Showing posts with label ಇಂದಿರೆ ಮಂದಿರದೊಳು ನಿಂದಿರೆ ಇಂದಿರೆ ಹೊಂದಿದೆ hayavadana INDIRE MANDIRADOLU NINDIRE INDIRE HONDIDE. Show all posts
Showing posts with label ಇಂದಿರೆ ಮಂದಿರದೊಳು ನಿಂದಿರೆ ಇಂದಿರೆ ಹೊಂದಿದೆ hayavadana INDIRE MANDIRADOLU NINDIRE INDIRE HONDIDE. Show all posts

Saturday 11 December 2021

ಇಂದಿರೆ ಮಂದಿರದೊಳು ನಿಂದಿರೆ ಇಂದಿರೆ ಹೊಂದಿದೆ ankita hayavadana INDIRE MANDIRADOLU NINDIRE INDIRE HONDIDE



ಶ್ರೀ ವಾದಿರಾಜರು ಶ್ರೀ ಲಕ್ಷ್ಮೀ ದೇವಿ ಯವರನ್ನು ಕುರಿತು ರಚಿಸಿದ ಸುಂದರ ಕೃತಿ.

ಇಂದಿರೆ ಮಂದಿರದೊಳು ನಿಂದಿರೆ//

ಇಂದಿರೆ ಹೊಂದಿದೆ ನಿನ್ನ ಮುದ-
ದಿಂದ ಪಾಲಿಸು ನಿತ್ಯಾ ಎನ್ನ//ಆಹಾ//

ಗಂಧ ತುಳಸಿ ಅರವಿಂದ ಮಲ್ಲಿಗೆ ಪುಷ್ಪ-
ದಿಂದ ಪೂಜಿಸುವೆನು ಕುಂದುಗಳೆಣಿಸದೆ//

ಘಲು ಘಲು ಗೆಜ್ಜೆಯ ನಾದದಿಂದ
ಫಳಫಳಿಸುವ ದಿವ್ಯಪಾದದೊಳು

ಪಿಲ್ಯ ಕಾಲುಂಗುರ ನಾದ ಅಂಘ್ರಿ
ಚಲಿಸುವ ದಿವ್ಯ ಸುಸ್ವಾದ//ಆಹಾ//.

ಕಾಲಲಂದುಗೆ ಗೆಜ್ಜೆ ಝಳಪಿಸುತ ನ--
ಮ್ಯಾಲಯದೊಳು ನಿಲ್ಲೆ ಪಾಲವಾರಿಧಿಕನ್ಯೆ//೧//

ಹರಡಿ ಕಂಕಣ ವಂಕಿ ಡೋರ್ಯ
ಕೊರಳೊಳಗೆ ನಾನಾ ವಿಧದ್ಹಾರ ಬಾಯ-

ಲಿರುವೋ ಕರ್ಪೂರ ವೀಳ್ಯ
ಸಾರೆ ಸುರಭಿ ನಾಸಿಕ ಚಂಪಕ ಪುಷ್ಪಕ್ಹಾರ//ಆಹಾ//

.ಎರಳೆ ಗಂಗಳೆ ಸಿರಿ ಅರಳೆಲೆ ಕುಂಕುಮ
ಹೆರಳುಗೊಂಡ್ಯೆ ಗಳಿಂದ ಹರಿಯ ಮೋದಿಸುವೆ//೨//

ಜಯ ಜಯ ಜಯ ವಿಜಯ ಸಂಪೂರ್ಣೆ ಭಕ್ತ
ಭಯನಿವಾರಣೆ ಎಣೆಗಾಣೆ ಎನ್ನ

ಕಾಯುವರನ್ಯರ ಕಾಣೆ ಶೇಷ--
ಶಯನನ್ನ ತೋರೆ ಸುಶ್ರೇಣಿ//ಆಹಾ//

ಕೈಯ ಪಿಡಿದು ಭವಭಯವ ಪರಿಹರಿಸೆ ಸಿರಿ/
ಹಯವದನ ನ ದಯವ ಪಾಲಿಸೆ ಲಕ್ಷ್ಮೀ//೩//
***


lyrics differ

pallavi

indire mandiradoLu nindire indira deviye ninna pAda nambide salaha bekenna

caraNam 1

ahA gandha tulasi aravinda mallige puSpadinda pUjisuvenu kundugaLenisade ghalu ghalu
gejjeyanadadinda bhali bhalisuva celvapAda divya pilya kAlunguranAdAnghri calisuva divya puSpapAda

caraNam 2

ahA kAlalanduge gejjejulipusuttale namma Alayadalli nille pAlavAridhikanye haradi kanka
vankidvAryaa koralollidha nAnAvidhadahAra bAlyoliha karpUradvIlyasAra nala surabhi campaka puSpahAra

caraNam 3

AhA yeralegangale siri kumkuma aralele heralu gUndyAdinda
hariya mohisuve nI indira devi nirbhIta shatAnanda devarigatiprIte
shrI mukundana kathAmruta jAte kunda mandamAla virajIte

caraNam 4

AhA mandaroddharaNa govindana rAni ninna caraNAravindava pUjisuve
uttadatteya nere valipu nadu valitta kinkini patti jhulapu bahu batta
kuchaagrada kadapu totta ghatti kancukashere golipu

caraNam 5

AhA kantadindolevantha kantE mangalaso otra kantE kantErava koti sUryana kAnte jaya jaya
vijaya sampUrNe bhakta bhayanivAraNeya guNamaNiye yenna kAyuvaranyAra kANe sheSashayananna
tore sushrUni AhA kaiya mugive bhava bhayava harisenna siri hayavadanana dayavu pAlise lakshmI

***