Showing posts with label ಮಹಾಗಣಪತೆ ಮಾತಂಗ ವದನ jayarama vittala. Show all posts
Showing posts with label ಮಹಾಗಣಪತೆ ಮಾತಂಗ ವದನ jayarama vittala. Show all posts

Saturday, 28 December 2019

ಮಹಾಗಣಪತೆ ಮಾತಂಗ ವದನ ankita jayarama vittala

ಮಹಾ ಗಣಪತೆ ಮಾತಂಗ ವದನ |
ಮೂಷಿಕವಾಹನ ಮಂಗಳ ಚರಣ |
ಮಹಾ ಗಣಪತೇ |ಪ|

ವಿನಾಯಕ ನೀ ವಿಘ್ನಕೋಟಿಹರಣ
ವಾಮನ ರೂಪ ವಲ್ಲಭನೇ |
ಷಣ್ಮುಖ ಸೋದರ ಸುರಮುನಿ ಪೂಜಿತ
ಶರಣೆಂಬೆ ನಿನಗೆ ಶಂಭುಕುಮಾರ | ೧ |

ಲಂಬೋದರನೇ ಲಕುಮಿ ಕರನೆ
ಅಂಬಾಸುತನೆ ಆದಿಪೂಜ್ಯನೇ |
ದಶಭುಜರೂಪನೆ ದೂರ್ವಪ್ರಿಯನೆ |
ದುರಿತ ನಿವಾರಣ ದೀನರಕ್ಷಣ | ೨ |

ಪಾಶಾಂಕುಶಧರ ಪಾಪವಿಮೋಚನ
ಪಾವನ ಸ್ಮರಣ ಪತಿತಪಾವನ |
ಜಗದೊಳು ನಿನ್ನಯ ನಾಮವ ಪೊಗಳುವೆ
ಜಯರಾಮವಿಠ್ಠಲಗೆ ನೀ ಅತಿಪ್ರೀಯ | ೩ |
******