ರಾಗ ಬೇಹಾಗ್ ಛಾಪು ತಾಳ
ಹೊಂತಕಾರಿ ನೀನೇವೇ ಎಂತೊ ಹನುಮಂತರಾಯ ||ಪ||
ಶಾಂತ ಅತಿ ಬಲವಂತ ಅಂತವಿದೂರ
ಶಾಂತ ದಾಂತ ಸುರಕಾಂತ ಹಂತ
ವೇದಾಂತ ದೈತ್ಯ ಹಂತ ವಾದದು-
ರಂತ ನುತ ನಿಯಂತ ಯುಕ್ತಿವಂತ ||
ಸಾಗರವನು ಬಲು ವೇಗದಿಂದಲಿ ದಾಟಿ
ಬೇಗ ಲಂಕೆಗೆ ಪೋಗಿ ಆಗ ಬಂದ ದೈತ್ಯರ ನೀಗಾಡಿ
ಸಂಗರವಾಗಿ ಉಂಗುರವ ಸೀತಾಂಗನೆಗೆ ಕಪಿ ಪುಂಗವೇಂದ್ರ ನೀಡಿ
ಸಂಗಡವೋಗಾಡಿ ನಗರವು ನೋಡಿ ಸುಟ್ಟು ಬೂದಿಮಾಡ್ದ ||
ತಾಮರಸ ಬಂಧುನೇಮ ವಂಶವಾರಿಧಿಸೋಮ-
ನಾದ ಶ್ರೀ ಸೀತಾರಾಮ ಪಾದಪಂಕಜಧಾಮ
ಸೋಮಜರಾಮ ಕೋಮಲಾಂಗ ವರನಾಮ ಭೂಮ ಗುಣಧಾಮ
ನರಮೃಗೇಂದ್ರ ಜಲಧಿಚಂದ್ರ ಸುಗುಣಸಾಂದ್ರ ಸುರವರೇಂದ್ರ ||
ವೀರರ ಗೆಲಿದತಿಶೂರ ಉರು ಸನ್ನ್ಹಿತ ಧೀರ
ಜಗನ್ನಾಥ ಪುರಂದರವಿಠಲನ ಪುರವರ ಉರದಲಿದ್ದ ಧೀರ
ಕರುಣಾಕರ ಘೋರ ದೈತ್ಯನಿವಾರ ಸುರವರ(/ಶೂರವರ?)
ಚಾರು ನೇಡಿದ ವೀರ ದುರಿತವಾರ ಶರಣಶೂರ ವೀರಾಧಿವೀರ ||
***
ಹೊಂತಕಾರಿ ನೀನೇವೇ ಎಂತೊ ಹನುಮಂತರಾಯ ||ಪ||
ಶಾಂತ ಅತಿ ಬಲವಂತ ಅಂತವಿದೂರ
ಶಾಂತ ದಾಂತ ಸುರಕಾಂತ ಹಂತ
ವೇದಾಂತ ದೈತ್ಯ ಹಂತ ವಾದದು-
ರಂತ ನುತ ನಿಯಂತ ಯುಕ್ತಿವಂತ ||
ಸಾಗರವನು ಬಲು ವೇಗದಿಂದಲಿ ದಾಟಿ
ಬೇಗ ಲಂಕೆಗೆ ಪೋಗಿ ಆಗ ಬಂದ ದೈತ್ಯರ ನೀಗಾಡಿ
ಸಂಗರವಾಗಿ ಉಂಗುರವ ಸೀತಾಂಗನೆಗೆ ಕಪಿ ಪುಂಗವೇಂದ್ರ ನೀಡಿ
ಸಂಗಡವೋಗಾಡಿ ನಗರವು ನೋಡಿ ಸುಟ್ಟು ಬೂದಿಮಾಡ್ದ ||
ತಾಮರಸ ಬಂಧುನೇಮ ವಂಶವಾರಿಧಿಸೋಮ-
ನಾದ ಶ್ರೀ ಸೀತಾರಾಮ ಪಾದಪಂಕಜಧಾಮ
ಸೋಮಜರಾಮ ಕೋಮಲಾಂಗ ವರನಾಮ ಭೂಮ ಗುಣಧಾಮ
ನರಮೃಗೇಂದ್ರ ಜಲಧಿಚಂದ್ರ ಸುಗುಣಸಾಂದ್ರ ಸುರವರೇಂದ್ರ ||
ವೀರರ ಗೆಲಿದತಿಶೂರ ಉರು ಸನ್ನ್ಹಿತ ಧೀರ
ಜಗನ್ನಾಥ ಪುರಂದರವಿಠಲನ ಪುರವರ ಉರದಲಿದ್ದ ಧೀರ
ಕರುಣಾಕರ ಘೋರ ದೈತ್ಯನಿವಾರ ಸುರವರ(/ಶೂರವರ?)
ಚಾರು ನೇಡಿದ ವೀರ ದುರಿತವಾರ ಶರಣಶೂರ ವೀರಾಧಿವೀರ ||
***
pallavi
hontakArinInEvE ento hanumantarAya
anupallavi
shAnta ati balavanta antavidUra shAnta dAnta surakAnta hanta vEdAnta daitya hanta vAda duranta nuta niyanta yuktivanta
caraNam 1
sAgaravanu balu vEgadindali dATi bEga lankege pOgi Aga banda daityara nIgADi sangaravAgi
ungurava sItAnganege kapi pungavEndra nIDi sankaDavOgADi nagaravu nODi suTTu bUdimADda
caraNam 2
tAmarasa bandhu nEma vashshavAridhi sOmanAda shrI sItArAma pAda pankajadhAma sOmajarAma
kOmalAnga varanAma bhUma guNadhAma nara mrgEndra jaladhicandra suguNasAndra suravarEndra
caraNam 3
vIrara gelidati sura urusanhita dhIra jagannAtha purandara viTTalana puravara uradalidda dhIra
karuNAkara ghOra daitya nivAra suravara cAru nEDida vIra duritavAra sharaNasura vIrAdhi vIra
***