Audio by Vidwan Sumukh Moudgalya
ಶ್ರೀ ವಿಜಯದಾಸಾರ್ಯ ವಿರಚಿತ ತೋತಾದ್ರಿ ಮಹಿಮೆ ಸುಳಾದಿ
ರಾಗ : ದರ್ಬಾರಿ ಕಾನಡ
ಧ್ರುವತಾಳ
ದೀನ ಬಂಧು ನಿನ್ನನೆ ನೆರೆ ನಂಬಿದೆ
ಜ್ಞಾನಾಂಬುಧಿ ಯೊಳಗಾನಂದ ವಾಡಿಸು
ಭಾನುವಿನ ಕೋಟಿ ಭಾನುವಿನಂತೆ ದಿ-
ಕ್ಕನು ಪ್ರಕಾಶಿಸುವ ಮೌನಿಗಳೊಡಿಯಾ
ಏನು ಪೇಳಲಿ ನಿನ್ನ ನಾಟಕತನವು
ಕಾಣುವರಾರು ಗೀರ್ವಾಣರೊಳು
ಅನಂತ ಜನುಮದಲಿ ನಾನೆ ನಿನ್ನವನಯ್ಯಾ
ಮಾಣಾದೆ ಸಾಕುವದು ಮಾನದಿಂದ
ಈ ನಾಡಿನೊಳಧಿಕ ತೋತಪರ್ವತ ವಾಸ
ಶ್ರೀ ನಾರಿಯರಸ ವಿಜಯವಿಠಲ ಸುರ -
ಧೇನು ಚಿಂತಾಮಣಿ ನೀ ನೊಲಿದವರಿಗೆ ll1ll
ಮಟ್ಟತಾಳ
ತೋತನೆಂಬವ ಕಿರಾತನು ಪ್ರತಿದಿನ
ಭೂತಳದೊಳು ತನ್ನ ಜಾತಿ ಧರ್ಮದಿಂದ
ತಾ ತಿರುಗುತಲಿರೆ ಸೂತನ ತಾತನು
ಪ್ರೀತಿ ಯಿಂದಲಿ ಬರಲಾತಗೆ ಅವನಂದು
ಭೀತಿಯ ತೋರಿದನು ಭೀತಿಯ ತೋರಿದನು
ನೂತನಾಂಗ ದೇವ ವಿಜಯವಿಠಲನ್ನ
ಮಾತು ಮಾತಿಗೆ ನೆನದ ಮಾತುರ ಭೀತಿಹರ ll2ll
ತ್ರಿವಿಡಿತಾಳ
ಮುನಿರೋಮಹರಷನ ತನು ಮನವನು ಕಂಡು
ವನಚರ ತಿಳಿದು ಕರುಣವ ಮಾಡಿದನು
ಎನಗೆ ನೀನು ನಿಂದು ನೆನದಾತನ ತೋರಿ
ಮನಕೆ ಸಮ್ಮತ ಬಡಿಸೆಂದನಲಾಗಿ ನಸುನಗುತ
ವನ ಕರೆದು ಹರಿಮಹಿಮೆಯನು ಪೇಳಿದನು ಇತ್ತ
ಮುನಿ ಸಮಾಧಿಯಲಿ ಸಾಧನದಿಂದ ಒಪ್ಪಿದನು
ಅನಿಮಿಷರೊಡಿಯಾ ನಮ್ಮ ವಿಜಯವಿಠಲರೇಯನ
ವನಜಯುಗಳ ಚರಣಾವನು ಮನದಲಿನೆನಿಸಿ ll3ll
ಅಟ್ಟತಾಳ
ಬಲುಕಾಲಾಮುನಿ ಇಲ್ಲಿ ಒಲಿಸಿ ಧ್ಯಾನವಮಾಡೆ
ಜಲಜ ಲೋಚನ ಮೆಚ್ಚಿ ಒಲಿದು ಬಂದನು ತಾ
ಇಳಿಯೊಳು ಮಹೇಂದ್ರಾಚಲದ ತಪ್ಪಲಲ್ಲಿ
ಲಲಿತವಿಗ್ರಹನಾಗಿ ಥಳಥಳ ಪೊಳೆವುತ್ತ
ದಳದಳಸುರರು ಪೊಮಳೆಯನ್ನು ಕರಿಯಲು
ತಿಳಿಯ ಕಸ್ತುರಿಯ ತಿಲಕ ಮಕುಟ ಕುಂಡಲ
ಸುಳಿಗುರುಳು ಕೊರಳ ಹಾರ ಕೌಸ್ತುಭ
ಥಳಕು ಪದಕ ಪಚ್ಚೆವಳಿತ್ರಯ ಸುಳಿನಾಭಿ
ಬೆಲೆಯಿಲ್ಲ ದುಡಧಾರಾ ರುಳಿಗೆಜ್ಜೆ ಅಂದಿಗೆ
ಘಲಕೆಂಬೊ ಪೆಂಡೆಯು
ಚಲುವ ದೇವರ ದೇವ ತೋತ ಗಿರಿ ಸದಾ
ನಿಲಯಾನೆ ವಿಜಯವಿಠಲನೆ ಹಮ್ಮಿ ನದೈವ ll4ll
ಆದಿತಾಳ
ಆ ಮುನಿಗೆ ವರವಿತ್ತಾ ಭೂಮಿಯೊಳಗಾವ ಮನುಜಾ
ತಾಮಸವ ಕಳೆದುನಿ ಘ್ಯಾಮದಲಿ ಬಂದು ಇಲ್ಲಿ
ಯಾವವಾದರು ವಾಸವಾಗಿ ರೋಮ ಹರುಷ ತೀರ್ಥದಲ್ಲಿ
ರೋಮಾ ಒಂದಾದರದ್ದಲು ರೋಮಾಂಚನುಬ್ಬಿ ಕ-
ಣ್ಣ ಮನಕೆ ಸುಖಾ ಬಪ್ಪದು ಆ ಮಹಾ ಮೂರುತಿಯನ್ನು
ಪ್ರೇಮದಿಂದ ನೋಡಲಾಗಿ ತಾ ಮರಳಿ ಬಾರನಯ್ಯಾ
ಭೂಮಿ ಮೇಲಣ ಲೀಲೆಗೆ ಶೀಮೆಯೊಳು ತೋತ ಶೈಲಾ
ಧಾಮಾ ವಿಜಯವಿಠಲನ್ನಾ
ನಾಮ ನೆನೆಯೆ ಪಾಪವೆಂಬಾ
ರಾಮಾ ದಹಿಸಿ ಪೋಗುವಾದು ll5ll
ಜತೆ
ಪರಮೇಷ್ಟಿಯಿಂದಾರ್ಚನೆಗೊಂಡ ತೋತಾದ್ರಿ
ವರಮಂದಿರವಾಸ ವಿಜಯವಿಠಲಧೀಶಾ ll6ll
*******