Showing posts with label ಶ್ರೀತುಳಸಿ ಜಯ ತುಳಸಿ ಜಯ ಜಯ ಜಯ ತುಳಸಿ others SRI TULASI JAYA TULASI JAYA JAYA JAYA TULASI. Show all posts
Showing posts with label ಶ್ರೀತುಳಸಿ ಜಯ ತುಳಸಿ ಜಯ ಜಯ ಜಯ ತುಳಸಿ others SRI TULASI JAYA TULASI JAYA JAYA JAYA TULASI. Show all posts

Tuesday, 9 November 2021

ಶ್ರೀತುಳಸಿ ಜಯ ತುಳಸಿ ಜಯ ಜಯ ಜಯ ತುಳಸಿ ankita others SRI TULASI JAYA TULASI JAYA JAYA JAYA TULASI




ಶ್ರೀ ತುಳಸಿ ಜಯ ತುಳಸಿ ಜಯ ಜಯ 
ಜಯ ತುಳಸಿ
ಶ್ರೀರಾಮ ತುಳಸಿ ವರ ಶ್ರೀಕೃಷ್ಣ ತುಳಸಿ ||

ಗಂಗೆ ಗೋದಾವರಿಯು ತುಂಗಭದ್ರೆಯು ಯಮುನೆ
ಮಂಗಳ ತರಂಗಿಣಿಯು ಶ್ರೀಕೃಷ್ಣವೇಣಿ
ರಂಗನಾಥನ ಸಮೇತ ದಿವ್ಯ ಕಾವೇರಿಯು
ಮಂಗಳೆಯೆ ನಿನ್ನಲ್ಲಿ ವಾಸವಾಗಿಹರು ||೧||

ನಿನ್ನ ಪಾದವು ಚತುರ್ಮುಖನ ಭಾಗವು ದೇವಿ
ನಿನ್ನ ಮಧ್ಯವು  ಹರಿಯ ಭಾಗವಾಗಿಹುದು
ನಿನ್ನ ತುದಿ ಕೈಲಾಸನಾದ ಶಿವ ಭೋಗವು
ನಿನ್ನ ಮೈಯೊಳು ಸಕಲ ದೇವತೆಗಳಿಹರು ||೨||

ಗಂಧಪುಷ್ಪವು ಧೂಪ ದೀಪ ನೈವೇದ್ಯದಿಂ
ವಂದಿಸುತ ನಾ ನಿನ್ನ ಪೂಜೆಗೈವೆ
ಇಂದಿರೆಯೆ ಸೌಭಾಗ್ಯ ಸಂತತಿಯ ನೀನಿತ್ತು
ಮುಂದೆ ಪಾಲಿಸು ಭಕ್ತಿ ಮುಕ್ತಿ ಸಂಪದವ ||೩||

ನೀನಿರುವ ದೇಶದಲಿ ರೋಗಗಳ ಭಯವಿಲ್ಲ
ನೀನಿರುವ ದೇಶದಲಿ ಪಾಪಭಯವಿಲ್ಲ
ನೀನಿರುವ ದೇಶದಲಿ ಯಮನ ಭಯವಂತಿಲ್ಲ
ನೀನಿರುವ ದೇಶದಲಿ ಭೂತಭಯವಿಲ್ಲ ||೪||

ಜಯ ಮಂಗಳಂ ತುಳಸಿ ಸರ್ವಮಂಗಳೆ ದೇವಿ
ಜಯ ಮಂಗಳಂ ತುಳಸಿ ಮುರಹರನ ರಮಣಿ
ಜಯ ಮಂಗಳಂ ತುಳಸಿ ಲೋಕಪಾವನೆ ಮೂರ್ತಿ
ಜಯ ಮಂಗಳಂ ತುಳಸಿ ಧೇನು ಸುರ ದೇವಿ ||೫||
****

ರಾಗ: ಕಾಂಬೋಧಿ  ತಾಳ: ಖಂಡಚಾಪು (raga, taala may differ in audio)