Showing posts with label ನೆಚ್ಚಬೇಡ ನೀ ನೆಚ್ಚಬೇಡ ನೆಚ್ಚಬೇಡ ಕುಲಧರ್ಮ ಬಿಟ್ಟು purandara vittala. Show all posts
Showing posts with label ನೆಚ್ಚಬೇಡ ನೀ ನೆಚ್ಚಬೇಡ ನೆಚ್ಚಬೇಡ ಕುಲಧರ್ಮ ಬಿಟ್ಟು purandara vittala. Show all posts

Thursday, 5 December 2019

ನೆಚ್ಚಬೇಡ ನೀ ನೆಚ್ಚಬೇಡ ನೆಚ್ಚಬೇಡ ಕುಲಧರ್ಮ ಬಿಟ್ಟು purandara vittala

ರಾಗ ನೀಲಾಂಬರಿ ರೂಪಕ ತಾಳ 

ನೆಚ್ಚಬೇಡ ನೀ ನೆಚ್ಚಬೇಡ ||
ನೆಚ್ಚಬೇಡ ಕುಲಧರ್ಮ ಬಿಟ್ಟು ನಡೆಯಬೇಡ ||

ದೇಹಿಯೆಂದರೆ ನಾಸ್ತಿಯೆನ್ನಬೇಡ ಈ
ದೇಹ ಸ್ಥಿರವೆಂದು ನಂಬಬೇಡ
ದೀನತನದಲ್ಲಿ ದ್ರವ್ಯ ಗಳಿಸಬೇಡ
ದೀನನಾಥನ ನೀ ಮರೆಯಬೇಡ ||

ಹಿರಿಯಲ್ಲದ ಮನೆಗೆ ಹೋಗಬೇಡ
ಲಂಡತನವ ನೀ ಮಾಡಬೇಡ
ಪರಿಪರಿಯ ನಿಂದೆ ನೀ ಮಾಡಬೇಡ
ಪರಮಾತ್ಮನ ನೀ ಮರೆಯಬೇಡ ||

ನೆಂಟರಿಲ್ಲದ ನಾಡಿಗೆ ನೀ ಹೋಗಬೇಡ
ಉಂಟೆಂದು ಒಬ್ಬರ ಕೂಡೆ ಹೇಳಬೇಡ
ಕಂಟಕನಾಗಿ ನೀ ತಿರುಗಬೇಡ ನರ
ಕಂಠೀರವನ ನೀ ಮರೆಯಬೇಡ ||

ಅಂತರಂಗದ ಮಾತು ಅಗಲಿ ಕೆಡಬೇಡ
ಪಂಕ್ತಿಯೊಳು ಪರಿಭೇದ ಮಾಡಬೇಡ
ನಿನ್ನಂಗವನೆ ನೋಡಿ ಹಿಗ್ಗಬೇಡ
ಜಗದಂತರ್ಯಾಮಿಯ ನೀ ಮರೆಯಬೇಡ ||

ತಂದೆತಾಯಿಗೆ ಕೇಡ ನೀ ನೆನೆಯಬೇಡ
ಎಂದಿಗು ಹುಸಿ ಮಾತನಾಡಬೇಡ
ಸಂದೇಹ ಬೇಡ ಸರ್ವೋತ್ತಮನಾದ ತಂದೆ
ಶ್ರೀ ಪುರಂದರವಿಠಲನ ಮರೆಯಬೇಡ ||
***

pallavi

necca bEDa nI necca bEDa

anupallavi

necca bEDa kuladharma biTTu naDEya bEDa

caraNam 1

dEhiyendare nAstiyenne bEDa I dEha sthiravendu namba bEDa
dInatanadalli dravya gaLIsa bEDa dInanAthana nI mareya bEDa

caraNam 2

hariyallada manege hOga bEDa laNDatanava nI mADa bEDa
pari pariya ninde nI mADa bEDa paramAtmana nI mareya bEDa

caraNam 3

neNTarillada nADige nI hOga bEDa uNTendu obbara kUDe hELa bEDa
kaNTakanAgi nI tiruga bEDa nara kaNTIravana nI mareya bEDa

caraNam 4

antarangadi mAtu agali keDa bEDa pangyoLu parabhEda mADa bEDa
ninnangavane nODi higga bEDa jagadantaryAmiya nI mareya bEDa

caraNam 5

tande tAyige keDa nI neneya bEDa endigu husi mAtanADa bEDa
sandEha bEDa sarvOttamanAda tande shrI purandara viTTalana mareya bEDa
***