..
kruti by Nidaguruki Jeevubai
ಪಾಲಿಸು ಪರಮಾತ್ಮನೆ ಪಾವನ ಗುಣ-
ಶೀಲ ಸದ್ಗುಣಧಾಮನೆ ಪ
ಶ್ರೀಲಕುಮಿಯ ಪ್ರಿಯ ಶ್ರೀಶಸರ್ವೋತ್ತಮ
ವಾಸವವಂದಿತ ವಾಸುದೇವನೆ ಹರಿ ಅ.ಪ
ಕೇಶವ ನಾರಾಯಣ ಮಾಧವ
ಗೋವಿಂದ ವಿಷ್ಣುವೆ ನಮಿಪೆ
ಮಧುಸೂದನ ತ್ರಿವಿಕ್ರಮ ವಾಮನ
ಶ್ರೀಧರ ಹೃಷಿಕೇಶ ಪದ್ಮನಾಭನೆ ಪೊರೆ
ದಾರಿ ಕಾಣೆ ದಾಮೋದರ ಸಂ_
ಕರ್ಷಣ ವಾಸುದೇವ ಪ್ರದ್ಯುಮ್ನನನಿ-
ರುದ್ಧ ಪುರುಷೋತ್ತಮ ಅಧೋಕ್ಷಜ
ನಾರಾಸಿಂಹ ಅಚ್ಚುತ ಜನಾರ್ದನ ಉ-
ಪೇಂದ್ರ ಹರಿ ಶ್ರೀ ಕೃಷ್ಣ ಶೌರಿ1
ವಾರಿ ವಿಹಾರದಲಿ ಬೆನ್ನಿಲಿ ಗಿರಿ
ಭಾರವನ್ನೆ ತಾಳಿ
ಕೋರೆ ತೋರುತ ಕರುಳ್ಹಾರವ ಮಾಡಿದ
ಮೂರಡಿ ಭೂಮಿಯ ಬೇಡಿ ಭೂಪಾಲನ
ಕಾಡಿ ಕೆಡಹುತ ಕೂಡಿ ಕಪಿಗಳ
ಬೇಡಿ ಪಾಲ್ಮೊಸರ್ಬೆಣ್ಣೆ ಬುದ್ಧನೀ-
ನಾಗಿ ಖಡ್ಗವಧರಿಸಿ ಕುದುರೆಯ-
ನೇರಿ ಮೆರೆಯುವ ಶ್ರೀ ರಮಾಪತೆ 2
ಶಾಂತೀಶ ಅನಿರುದ್ಧನೆ ಶರಣೆಂಬೆ ನಿನ್ನ
ಕೃತಿಪತಿ ಪ್ರದ್ಯುಮ್ನನೆ ಜಗದೀಶ ಜಯಾಪತಿ
ಜಯ ಸಂಕರ್ಷಣ ದೇವ
ನಮಿಪೆ ಮಾಯಾಪತಿ ವಾಸುದೇವನೆ ನಿನ್ನ
ಚರಣ ಪಂಕಜ ತೋರು ಲಕ್ಷ್ಮೀ-
ರಮಣ ನಾರಾಯಣ ನಮೋ
ಗರಡು ಗಮನನೆ ಕಮಲನಾಭ ವಿ-
ಠ್ಠಲನೆ ಶ್ರೀಹರಿ ಪರಮ ಕರುಣಿಯೆ 3
***