Showing posts with label ಅಂಜುವೆನದಕೆ ಕೃಷ್ಣ ಅಭಯವ prasannavenkata. Show all posts
Showing posts with label ಅಂಜುವೆನದಕೆ ಕೃಷ್ಣ ಅಭಯವ prasannavenkata. Show all posts

Sunday, 10 November 2019

ಅಂಜುವೆನದಕೆ ಕೃಷ್ಣ ಅಭಯವ ankita prasannavenkata

ಪ್ರಸನ್ನವೆಂಕಟದಾಸರು

ಅಂಜುವೆನದಕೆ ಕೃಷ್ಣ ಅಭಯವ ಕೋರಿದಕೆ ಪ.

ನೀನಿತ್ತ ಮತಿಯಿಂದ ನಿನ್ನ ಹೊಗಳುತಿರೆಹೀನ 
ಮಾನವರೊಂದೊಂದೂಣೆಯ ನುಡಿವರು 1

ಬಾಣವನೆಸೆದು ಬಿಲ್ಲನಡಗಿಸುವಂತೆಆ 
ನಿಂದಕರು ನಿಂದಿಶಾಣೆಗೆ ನಿಲುವರು 2

ಮಾಧವನಾನೇನು ಓದಿದವನಲ್ಲ ಶ್ರೀಪಾದವೆ 
ಗತಿಯೆಂಬೆ ಬಾಧಿಸುತೈದಾರೆ 3

ಅಪರಿಮಿತಪರಾಧಿ ಕಪಟಿ ನಾನಾಗಿಹೆ
ಅಪರೋಕ್ಷಿಯೆಂದೆಂಬ ಕುಪಿತ ಖಳರ ನೋಡಿ 4

ಹಿತಶತ್ರುಗಳ ಸಂಗತಿ ಸಾಕು ಪ್ರಸನ್ವೆಂಕಟಪತಿ
ನಿನ್ನ ಭಕ್ತರ ಸಂಗ ಕೊಡು ಕಾಣೊ5

*******