ಜಾನಕೀ ಮನೋಹರಾಯ ಜಯಮಗಳಂ
ಸೂನು ಪವನ ವಿಹಿತಾದರಾಯ ಶುಭಮಂಗಳಂ ಪ
ಮಕರ ಕುಂಡಲಯುಗಳ ಮಂಡಿತಗಂಡಸ್ತಳಾಯ
ಚಕಿತ ಮುನಿ ಶರಣ್ಯಾಯ ಜಯ ಮಂಗಳಂ
ಅಕಳಂಕ ಶಶಾಂಕ ಸಂನಿಭಾನನಾಯ ಜಲದನಿಲ
ಸುಕುಮಾರ ಶರೀರಾಯ ಶುಭಮಂಗಳಂ 1
ಗರ್ವಿತ ರಾವಣ ಕುಂಭಕರ್ಣ ವಿದ್ರಾವಣಾಯ
ಸರ್ವಲೋಕ ಶರಣ್ಯಾಯ ಜಯಮಂಗಳಂ
ಗೀರ್ವಾಣ ವಂದಿತಾಂಘ್ರಿಯುಗಾಯ ಸುe್ಞÁನ ಚ
ಕ್ಷುರ್ವಿದ್ಯಾ ಸ್ವರೂಪಾಯ ಶುಭಮಂಗಳಂ 2
ಜಲದಮೂಲ್ಯಮಣಿಸಿಂಹಾಸನ ಸಂಸ್ಥಿತಾಯ ಕೋ
ಸಲನಗರ ನಿಲಯಾಯ ಜಯ ಮಂಗಳಂ
ಜಲಜದಳಲೋಚನಾಯ ಸಪರಿವಾರಾಯ ಭಕ್ತ
ಸುಲಭ ಶ್ರೀ ರಾಮಾಯ ಶುಭಮಂಗಳಂ 3
****