Showing posts with label ಸ್ವಾಗತ ಸುಗುಣಗೆ ಸ್ವಾಗತ ಕರುಣಿಗೆ ಸ್ವಾಗತವು ನವಸಚಿವರಿಗೆ shyamasundara. Show all posts
Showing posts with label ಸ್ವಾಗತ ಸುಗುಣಗೆ ಸ್ವಾಗತ ಕರುಣಿಗೆ ಸ್ವಾಗತವು ನವಸಚಿವರಿಗೆ shyamasundara. Show all posts

Wednesday, 1 September 2021

ಸ್ವಾಗತ ಸುಗುಣಗೆ ಸ್ವಾಗತ ಕರುಣಿಗೆ ಸ್ವಾಗತವು ನವಸಚಿವರಿಗೆ ankita shyamasundara

 ..

ಸ್ವಾಗತ ಸುಗುಣಗೆ ಸ್ವಾಗತ ಕರುಣಿಗೆ

ಸ್ವಾಗತವು ನವಸಚಿವರಿಗೆ | ಸ್ವಾಗತ ಸ್ವಾರ್ಥ

ವಿದೂರರಾದ ಜಗನ್ನಾಯಕ ನಾಮ ರಾಯರಿಗೆ ||

ತರಳತನದಿ ಇವರು ಸರಳ ಮನಸ್ಸಿನಲ್ಲಿ

ಸರಸ್ವತಿದೇವಿಯನೊಲಿಸಿದರು | ಪರಮಪೂಜ್ಯ

ಮಹತ್ವರ ತತ್ವ ತಿರುಳು ತಿಳಿದು ಆಚರಿಸಿದರು 1


ಪ್ರಾಂತದ ಬಡವರ ಚಿಂತೆಕಡಿಯಲು

ಸ್ವಾಂತದಿ ಪಂಥವ ಗೈದವರೋ || ಕ್ರಾಂತಿಯ

ಹೂಡುತ ಶಾಂತಿ ಸಂಗರದಿ ನಿಂತು ಹೋರಾಡಿದ ಯೋಧರು 2


ದುರುಳರಾಳಿಕೆಯಲಿ ಜರಿದು ಧಿಃಕರಿಸಿ

ಸೆರೆಮನೆ ಕಷ್ಟವ ಸಹಿಸಿದರು | ದೊರೆಯ

ಸ್ವತಂತ್ರವು ಬಹುಮತದಲಿ ಸ್ವೀಕರಿಸಿದರು ಮಂತ್ರಿಪದವಿಯನು 3


ಉಚ್ಚನೀಚವೆಂಬ ಕುತ್ಸಿತ ಭಾವವ | ಕೊಚ್ಚಿ

ಬೀಸಾಡಿದ ಜಾಣರು | ಅಚ್ಚಗನ್ನಡದ ವೀರ

ಜನನಿಗೆ ಅಚ್ಭದ ಪ್ರೀಯ ಸುಕುಮಾರರು 4


ಈ ಮಹಾಚತುರನ ಪಡೆದ ಚಂಡ್ರಿಕಿ

ಗ್ರಾಮದೇವಿ ಬಹುಪುಣ್ಯವತಿ | ಪ್ರೇಮ

ದಿಂದಿವರ ನೇಮವ ನಡೆಸುವ 

ಶಾಮಸುಂದರನು ದಿನಂಪ್ರತಿ5

***