ಪುರಂದರದಾಸರು
ರಾಗ ದ್ವಿಜಾವಂತಿ ಆದಿ ತಾಳ
ನೆನೆಯಿರೋ ಭಕ್ತ ಜನರುಗಳು ಅನುದಿನ || ಪ ||
ನೆನೆಯಿರೋ ಭಕ್ತ ಜನರುಗಳು ಅನುದಿನ || ಪ ||
ಘನಮಹಿಮನ ಸೇವೆಯ ಮಾಡಿದರೆ
ಮನದಲ್ಲಿ ನೆನೆದಂಥ ಅಭೀಷ್ಟವನೀವ ಹನುಮಂತ
ಒಂದು ಯುಗದಲ್ಲಿ ಹನುಮಾವತಾರನಾಗಿ
ಬಂದು ನೆರೆದಯೋಧ್ಯಾಪುರಕಾಗಿ
ಬಂದ ಧೀರನ ನೋಡಿ ಸುಜನರೆಲ್ಲಾ
ನಂದದಿಂದಲಿ ಪಾಡಿ ||
ವಾಯುಕುಮಾರಕ ದ್ವಾಪರದಲ್ಲಿ ಭೀಮ-
ರಾಯನೆಂದೆನಿಸಿದ ಕೌರವ ಬಲದಿ
ನಾಯಕನಾಗಿ ಬಂದು ದುಶ್ಯಾಸನನ
ಕಾಯವನಳಿಸಿ ನಿಂದು ||
ಕಾಯಜಪಿತನ ಮುಂದೆ ಕೌರವ ತರಿದು ರಾಜ-
ಸೂಯ ಯಾಗವ ಮಾಡಿದ ಬಲವಂತ
ರಾಯರಾಯರ ಧೀರ ಹನುಮಂತ
ಪ್ರಿಯಜನಮಂದಾರ ||
ಗುರು ಮಧ್ವಮುನಿಯಾಗಿ ಹರಿಗತಿಪ್ರಿಯನಾಗಿ
ಕರುಣಾಕರನಾಗಿ ಶರಣರ ಪೊರೆವ
ಮೆರೆವ ಶ್ರೀಹನುಮಂತನ ಈ ದೇವನ
ಸ್ಮರಿಸಿರೋ ಗುಣವಂತನ ||
ಲಂಕಾಪಟ್ಟಣ ಸಮೀಪ ಸಮುದ್ರವ ದಾಟಿ
ಪಂಕಜನಾಭ ಶ್ರೀಪುರಂದರವಿಠಲ ನಿ-
ಶ್ಶಂಕ ರಾವಣನ ಗೆದ್ದ ಈ ಹನುಮಂತ
ಪಂಕಜಮುಖಿಯ ಕಂಡ ||
***
pallavi
neneyirO bhakta janarugaLu anudina
anupallavi
ghana mahimana sEveya mADidare manadalli nenedantha abhISTavanIva hanumanta
caraNam 1
ondu yugadalli hanumAvatAranAgi bandu nerdayOdhyA purakAgi banda dhIrana nOD sujanarellA nandadindali pADi
caraNam 2
vAyu kumAraka dvAparadalli bhIma rAyanendenisida kaurava baladi nAyakanAgi banda dishyAsana kAyavanaLisi nindu
caraNam 3
kAyaja pitana munde kaurava taridu rAjasUya yAgavanu mADida balavanta rAya rAyara dhIra hanumanta priya jana mandAra
caraNam 4
guru madhva muniyAgi harigati priyanAgi karuNAkaranAgi sharaNara poreva mereva shrI hanumantana I dEvana smarisirO guNavantana
caraNam 5
lankA paTTana samIpa samudrava dATi pankajanAbha shrI purandara viTTalana lenka rAvaNana kedda I hanumanta pankaja mukhiya kaNDa
***
ಘನಮಹಿಮನ ಸೇವೆಯ ಮಾಡಿದರಾಮನದಲಿ ನೆನೆದ ಅಭೀಷ್ಟವೀವ ಹನುಮಂತ ಅ.ಪ
ಒಂದು ಯುಗದಿ ಹನುಮಂತಾವತಾರನಾಗಿಬಂದು ನೆರೆದಯೋಧ್ಯಾಪುರಕಾ ||ಬಂದ ಧೀರನ ನೋಡಿ ಸುಜನರೆಲ್ಲ-ನಂದದಿಂದಲಿ ಪಾಡಿ 1
ವಾಯು ಕುಮಾರಕ ದ್ವಾಪರದಲಿ ಭೀಮ-ರಾಯನೆಂದೆನಿಸಿದ ಕೌರವ ಬಲದಿ ||ನಾಯಕನಾಗಿ ಬಂದ ದುಃಶಾಸನ-ಕಾಯವಳಿದು ನಿಂದ 2
ಕಾಯಜಪಿತನ ಮುಂದೆ ಕೌರವರ ತಂದು ರಾಜ-ಸೂಯಯಾಗವ ಮಾಡಿದ ಬಲವಂತ ||ರಾಯರಾಯರ ಧೀರ-ಹನುಮಂತ-ಪ್ರಿಯ ಜನ ಮಂದಾರ 3
ಗುರುಮಧ್ವಮುನಿಯಾಗಿ ಹರಿಗತಿಪ್ರಿಯನಾಗಿ-ಕರುಣಾಕರನಾಗಿ ಶರಣರ ಪೊರೆವ ||ಮೆರೆವ ಶ್ರೀ ಹನುಮಂತನ-ದೇವನ ಸ್ಮರಿಸಿರೊ ಗುಣವಂತನ 4
ಲಂಕಾಪಟ್ಟಣದ ಸಮೀಪ ಸಮುದ್ರ ದಾಟಿಪಂಕಜನಾಭಶ್ರೀ ಪುರಂದರವಿಠಲನಲೆಂಕ ರಾವಣನ ಗೆದ್ದ-ಈ ಹನುಮಂತ-ಪಂಕಜಮುಖಿಯ ಕಂಡ 5
***