Showing posts with label ಸಲ್ಲದೋ ಕೃಷ್ಣ ಸಲ್ಲದೋ ಸಿರಿವಲ್ಲಭ purandara vittala. Show all posts
Showing posts with label ಸಲ್ಲದೋ ಕೃಷ್ಣ ಸಲ್ಲದೋ ಸಿರಿವಲ್ಲಭ purandara vittala. Show all posts

Friday, 6 December 2019

ಸಲ್ಲದೋ ಕೃಷ್ಣ ಸಲ್ಲದೋ ಸಿರಿವಲ್ಲಭ purandara vittala

ಪುರಂದರದಾಸರು
ರಾಗ ಕಲ್ಯಾಣಿ ಅಟತಾಳ

ಸಲ್ಲದೊ ಕೃಷ್ಣ ಸಲ್ಲದೊ ||ಪ||
ಸಿರಿವಲ್ಲಭ ಇದ ನೋಡಿ ಪಾಲಿಸಬೇಕೋ ||ಅ||

ಬಿತ್ತಿ ಬೆಳೆಸಿ ತಲೆಯೆತ್ತಿದ ಪೈರನ್ನು
ಮತ್ತೆ ತುರುವಿಂಡು ಬಿಟ್ಟು ಮೆಲ್ಲಿಸುವದು ||

ಸಾವಿರ ಹೊನ್ನಿಕ್ಕಿ ಸದನವ ಸಾಧಿಸಿ
ಪಾವಕನುರಿಗೆ ನೀನೊಪ್ಪಿಸಿ ಕೊಡುವುದು ||

ಕುಶಲದಿ ಬಣ್ಣಿಸಿ ಬರೆದು ಚಿತ್ತಾರವ
ಮಸಿ ಮಣ್ಣು ಮಾಡಿ ನೀ ಕೆಡಿಸುವುದು ||

ಬಲು ಕಾಲ ಮುದ್ದಿಸಿ ಕಲಿಸಿ ಮಾತುಗಳ
ಗಿಳಿಯ ಸಾಕಿ ಬಾವುಗಗೆ ಒಪ್ಪಿಸುವುದು ||

ಕರುಣಿಸು ಗುರು ಪುರಂದರವಿಟ್ಠಲ ನಮ್ಮ
ಹಿರಿದು ಮಾಡಿ ಮತ್ತೆ ಕಿರಿದು ಮಾಡುವುದು ||
***

pallavi

sallado krSNa sallado

anupallavi

siri vallabha ida nODi pAlisa bEkO

caraNam 1

bitti beLesi taleyettida pairannu matte turuviNDu biTTu mellisuvadu

caraNam 2

sAvira honnikki sadanava sAdhisi pAvakanurige nInoppisi koDuvudu

caraNam 3

kushaladi baNNisi baredu cittArava masi maNNu mADi nI keDisuvudu

caraNam 4

balu kAla muddisi kalisi mAtugaLa giLiya sAki bAvugage oppisuvudu

caraNam 5

karuNisu guru purandara viTTala namma haridu mADi matte kiridu mADuvudu
***

ಸಲ್ಲದೋ ಕೃಷ್ಣ ಸಲ್ಲದೋ ಸಿರಿವಲ್ಲಭ ಇದನೋಡುಪಾಲಿಸಬೇಕೋ ಪ

ಬಿತ್ತಿ ಬೆಳೆಸಿ ತಲೆಯೆತ್ತಿದ ಪೈರನುಮತ್ತೆ ತುರುವಿಂಡನು ಬಿಟ್ಟು ಮೆಲ್ಲಿಸುವುದು 1

ಸಾವಿರ ಹೊನ್ನಿಕ್ಕಿ ಸದನವ ಸಾಧಿಸಿಪಾವಕನುರಿಗೆ ನೀನೊಪ್ಪಿಸಿ ಕೊಡುವುದು 2

ಕುಶಲದಿ ಬಣ್ಣಿಸಿ ಬರೆದು ಚಿತ್ತಾರವಮಸಿ ಮಣ್ಣ ಮಾಡಿ ನೀ ಕೆಡಿಸುವುದು 3

ಬಲುಕಾಲ ಮುದ್ದಿಸಿ ಕಲಿಸಿ ಮಾತುಗಳನುಗಿಳಿಯ ಸಾಕಿ ಬಾವುಗಗೆ ಒಪ್ಪಿಸುವುದು 4

ಕರುಣಿಸುಸಿರಿಪುರಂದರವಿಠಲ ನಮ್ಮಹಿರಿದು ಮಾಡಿ ಮತ್ತೆ ಕಿರಿದು ಮಾಡುವುದು 5
********