Showing posts with label ಸ್ವಾಮಿ ಸತ್ಯಾಧಿರಾಜ ಮುನಿಗೆಣೆಗಾಣೆ prasannavenkata. Show all posts
Showing posts with label ಸ್ವಾಮಿ ಸತ್ಯಾಧಿರಾಜ ಮುನಿಗೆಣೆಗಾಣೆ prasannavenkata. Show all posts

Monday, 18 November 2019

ಸ್ವಾಮಿ ಸತ್ಯಾಧಿರಾಜ ಮುನಿಗೆಣೆಗಾಣೆ ankita prasannavenkata

by ಪ್ರಸನ್ನವೆಂಕಟದಾಸರು
ಸ್ವಾಮಿ ಸತ್ಯಾಧಿರಾಜ ಮುನಿಗೆಣೆಗಾಣೆ ನಾಭೂಮಿಯ ಮೇಲೆ ಚತುರನಸಾಮಥ್ರ್ಯ ನೋಡಿರಿ ಭಕುತಿಯನರಿಯದಪಾಮರನನು ಬಾಗಿಸುವನ ಪ.

ಗುರುಸತ್ಯಾಭಿನವರಾಯನ ಪಟ್ಟದಾನೆಯುಧÀರೆಯ ಮೇಲೋಡಾಡುವಂತೆಚರಿಸುತ ಖಳರನಂಜಿಸಿ ತಪ್ಪ ಕೈಕೊಂಡುಗುರುಪಾದಕೊಪ್ಪಿಸಿ ನಿಂತ 1

ಕಲ್ಲು ಕರಗುವುದು ಕೆಚ್ಚು ಮಣಿವುದು ಇದೆಲ್ಲಿಯ ಗಾದೆಯೆಂದೆನಲುಕಲ್ಲೆದೆ ಮಾನಿಸರ ದ್ರವಿಸುವ ಕೆಚ್ಚೆದೆಕ್ಷುಲ್ಲರ ಮಣಿಸುವಕೇಳಿ2

ಆಲಸ್ಯವೆ ಮೋಕ್ಷೋಪಾಯ ದಹನೆಂದುಕಾಲವ ಕಳೆಯನು ವ್ಯರ್ಥಮೂಲ ರಘುಪತಿ ಪಾದಾರವಿಂದವ ಮೇಲೆಮೇಲರ್ಚಿಪ ಸಮರ್ಥ 3

ಜ್ಞಾನ ಭಕುತಿ ವೈರಾಗ್ಯಪ್ರಣವಜಪಧ್ಯಾನ ಮೌನ ಪರಿಪೂರ್ಣಆನಂದತೀರ್ಥ ಶಾಸ್ತ್ರಾಂಬುಧಿ ತಿಮಿಂಗಿಲದೀನರಸುರತರುಜಾಣ4

ತಂದೆ ಸತ್ಯಾಭಿನವ ತೀರ್ಥ ಕರಜಾತಎಂದೆಂದು ಸುಜನರ ಪ್ರಿಯಇಂದಿರೆರಮಣ ಪ್ರಸನ್ವೆಂಕಟೇಶನಹೊಂದಿದ ಸದ್ಗುಣಗೇಹ5
*******