Showing posts with label ಸಂತರ ಸಹವಾಸ ಮಾಡು ಮನುಜ ನೀ gurumahipati. Show all posts
Showing posts with label ಸಂತರ ಸಹವಾಸ ಮಾಡು ಮನುಜ ನೀ gurumahipati. Show all posts

Wednesday, 1 September 2021

ಸಂತರ ಸಹವಾಸ ಮಾಡು ಮನುಜ ನೀ ankita gurumahipati

ಕಾಖಂಡಕಿ ಶ್ರೀ ಕೃಷ್ಣದಾಸರು

ಸಂತರ ಸಹವಾಸ ಮಾಡು ಮನುಜ ನೀ | ಭ್ರಾಂತ ಜನರ ಸಂಗ ವೀಡ್ಯಾಡು | ಅಂತರಂಗದಲಿ ಸುಖವ ಸೂರ್ಯಾಡು | ಅ | ನಂತನ ನಾಮವ ಕೊಂಡಾಡು ಪ 


ದಾವ ಗ್ರಾಮದಲ್ಲಿ ಧನ ಧಾನ್ಯ ಬನವು | ತೀವಿಕೊಂಡಿಹ ಸಂದಣಿ ಜನವು | ಆವೂರೊಳಿಲ್ಲದಿರೆ ಸಂತರನವು | ನೀ ವಾಸ ಮಾಡಬ್ಯಾಡ ಅರಕ್ಷಣವು 1 

ಎಲ್ಲಿ ನೋಡಲು ದಿವ್ಯ ಪಟ್ಟಣಲ್ಲಾ | ಚಲ್ಪಗೋಪುರ ಮನುಧೊರೆರಿಲ್ಲಾ | ಅಲ್ಲಿ ಸಾಧುರ ನರಹಳಿದಲ್ಲಾ | ನಿಲ್ಲು ಕಾಲೂರಿ ಸುಖವಿಹುದೆಲ್ಲಾ 2 

ಅವರಿದ್ದುದೆ ಸ್ಥಳ ವಾರಣಾಸೀ | ಅಚರ ದರುಶನ ಪುಣ್ಯದ ರಾಶೀ | ಅವರ ನೆರೆಯಲ್ಲಿ ಸ್ವರ್ಗ ಸುಖದಾಶಿ | ಈ ವಾಕ್ಯ ಮಹಿಪತಿ ಜ ನಾಲಿಸಿ 3

***