Showing posts with label ಹತ್ತೆಂಟು ಸಾಲಿನ ಬತ್ತಾಸದಂಗಡಿ ramesha. Show all posts
Showing posts with label ಹತ್ತೆಂಟು ಸಾಲಿನ ಬತ್ತಾಸದಂಗಡಿ ramesha. Show all posts

Tuesday 15 October 2019

ಹತ್ತೆಂಟು ಸಾಲಿನ ಬತ್ತಾಸದಂಗಡಿ ankita ramesha

ಗಲಗಲಿ ಅವ್ವನವರು

ಹತ್ತೆಂಟು ಸಾಲಿನ ಬತ್ತಾಸದಂಗಡಿ 
ಭತ್ತದ ಅರಳು ಮೊದಲಾಗಿ 
ಭತ್ತದ ಅರಳು ಮೊದಲಾಗಿ ಸಕ್ಕರಿ ಬೊಂಬೆಯ 
ತಂದಿಟ್ಟು ಮಾರುವವರು ಕಡಿಮೆಯಿಲ್ಲ                          ।।ಪ॥ 

ಕುಂಕುಮ ಬುಕ್ಕಿಟ್ಟುಗಳ ಸಾಲು ಅಂಗಡಿ ಕುರಿತಾಗಿ 
ಕುಂಕುಮ ಅರಿಷಿಣ ಅಲಂಕಾರ ದ್ರವ್ಯವ ಅಂಕ ಅಂಕಣಕ ನೆರೆವ್ಯಾರೆ 
ಅಂಕ ಅಂಕಣಕ ನೆರೆವ್ಯಾರೆ ಬೆಲಿ ಮಾಡೊ 
ಕಂಕಣದ ಕೈಯ ಕೆಲದೆಯರು ಕಡಿಮೆಯಿಲ್ಲ                   ।।೧।।

ಬುಕ್ಕಿಟ್ಟು ಪರಿಮಳ ದ್ರವ್ಯ ಪೊಟ್ಟಣವ  ಕಟ್ಟಿ ಥರಥರವು 
ದ್ರವ್ಯವ ಕೊಟ್ಟು ಕೊಂಬುವರು ಕಡಿಮೆಯಿಲ್ಲ 
ಸೋಜಿಗವಾಗಿದ್ದ ಜಾಜಿ ಮಲ್ಲಿಗೆ ಹೂ ಸೂಜಿ ಮಲ್ಲಿಗೆ ಸರಗಳು 
ರಂಗ ಪೂಜೆಗೆ ಒಯ್ಯೋ ಪುರುಷರು                             ।।೨।।

ನಾಲ್ಕು ದಿಕ್ಕಿಗೆ ದಿವ್ಯ ಅಕಾಲ ಹಿಂಡುಗಳು ಸಾಕುವ ಎರಳೆ 
ಎಳಿಗಾವು ಎತ್ತೆತ್ತ ನೋಡಿದರು ಮುತ್ತಿನ ಪಲ್ಲಕ್ಕಿ 
ಉತ್ತಮ ರಥವು ಹಿಡಿದೇಜಿಯ 
ಹಿಡಿದೇಜಿಯ ಮ್ಯಾಲಿನ್ನು ಹತ್ತಿಬಾಹುವರು ಕಡಿಮೆಯಿಲ್ಲ   ।।೩।।

ಬಾಜಾರದೊಳಗಿನ್ನು ರಾಜ ಸಿಂಹಾಸನ 
ರಾಜ ರಮೇಶ ಕುಳಿತಲ್ಲಿಯೆ 
ರಾಜ ರಮೇಶ ಕುಳಿತು ಪೂಜಿಗೊಂಬೊ 
ಮೂರ್ಜಗವು ಮುದದಿಂದ                                         ।।೪।।
********