದ್ಧರಿಸಿ ದ್ರೌಪದಿಯ
ಮೊರೆ ಲಾಲಿಸಿ ತರಳನಿಗೊಲಿದು ನೀ ಪೊರೆದೆ
ಸಿರಿಯರಸ ನಿನ್ನ ಸರಿ ಯಾರ ಕಾಣೆ
ಪುರಾರಿನುತ ಸಿರಿ ಪುರಂದರವಿಠಲ||3||
***
ಪುರಂದರದಾಸರು
ಪರಾಕು ಮಾಡದೆ ಪರಾಮರಿಸಿ ಎನ್ನಪರಾಧಂಗಳ ಕ್ಷಮಿಸೋ ಪ
ಧರಾರಮಣ ಫಣಿಧರಾಮರಾರ್ಚಿತಸುರಾಧಿಪತಿವಿಧಿಹರಾದಿ ವಂದಿತಅ.¥ À
ನರರೊಳಗೆ ಪಾಮರನು ನಾನಿಹಪರಕೆ ಸಾಧನವರೀಯೆ ಶ್ರೀಹರಿ ||ಚರಣಕಮಲಕೆ ಶರಣುಹೊಕ್ಕೆನುಕರುಣದಿಂದ ನಿನ್ನ ಸ್ಮರಣೆಯೆನಗಿತ್ತು 1
ಜಪವನರಿಯೆನು ತಪವನರಿಯೆನುಉಪವಾಸ ವ್ರತಗಳ ನಾನರಿಯೆ ||ಕೃಪಾವಲೋಕನದಿಂದ ಆ ಪಾಪಗಳನೆಲ್ಲಅಪಹತವ ಮಾಡೋ ಅಪಾರಮಹಿಮನೇ 2
ಕರಿರಾಜನುದ್ಧರಿಸಿ ದ್ರೌಪದಿಯಮೊರೆಯ ಲಾಲಿಸಿ ತರುಳಗೊಲಿದು ನೀಸಿರಿರಮಣ ನಿನ್ನ ಸರಿಯಾರ ಕಾಣೆಪುರಾರಿನುತಸಿರಿಪುರಂದರವಿಠಲ3
****