..
kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru
ಶ್ರೀ ಶುಕಮುನಿ ಸ್ತೋತ್ರ (ಗುಪ್ತ)
ಶರಣು ಶುಕಮುನಿರಾಯ ಶರಣು ಮಾಂಪಾಹಿ ಪ
ಕಾರ್ತಿಕ ಸಿತತದಿಗೆ ಗುರುಬ್ರಾಹ್ಮಿ ಶ್ರವಣದಲಿ
ಅತಿವಿಮಲ ತವರೂಪ ತೋರಿದಿಯೋ ಕರುಣಿ 1
ಬಲಿ ಶಕ್ರವರದ ಬಲಿ ಫಲಿಯನೀಕಂಡೆನ್ನ
ಪಾಲಿಪುದಕೆ ದಯದಿ ಬಲದಿಂದ ಬಂದ್ಯಾ 2
ವೇಧಪಿತ ಪ್ರಸನ್ನ ಶ್ರೀನಿವಾಸನ ಗುಣಗಾನ
ಸ್ವಾದು ಸುಧೆ ಸುರಿಸುತ್ತ ಶ್ರೀ ವಿಜಯ ಕೊಡುತಿ 3
|| ಶ್ರೀಮಧ್ವಾಂತರ್ಗತ ಕೃಷ್ಣಾರ್ಪಣಮಸ್ತು ||
***