ಕಾಖಂಡಕಿ ಶ್ರೀ ಕೃಷ್ಣದಾಸರು
ನಂಬಿ ನೆನೆಯೋ ಹರಿಯನಾಮ|ವಿಡಿದು ಘನ ಪ್ರೇಮಾ| ಭಾವಿಸೆಲೋ ನಿಷ್ಕಾಮಾ| ಇಂಬಾಗಿ ಹೊರೆವನು ನೇಮಾ ಮಂಗಳ ಧಾಮಾ ಪ
ಹೆಸರಿಟ್ಟು ಹೋಲಿಸಿ ಕರೆದಾಜಮಿಳಗ ವರದಾ| ನೋಡೆಲೋ ಹರಿ ಬಿರುದಾ| ವಸುಧಿಲಿ ಭಕುತಿಂದ ಬೆರೆದಾವಗೆ ನೆರದಾ 1
ಸಕಲಧರ್ಮಗಳಿಂದವ ಜಾರಿ ಯನ್ನ ಚರಣವ ಸಾರಿ| ಭಜಿಸೆಂದು ಉದಾರಿ| ಪ್ರಗಟದಿ ಅರ್ಜುನಗ ಸಾರಿದನೋ ಮುರಾರಿ2
ಇನ್ನೊಂದು ಸಾಧನವು ಸಲ್ಲಾ ಇದರಿಂದಧಿಕಿಲ್ಲಾ| ತಂದೆ ಮಹಿಪತಿ ಸೊಲ್ಲಾ| ಮನ್ನಿಸಿ ನಡೆಯಲು ಸುಲಭ ಕೈವಲ್ಯಾ 3
***