..
kruti by ವಿಶ್ವೇಂದ್ರತೀರ್ಥರು vishwendra teertharu sode mutt
ಗರುಡದೇವನೇ ಪೊರೆಯೊ ಎನ್ನನು
ಹರಿಯ ವಾಹನನಾಗಿ ಮೆರೆಯುವ
ಗರುಡದೇವನೇ ಪ
ಮಾತೆಯ ಮಾನವನುಳಿಸಲೋಸುಗ |
ಸುಧೆಯ ಕಲಶವ ಪೊತ್ತು ತಂದೆಯೋ 1
ಹರಿಯು ನಿನ್ನೊಳು ಪೇಮದಿಂದಲೀ
ಧರಣಿಯೊಳವತರಿಸಲೊಲ್ಲನು 2
ರಾಕ್ಷಸಾರಿ ರಾಜೇಶ ಹಯಮುಖ
ಪಕ್ಷಿರಾಜನೊಳಿಪ್ಪ ಭಾಗ್ಯವು 3
***