..
ತಾರೆ ಮುಕ್ತಕದಾರತಿ ಹರಿಗೆ
ನೀರೆ ತಾರೆ ಕಮಲ ಮುಖಿ ಗಿರಿಧರಗೆ ಪ
ಮೀನ ಕಮಟಗೆ | ಕ್ರೋಢ ನರಮೃಗಗೆ
ಮಾಣವಕನಿಗೆ ವೀರಭಾರ್ಗವಗೆ
ಧರಣಿಜಾಪತಿ ಪಾರ್ಥಸಾರಥಿಗೆ
ಸ್ಥಾಣು ಬಾಣವ ತುರಗವಾಹನಗೆ 1
ಮಂದರೋದ್ಧರ ಮಾತುಳಾಂತಕಗೆ
ಶಿಂಧು ಮಂದಿರ ಸಾರಸಾಂಬಕಗೆ
ವಂದಿಸುತ ಗೋವೃಂದ ಗೋಪಾಲಗೆ 2
ಸಾಮಗಾನವಿಲೋಲ ರಂಗನಿಗೆ
ಶ್ರೀಮಹಿ ರಮಣ ವೆಂಕಟಗೆ
ಕಾಮಿತಾರ್ಥವ ಕೊಡುವ ಕೋಮಲಾಂಗಗೆ
ಶ್ರೀ ಶಾಮಸುಂದರವಿಠಲ ಮೂರುತಿಗೆ 3
***