Showing posts with label ಹರಿದಾಸರಿಗಿನ್ನು ಸರಿಯುಂಟೆ ನರ purandara vittala. Show all posts
Showing posts with label ಹರಿದಾಸರಿಗಿನ್ನು ಸರಿಯುಂಟೆ ನರ purandara vittala. Show all posts

Saturday 7 December 2019

ಹರಿದಾಸರಿಗಿನ್ನು ಸರಿಯುಂಟೆ ನರ purandara vittala

ಪುರಂದರದಾಸರು
ಹರಿದಾಸರಿಗಿನ್ನು ಸರಿಯುಂಟೆ ನರ |ಹರಿಯ ನಂಬಿದವರಿಗೆ ಕೇಡುಂಟೆ ಮನುಜಾ ? ಪ.

ಮಾರಿಯ ಕೈಯಲಿ ನೀರ ಹೊರಿಸುವರು |ಘೋರ ಮಸಣಿಯಿಂದ ಕಸ ಬಳೆಸುವರು ||ಕ್ರೂರ ಮೃತ್ಯುವಿನ ಕೈ ಭತ್ತ ಕುಟ್ಟಿಸುವರು |ಜವನ ಕೈಯಲಿ ಜಂಗುಳಿ ಕಾಯಿಸುವರು 1

ಬೊಮ್ಮ ಬೀರ ಬೇತಾಳ ಜಟ್ಟಿಗರೆಲ್ಲ |ಕರ್ಮದ ಕಡಲೊಳು ಮುಳುಗಿರಲು ||ಒಮ್ಮೆ ಹರಿದಾಸರಪಾದ ಸೋಕಲು ಬೇಗ |ಕರ್ಮದ ಕಡಲಿಂದ ಕಡೆಹಾಯಿಸುವರು 2

ಜಕ್ಕಣಿ ಜಲದೇವರು ಮೊದಲಾದ |ಬಿಕ್ಕಾರಿ ದೈವವ ಪೂಜಿಸಲು ||ಲೋಕನಾಯಕಸಿರಿ ಪುರಂದರವಿಠಲನ |ಸಾಕಾರವಾದಂಥಪರಮಭಾಗವತರು3
**********