kruti by ಗುರುಗೋವಿಂದಠಲ (ಮೈಸೂರು)
ರಾಗ: ಶಂಕರಾಭರಣ ತಾಳ: ಅಟ
ಯತಿರಾಜಾ ಪಾಲಿಸೊ ಎನ್ನ ಯತಿರಾಜಾ ಪ
ಯತಿರಾಜಾ ಪಾಲಿಸೊ ಎನ್ನ ಅಹಂ
ಮತಿಯ ಕಳೆದು ಗುರುವರೇಣ್ಯ ||ಆಹ||
ಸತತದಿ ಹರಿ ಧ್ಯಾನ ರತನನ ಮಾಡಿ ಸದ್-
ಗತಿಯ ಸೇರುವಂಥ ಪಥದಲ್ಲಿರಿಸೊ ರಾಜ ಅ.ಪ.
ವೀಣಾ ವೆಂಕಟ ನಾಮಾಭಿಧ ಕುಂಭ-
ಕೋಣ ಪುರದೊಳು ಮೆರೆದಾ ಓವಿ-
e್ಞÁನಿ ಸುಧೀಂದ್ರರೊಲಿಸಿದಾ ಬಹು-
ಮಾನವಾಗಿ ಶಾಲು ಪಡೆದಾ ||ಆಹ||
ಏನು ಇದಾಶ್ಚರ್ಯ ಮಾನ ಉಳಿವದೆಂತು
ನಾನೊಂದು ಕಾಣೆನೆನುತಾವಸನ ಮುಂದಿಟ್ಟ 1
ಅಂದಿನಂದಿನ ಪಾಠಕ್ಕೆಲ್ಲ ಟೀಕೆ
ಛಂದಾಗಿ ಬರೆದಿರುವ್ಯೆಲ್ಲ ನಮ್ಮ
ಹಿಂದಿನ ಸಂಶಯವೆಲ್ಲ ನೀಗಿ
ಮುಂದೆ ಜರುಗಿತು ಪಾಠವೆಲ್ಲ ||ಆಹ||
ಎಂದು ತಮ್ಮ ವಸನ ಕಂದ ನಿನ್ನಯ ಮೇಲೆ
ಹೊಂದಿಸಿ ಮುದದಿಂದ ಬಂದೆವೆಂದರ ಶಿಷ್ಯ 2
ಗುರುವು ಪಟ್ಟರು ಬಲು ಮೋದಾ ಸುಧಾ
ಪರಿಮಳಾರ್ಯರೆಂಬ ಬಿರುದಾ ಪೊಂದಿ
ಇರಲು ಕಾಲಾಂತರದಿಂದಾ ಪಡೆದೆ
ವರ ಯತ್ಯಾಶ್ರಮವವರಿಂದಾ ||ಆಹ||
ಮೆರೆಸಿದೆ ರಾಮರ ವರ ವೈಭವದಿಂದ
ದುರುಳ ಮಾಯ್ಗಳಮತ ತರಿದಿಟ್ಟೆ ವಾದದಿ 3
ಬೇಗೆಯಿಂದಳುತಿದ್ದ ಶಿಶುವಿಗೆ ಚೈಲ
ಆಗಸದೊಳು ನೀನು ನಿಲಿಸಿದೆ ಹಾಂಗೆ
ಮಾರ್ಗದಿ ಪ್ರಸವಿಸಿದವಳಿಗೆ ನೀರ-
ನುಗಮಿಸುತ ನೀನು ಪೊರೆದೇ ||ಆಹ||
ನಿಗಮಾಲಯ ವಾಸ ರಾಘವೇಂದ್ರ ಗುರುವೆ
ಬಗೆ ಬಗೆ ಗ್ರಂಥವ ಮಿಗಿಲಾಗಿ ರಚಿಸಿದೆ 4
ಪಂಗು ಬಧಿರ ಮೂಕ ಜನರು ನಿಮ್ಮ
ಹಿಂಗದೆ ಬಂದು ಸೇವಿಪರು ಬಂದ
ಭಂಗಗಳೆಲ್ಲ ನೀಗುವರು ಯತಿ-
ಪುಂಗನೆ ನಿನಗೆ ಸರಿಯಾರು | ||ಆಹ||
ಗಂಗಾ ಜನಕ ರೂಪಗಳು ನಾಲ್ಕರಿಂ
ಅಂಗಲಾಚಿಪ ಜನಂಗಳ ಪೊರೆಯುವ 5
ಸಂದರಶುನದಿಂದ ಅಘ ವೃಂದ
ಬೆಂದು ಪೋಗುವುದು ಬೇಗ ನಿಮ್ಮ
ವೃಂದಾವನಗತ ಮೃತ್ತಿಕೆ ಜಲ
ಬಿಂದು ಉದರ ಪೊಕ್ಕಾಗ ||ಆಹ||
ವೃಂದಾವನಪತಿ ಗೋವಿಂದನ ಮಂದಿರ
ಬಂದು ಸೇರುವುದಕ್ಕೆ ಅಂದ ಸೋಪಾನವು 6
ವರಹಸುತೆ ತೀರ ವಾಸಾ ಭಕ್ತ
ಸುರತರುವೆ ನಿನ್ನ ದಾಸಾನಾಗಿ
ಇರಿಸೊ ಭೂತಳಾಧೀಶ ಬೇಡ್ವೆ
ವರ ಒಂದ ನಾನಿನ್ನ ಅನಿಶ ||ಆಹ||
ಗುರುಗೋವಿಂದವಿಠಲನ ಚರಣಾರವಿಂದವ
ನಿರುತ ಭಜಿಸುವಂಥ ವರಮತಿ ಕೊಟ್ಟೆನ್ನ 7
***