Showing posts with label ಎಂತು ನಾತುತಿಸಲಿ ಯತಿವರ ಚರ್ಯನಾಮುಗಿವೆನು karpara narahari raghudanta teertha stutih. Show all posts
Showing posts with label ಎಂತು ನಾತುತಿಸಲಿ ಯತಿವರ ಚರ್ಯನಾಮುಗಿವೆನು karpara narahari raghudanta teertha stutih. Show all posts

Monday, 2 August 2021

ಎಂತು ನಾತುತಿಸಲಿ ಯತಿವರ ಚರ್ಯನಾಮುಗಿವೆನು ankita karpara narahari raghudanta teertha stutih

raghudanta teertha stutih shishya of raghukanta teertharu 1923 kudli mutt

ಎಂತು ನಾತುತಿಸಲಿ ಯತಿವರ

ಚರ್ಯನಾಮುಗಿವೆನು ಕೈಯ್ಯಾ ಪ


ಮಂತ್ರಸದನ ಪದ ಚಿಂತಕ ಶ್ರೀ ರಘು ಕಾಂತಕರಜ ರಘು

ದಾಂತ ಯತೀಂದ್ರರ ಅ.ಪ


ಅಂತರಂಗದಿ ಸಂತತ ಶ್ರೀಹರಿಯ ಚಿಂತಿಸುತಲಿ ಭೂಮಿಯ

ಕಾಂತ ದಂಷ್ಟ್ರದಿ ಸಂಜನಿಸಿದ ನದಿಯ ಸಂಗಮ ಶುಭನಿಲಯ

ಶಾಂತದಾಂತ ಧೀಮಂತರೆನಿಸುತ ದಿಗಂತರದಲಿ

ವಿಶ್ರಾಂತ ಸುಮಹಿಮರ 1

ಮೇದಿನಿ ಜಾತ ಪತಿ ಲಕ್ಷ್ಮಣರ ಪಾದಾಂಬುಜ ಮಧುಪರ

ಮೋದಾಶ್ರು ಸುರಿಸುತ ಪೂಜಿಸಿದವರ ಪುಲಕೀತ ವಿಗ್ರಹರ

ವಾದಿವಾರಣ ಮೃಗಾಧಿಪರೆನಿಸುತ ಮೋದತೀರ್ಥ ಸುಮ

ತೋದಧಿ ಚಂದಿರ 2

ಇಳಿಯೊಳು ಚರಿಸುತ ಬುಧ ಜನರನ್ನು ಚಲಿಸುತ ಛಾತ್ರರನು

ತಿಳಿಸೀ ಸಚ್ಛಾಸ್ತ್ರವ ಮರ್ಮಗಳನ್ನು ಉದ್ಧರಿಸ್ಯವರನ್ನು

ಯಳಮೇಲಾರ್ಯರ ಒಲುಮೆ ಪಡೆದು ಭವ

ಜಲಧಿಯ ದಾಟಿದ ಕಲುಷ ವಿದೂರರ 3


ಪ್ರಥಮಾಶಿಲೆ ಕ್ಷೇತ್ರದೊಳಿಹ ಗುರುವಿಜಯ

ದಾಸರ ಶುಭಚರಿಯ

ಸ್ತುತಿಸಿ ಶೇವಿಸಿ ಪಡೆದರು ಗುರುಕೃಪೆಯ ನೋಳ್ಪರಿಗಾಶ್ಚರ್ಯ

ನತ ಜನರಘ ಪರ್ವತ ಪವಿ ಸನ್ನಿಭ

ಕ್ಷಿತಿ ಸುರತತಿ ಸೇವಿತ ಪದ ಪದ್ಮರ 4


ಕ್ಷೋಣಿಯೊಳು ಕಾಣೆ ನಿವರಿಗೆ ಸಮಾನ

ಜಾಣ ಮಾನವರನ

ಸಾನುರಾಗದಿ ಧ್ಯಾನಿಸಲಿವರನ್ನ ಕಾಮಿತ ಗರಿವರನ

ಶ್ರೀನಿಧಿ ಕಾರ್ಪರ ಸ್ಥಾನಗ ನರಪಂಚನನನೊಲಿಸಿದ

ಮೌನಿವರೇಣ್ಯರ 5

****